- ಮಾದಿಗ ಸಮಾಜ ಸಂಟನೆಗಳ ಒಕ್ಕೂಟದ ಆಗ್ರಹ
ಕಲಬುರಗಿ: ಕಾಂಗ್ರೆಸ್ ಹಿರಿಯ ಮುಖಂಡ, ಸಚಿವ ಕೆ.ಎಚ್. ಮುನಿಯಪ್ಪ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಕಾರ್ಯಾಭಾರ ನೀಡಬೇಕು ಎಂದು ಆಗ್ರಹಿಸಿ ಮಾದಿಗ ಸಮಾಜದ ವಿವಿಧ ಸಂಟನೆಗಳ ಒಕ್ಕೂಟ ನೇತೃತ್ವದಲ್ಲಿ ನಗರದಲ್ಲಿ ಶುಕ್ರವಾರ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ್ ವಲ್ಲಭಭಾಯ್ ಪಟೇಲ್ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ರ್ಯಾಲಿ ನಡೆಸಿದ ಮಾದಿಗ ಸಮುದಾಯದ ಮುಖಂಡರು ಹಾಗೂ ಕಾರ್ಯಕರ್ತರು, ರಾಜ್ಯ ಸರ್ಕಾದ ವಿರುದ್ಧ ೂಷಣೆ ಕೂಗಿದರು.
ಏಳು ಬಾರಿ ಸಂಸದ, 2 ಬಾರಿ ಕೇಂದ್ರ ಸಚಿವ, ಒಂದು ಬಾರಿ ರಾಜ್ಯದಲ್ಲಿ ಸಚಿವರಾಗಿದ್ದು, ಕೆ.ಎಚ್.ಮುನಿಯಪ್ಪ ಕಾಂಗ್ರೆಸ್ ಶಿಸ್ತಿನ ಸಿಪಾಯಿಯಾಗಿದ್ದು, ಮಾದಿಗ ಸಮಾಜದ ಹಿರಿಯರಾದ ಅವರಿಗೆ ಸಮಾಜ ಕಲ್ಯಾಣ ಇಲಾಖೆ ಸಚಿವರನ್ನಾಗಿ ಮಾಡಬೇಕು ಎಂದು ಆಗ್ರಹಿಸಿದರು.
ದಸಂಸ ಕಾರ್ಯಾಧ್ಯ ದಶರಥ ಕಲಗುರ್ತಿ, ಮಾದಾರ ಚನ್ನಯ್ಯ ಸೇವಾ ಸಮಿತಿ ಜಿಲ್ಲಾ ಅಧ್ಯ ಮಲ್ಲಿಕಾರ್ಜುನ ಜಿನ್ನಕೇರಿ, ರಾಜು ಎಸ್.ಕಟ್ಟಿಮನಿ, ರಮೇಶ ವಾಡೇಕರ, ಚಂದ್ರಕಾಂತ ನಾಟೀಕರ, ಸಚಿನ್ ಕಟ್ಟಿಮನಿ, ಸುಂದರ ಸಾಗರ, ಮಲ್ಲು ಕೊಡಂಬಲ್, ಬಸವರಾಜ ಕಾಳಗಿ, ಬಸವರಾಜ ಬಾಡ್ಯಾಳ, ರಮಾಕಾಂತ ಪೂಜಾರಿ, ರಾಜು ಅತನೂರ, ಶ್ರೀನಿವಾಸ ರಾಮನಾಳಕರ, ಮಂಜುನಾಥ ಲೇಗಂಟಿ, ಬಸವರಾಜ ಜವಳಿ ಇತರರಿದ್ದರು.