gulbarga univercity  
ಕಲಬುರಗಿ

ಗುವಿವಿ ಗುತ್ತಿಗೆ ನೌಕರರಿಗೆ ನ್ಯಾಯ ನೀಡಿ: ಸಿದ್ದಲಿಂಗ ಸ್ವಾಮೀಜಿ ಆಗ್ರಹ

ಪ್ರಮುಖ ಮುಖ್ಯಾಂಶಗಳು

  • ಶ್ರೀ ಸಿದ್ಧಲಿಂಗ ಸ್ವಾಮೀಜಿ ಆಗ್ರಹ
  • ವಿವಿ ಅಕ್ರಮಗಳ ಗೂಡು ಎಂದು ಆರೋಪ
ಕಲಬುರಗಿ: ಗುಲ್ಬರ್ಗ ವಿಶ್ವವಿದ್ಯಾಲಯದಲ್ಲಿ 281 ಹೊರಗುತ್ತಿಗೆ ಆಧಾರದಲ್ಲಿ ಕಾರ್ಯನಿರ್ವಹಿಸುತ್ತಿರುವ ನೌಕರರನ್ನು ದಿಢೀರ್​ ಎಂದು ಕೆಲಸದಿಂದ ಕಿತ್ತು ಹಾಕಿದ್ದು, ಅಕ್ಷಮ್ಯ. ಹಲವು ವರ್ಷದಿಂದ ಕೆಲಸ ಮಾಡುತ್ತಿರುವವರನ್ನು ಹೀಗೆ ತೆಗೆದು ಹಾಕಿದ್ದು ಸರಿಯಲ್ಲ ಎಂದು ಶಿವಸೇನಾ ಪಕ್ಷದ ರಾಜ್ಯಾಧ್ಯಕ್ಷ ಆಂದೋಲಾದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಖಂಡಿಸಿದರು.
ಈ ಬಗ್ಗೆ ಕುಲಪತಿಗೆ ನೌಕರರು ಪ್ರಶ್ನಿಸಿದರೆ ಇನ್ನು ನಾಲ್ಕು ವರ್ಷದಲ್ಲಿ ವಿಶ್ವವಿದ್ಯಾಲಯ ಮುಚ್ಚುತ್ತದೆ. ನೀವೇನು ಮಾಡುವವರಿದ್ದೀರಿ ಹೋಗಿ ಎಂದು ಬೇಜವಾಬ್ದಾರಿ ಹೇಳಿಕೆ ನೀಡಿದ್ದಾರೆ. ಎಂಟು ದಿನದಿಂದ ವಿವಿಯಲ್ಲಿ ಧರಣಿ ನಡೆಸುತ್ತಿದ್ದು, ಮಹಿಳಾ ನೌಕರರು ಶೌಚಗೃಹ ಬಳಸದಂತೆ ಶೌಚಗೃಹಕ್ಕೆ ಕೀಲಿ ಹಾಕಿಸುವ ಕೀಳು ಮಟ್ಟದ ಕೆಲಸವನ್ನು ವಿವಿ ಆಡಳಿತ ಮಾಡಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದರು.
ಉಸ್ತುವಾರಿ ಸಚಿವರಿಗೆ ಕರೆ ಮಾಡಿದರೆ ಯಾಕೆ ತೊಂದರೆ ಕೊಡುತ್ತೀರಿ ಎಂದು ೋನ್​ ಕಟ್​ ಮಾಡುತ್ತಿದ್ದಾರೆ. ಇದು ಉಸ್ತುವಾರಿ ಸಚಿವರ ಜವಾಬ್ದಾರಿ ಅಲ್ಲವೇ?. ಅದರಲ್ಲೂ ನೌಕರರಲ್ಲಿ ಅತಿ ಹೆಚ್ಚು ದಲಿತ ಸಮುದಾಯದವರೇ ಇದ್ದಾರೆ. ಆದರೆ ಹೊರಗುತ್ತಿಗೆ ಆಧಾರದಲ್ಲಿನ ನೌಕರರನ್ನು ತೆಗೆದು ಹಾಕಿ, ಹಣ ಪಡೆದು ಮತ್ತೊಬ್ಬರನ್ನು ನೇಮಿಸುವ ಷಡ್ಯಂತ್ರ ಇದರ ಹಿಂದೆ ಅಡಗಿದೆ ಎಂದು ಆರೋಪಿಸಿದರು.
ಅಕ್ರಮ ಗಣಿಗಾರಿಕೆಗೆ ಬಾಲಕ ಬಲಿ: ವಾಡಿ ಬಳಿಯ ಡಿಗ್ಗಿ ತಾಂಡಾದಲ್ಲಿ ಅಕ್ರಮ ಗಣಿಗಾರಿಕೆಗಾಗಿ ತೋಡಿದ್ದ ಹೊಂಡದಲ್ಲಿ ಬಿದ್ದು, ಯುವಕ ಮೃತಪಟ್ಟಿದ್ದಾನೆ. ತಹಸೀಲ್ದಾರ್​, ಪೊಲೀಸರು ಅಕ್ರಮ ಗಣಿಗಾರಿಕೆ ದಾಖಲೆ ನೀಡುತ್ತಿಲ್ಲ. ಅಕ್ರಮ ಗಣಿಗಾರಿಕೆ ತಡೆಯಿರಿ ಎಂದು ಹಲವು ಬಾರಿ ಮನವಿ ಮಾಡಿದರೂ ಕ್ರಮ ಕೈಗೊಳ್ಳದ ಜಿಲ್ಲಾಧಿಕಾರಿ, ತಹಸೀಲ್ದಾರ್​, ಪೊಲೀಸರೇ ಸಾವಿಗೆ ಕಾರಣರಾಗಿದ್ದು, ಅವರ ವಿರುದ್ಧವೇ ಎ್​ಐಆರ್​ ದಾಖಲಿಸಬೇಕು ಎಂದು ಆಗ್ರಹಿಸಿದರು. ಬಾಲಕನ ಸಾವಿನ ನಂತರ ಪೊಲೀಸರು ಮನುಷ್ಯತ್ವ ಮೀರಿ ವರ್ತಿಸುತ್ತಿದ್ದಾರೆ. ಪಶ್ಚಿಮ ಬಂಗಾಳದ ಮಮತಾ ಮಾದರಿಯಲ್ಲಿ ಚಿತ್ತಾಪುರದಲ್ಲಿ ಅಂಧಾ ದರ್ಬಾರ್​, ದೌರ್ಜನ್ಯ ನಡೆಯುತ್ತಿದ್ದು, ಇದಕ್ಕೆ ಕಡಿವಾಣ ಬೀಳಲಿದೆ ಎಂದರು.
ಶಿವಸೇನಾ ಜಿಲ್ಲಾಧ್ಯಕ್ಷ ಗುರುಶಾಂತ ಟೆಂಗಳಿ, ರಾಕೇಶ ಜಮಾದಾರ, ಪ್ರದಿಪ ಹೇರೂರ, ಪ್ರಶಾಂತ, ರೋಹಿತ್​ ಪಿಸ್ಕೆ ಇತರರಿದ್ದರು.
ಕಾನೂನು ವಿರೋಧಿ ಪ್ರಿಯಾಂಕ್​: ಗುಲ್ಬರ್ಗ ವಿಶ್ವವಿದ್ಯಾಲಯದ ಮೌಲ್ಯಮಾಪನ ಕುಲಸಚಿವ ಸ್ಥಾನಕ್ಕೆ ಅರ್ಹರಲ್ಲದ ಎನ್​.ಜಿ.ಕಣ್ಣೂರ್​ರನ್ನು ನೇಮಕ ಮಾಡುವಂತೆ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್​ ರ್ಖಗೆ ಶಿಾರಸ್ಸು ಪತ್ರ ನೀಡಿ, ಕಾನೂನು ವಿರೋಧಿಯಾಗಿ ನಡೆದುಕೊಂಡಿದ್ದಾರೆ ಎಂದು ಶ್ರೀ ಸಿದ್ಧಲಿಂಗ ಸ್ವಾಮೀಜಿ ಆರೋಪಿಸಿದರು. ನಿಯಮದಂತೆ ಮೌಲ್ಯಮಾಪನ ಕುಲಸಚಿವರ ಹುದ್ದೆಗೆ ಎನ್​.ಜಿ.ಕಣ್ಣೂರ ಅರ್ಹತೆ ಇಲ್ಲ ಎಂಬುದನ್ನು ಸ್ವತ@ ವಿಶ್ವವಿದ್ಯಾಲಯದ ಕುಲಸಚಿವರೇ ಉನ್ನತ ಶಿಕ್ಷಣ ಇಲಾಖೆಗೆ ಸ್ಪಷ್ಟಪಡಿಸಿದ್ದಾರೆ. ಇವರ ವಿರುದ್ಧ ಲೋಕಾಯುಕ್ತ ಪೊಲೀಸ್​ನಲ್ಲಿ ದೂರು ಸಹ ಇದೆ ಎಂದು ತಿಳಿಸಿದೆ. ಅನರ್ಹರನ್ನು ನೇಮಿಸುವ ದೊಡ್ಡ ಜಾಲವೇ ಪ್ರಿಯಾಂಕ್​ ರ್ಖಗೆ ತಂಡದ ಜತೆಗೆ ಕೆಲಸ ಮಾಡುತ್ತಿದೆ. ಹೊರಗುತ್ತಿಗೆ ನೌಕರರ ಸಮಯ ಮುಗಿದಿದೆ ಎನ್ನುವ ಗುಲ್ಬರ್ಗ ವಿವಿ ಆಡಳಿತವೂ ಮೌಲ್ಯಮಾಪನ ಕುಲಸಚಿವ ಅರ್ಹನಲ್ಲ ಎಂಬುದನ್ನು ಪರಿಗಣಿಸಿ, ಕಿತ್ತೊಗೆಯಲಿ ಎಂದು ಸವಾಲು ಹಾಕಿದರು.