ನಿಡಗುಂದಾದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಹಾಗೂ ಸುಮಂಗಲೆಯರಿಗೆ ಉಡಿತುಂಬುವ ಕಾರ್ಯಕ್ರಮವನ್ನು ಶ್ರೀ ಕರುಣೇಶ್ವರ ಶಿವಾಚಾರ್ಯರು ಉದ್ಘಾಟಿಸಿದರು. ಸಂತೋಷಿರಾಣಿ ಪಾಟೀಲï ತೆಲ್ಕೂರ, ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ಬಾಬು ಕುಂಬಾರ, ನಿಖಿತಾ ಕುಂಬಾರ, ನೀಲಮ್ಮ ಸ್ವಾಮಿ, ಲಲಿತಾ ಮಳ್ಳೂರ ಇತರರಿದ್ದರು.
- ಸಂತೋಷಿರಾಣಿ ಪಾಟೀಲ್ ಸಲಹೆ
- ನಿಡಗುಂದಾದಲ್ಲಿ ಕಾರ್ತಿಕ ದೀಪೋತ್ಸವ, ಉಡಿ ತುಂಬುವ ಕಾರ್ಯಕ್ರಮ
ನಿಡಗುಂದಾದಲ್ಲಿ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವದಲ್ಲಿ ಪಾಲ್ಗೊಂಡಿರುವ ಭಕ್ತರು.
ಚಿಂಚೋಳಿ: ಕAಚಾಳಕುAಠಿ ಮಠವೂ ಮಹಿಳೆಯರ ತವರು ಮನೆಯಾಗಿದ್ದು, ಶ್ರೀಗಳು ತಂದೆ-ತಾಯಿ ಹಾಗೂ ಗುರುವಾಗಿ ಸನ್ಮಾರ್ಗದ ದಾರಿ ತೋರುತ್ತಿz್ದÁರೆ ಎಂದು ಸಂತೋಷಿರಾಣಿ ಪಾಟೀಲï ತೆಲ್ಕೂರ ಹೇಳಿದರು.
ನಿಡಗುಂದಾದ ಕಂಚಾಳಕುAಠಿ ನಂದೀಶ್ವರ ಮಠದಲ್ಲಿ ಭಾನುವಾರ ಹಮ್ಮಿಕೊಂಡಿದ್ದ ಕಾರ್ತಿಕ ದೀಪೋತ್ಸವ ಹಾಗೂ ಸುಮಂಗಲೆಯರಿಗೆ ಉಡಿ ತುಂಬುವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಕಾರ್ತಿಕ ವಿಷ್ಣು, ಶಿವನ ಪ್ರಿಯ ಮಾಸವಾಗಿದೆ. ಇಂತಹ ಸಂದAರ್ಭದಲ್ಲಿ ದೀಪೋತ್ಸವ ಆಚರಿಸುವ ಮೂಲಕ ಅಂಧಕಾರ, ಮೂಢನಂಬಿಕೆ ಅಳಿಸಿ ಸನ್ಮಾರ್ಗದಲ್ಲಿ ಸಾಗಬೇಕು ಎಂದರು.
ಶ್ರೀ ಕರುಣೇಶ್ವರ ಶಿವಾಚಾರ್ಯರು ಮನೆ- ಮನೆಗಳಿಗೆ ತೆರಳಿ ದುಶ್ಚಟಗಳನ್ನು ತಮ್ಮ ಜೋಳಿಗೆಯಲ್ಲಿ ಹಾಕಿಕೊಂಡು ಸನ್ಮಾರ್ಗದ ದಾರಿ ತೋರುತ್ತಿz್ದÁರೆ. ತಾಯಂದಿರು ಜಾಗೃತರಾಗಬೇಕು. ಮೊಬೈಲï, ಟಿವಿ ಬಿಟ್ಟು ಮಕ್ಕಳೊಂದಿಗೆ ಸಮಯ ಕಳೆಯಬೇಕು. ಉತ್ತಮ ಸಂಸ್ಕಾರ ನೀಡುವುದರ ಜತೆಗೆ ದೇಶಾಭಿಮಾನ ಹಾಗೂ ಧರ್ಮ ಜಾಗೃತಿ ಮೂಡಿಸಬೇಕು ಎಂದು ಕರೆ ನೀಡಿದರು.
ಪಿಡಿಒ ರೇಣುಕಾ, ಜಗದೇವಿ, ಬಾಬು ಎಸ್.ಕುಂಬಾರ ಮಾತನಾಡಿದರು.
ಪೀಠಾಧಿಪತಿ ಶ್ರೀ ಕರುಣೇಶ್ವರ ಶಿವಾಚಾರ್ಯರು ದಿವ್ಯ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.
ಚಂದನಕೇರಾದ ಶ್ರೀ ಅಭಿನವ ರಾಚೋಟೇಶ್ವರ ಶಿವಾಚಾರ್ಯ, ನಿಖಿತಾ ಕುಂಬಾರ, ನೀಲಮ್ಮ ಸ್ವಾಮಿ, ಲಲಿತಾ ಮಳ್ಳೂರ, ಈರಮ್ಮ ಸ್ವಾಮಿ, ಅನುಸೂಯ ಶಂಕರ, ಅಯ್ಯಣ್ಣ ಮುತ್ಯಾ, ಶರಣು ಶಂಕರ, ಮುಕುಂದ ದೇಶಪಾಂಡೆ, ಜಗದೇವಿ ಭೂತಪುರ, ಜಗದೇವಮ್ಮ, ಸದಾನಂದ, ಶಿವಾಜಿ ಡೊಳಕರ್, ರವೀಂದ್ರ ಕನಕೇರಿ, ಲಿಂಗಶೆಟ್ಟಿ ತಟ್ಟೆಪಲ್ಲಿ, ಮಲ್ಲಿಕಾರ್ಜುನ ಕೊಡದೂರ, ಸಂಗಯ್ಯ ಸ್ವಾಮಿ, ನಾಗೇಂದ್ರಪ್ಪ ಶಿರೋಳ್ಳಿ, ಸೂರ್ಯಕಾಂತ ಬಟಗೇರಾ, ರೇಣುಕಾ, ಬಸವರಾಜ ಕೇರಳ್ಳಿ, ಶಿವಕುಮಾರ ಅಂಬಲಗಿ, ಲಕ್ಷಿö್ಮÃ ಕೊರವಿ, ನರಸಮ್ಮ ಅವಂಟಿ, ಉಮಾ ಪಾಟೀಲ್, ಸಿದ್ದಲಿಂಗ ಗೌತಮ, ಅವಿನಾಶ ಗೋಸೂಲ್ ಇತರರಿದ್ದರು.
ಶ್ರೀಮಠದ ಶಿP್ಷÀಣ ಸಂಸ್ಥೆಯ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನಸೆಳೆದವು. ಬಳಿಕ ಸುಮಂಗಲೆಯರಿಗೆ ಉಡಿ ತುಂಬಲಾಯಿತು. ಆಕಾಶದಲ್ಲಿ ಜ್ಯೋತಿ ಹಾರಿಸುವ ಮೂಲಕ ಭಕ್ತರು ಸಹಸ್ರಾರು ದೀಪ ಬೆಳಗಿಸಿ ಪುನೀತರಾದರು.
ಚಿಂಚೋಳಿ ಕ್ಷೇತ್ರವು ಮದ್ಯ ಹಾಗೂ ಬಯಲುಶೌಚ ಮುಕ್ತವಾಗಬೇಕು. ಈ ನಿಟ್ಟಿನಲ್ಲಿ ಪ್ರತಿ ಹಳ್ಳಿಗೂ ಭೇಟಿ ನೀಡಿ ಜಾಗೃತಿ ಮೂಡಿಸುವೆ. ಮಕ್ಕಳು ತಂದೆ-ತಾಯಿ ಹಾಗೂ ಗುರು-ಹಿರಿಯರ ಮಾರ್ಗದಲ್ಲಿ ಸಾಗಬೇಕು. ದುಶ್ಚಟಗಳನ್ನು ಬಿಟ್ಟು, ಮಡದಿ ಮಕ್ಕಳನ್ನು ಪೋಷಿಸಬೇಕು. ಭಯ, ಭಕ್ತಿಯಿಂದ ಬದುಕು ರೂಪಿಸಿಕೊಳ್ಳಬೇಕು.
| ಶ್ರೀ ಕರುಣೇಶ್ವರ ಶಿವಾಚಾರ್ಯಕಂಚಾಳ ಕುಂಠಿ ನಂದೀಶ್ವರ ಮo, ನಿಡಗುಂದಾ