ಕಲಬುರಗಿ: ರಾಯಚೂರು ಸಮೀಪದ ಶಕ್ತಿನಗರದಲ್ಲಿರುವ ಕರ್ನಾಟಕ ವಿದ್ಯುತ್ ನಿಗಮ ನಿಯಮಿತದ (KPCL) ರಾಯಚೂರು ಶಾಖೋತ್ಪನ್ನ ವಿದ್ಯುತ್ ಸ್ಥಾವರಕ್ಕೆ (RTPS) ಜೆಸ್ಕಾಂ ಅಧ್ಯಕ್ಷ ಪ್ರವೀಣ ಪಾಟೀಲ್ ಹರವಾಳ ಗುರುವಾರ ಭೇಟಿ ನೀಡಿ, ವಿದ್ಯುತ್ ಉತ್ಪಾದನೆಯ ಪ್ರಕ್ರಿಯೆ ಹಾಗೂ ಸ್ಥಾವರದ ಕಾರ್ಯನಿರ್ವಹಣೆಯ ಕುರಿತು ಮಾಹಿತಿ ಪಡೆದುಕೊಂಡರು.
ವಿದ್ಯುತ್ ಉತ್ಪಾದನೆಗಾಗಿ ಹಗಲಿರುಳು ಶ್ರಮಿಸುವ ಪ್ರತಿಯೊಬ್ಬ ಅಧಿಕಾರಿ, ಇಂಜಿನಿಯರ್, ತಾಂತ್ರಿಕ ಸಿಬ್ಬಂದಿ ಹಾಗೂ ಕಾರ್ಮಿಕರ ಪರಿಶ್ರಮ ಮತ್ತು ಸಮರ್ಪಣ ಕಾರ್ಯವನ್ನು ಶ್ಲಾಘಿಸಿದರು.
ವಿದ್ಯಾರ್ಥಿಗಳು ಇಂತಹ ಸ್ಥಾವರಗಳಿಗೆ ಭೇಟಿ ನೀಡಿ, ವಿದ್ಯುತ್ ಉತ್ಪಾದನೆಯ ವಿಧಾನ, ಅದರ ಹಿಂದಿರುವ ತಂತ್ರಜ್ಞಾನ ಮತ್ತು ಸಿಬ್ಬಂದಿಯ ಪರಿಶ್ರಮವನ್ನು ನೇರವಾಗಿ ತಿಳಿದುಕೊಳ್ಳುವಂತೆ ಪ್ರೋತ್ಸಾಹಿಸುತ್ತೇನೆ ಎಂದು ಹೇಳಿದರು.
ಅಪಾರ ಪರಿಶ್ರಮ ಮತ್ತು ಅಮೂಲ್ಯ ಸಂಪನ್ಮೂಲಗಳ ಮೂಲಕ ಉತ್ಪಾದನೆಯಾಗುವ ವಿದ್ಯುತ್ ಅನ್ನು ವ್ಯರ್ಥ ಮಾಡದೆ, ಜವಾಬ್ದಾರಿಯಿಂದ ಬಳಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ವಿದ್ಯುತ್ ಉಳಿಸಿ, ಭವಿಷ್ಯವನ್ನು ಬೆಳಗಿಸೋಣ ಎಂಬ ಆಶ್ರಯ ವ್ಯಕ್ತಪಡಿಸಿದರು.