ಮಳೆಗಾಗಿ ಚಂದಾಪುರದ ಗಂಗುನಾಯಕ ತಾಂಡಾದಲ್ಲಿ ಕತ್ತೆಗಳ ಮದುವೆ ಮಾಡಿಸಿ ಮೆರವಣಿಗೆ ನಡೆಸಲಾಯಿತು.
- ಸೇವಾಲಾಲ್, ಭವಾನಿ ಮಂದಿರದಲ್ಲಿ ವಿವಾಹ
- ಪ್ರಮುಖ ಬೀದಿಗಳಲ್ಲಿ ಭವ್ಯ ಮೆರವಣಿಗೆ
ಚಿಂಚೋಳಿ: ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆ ಮಳೆರಾಯನ ಮನಸ್ಸು ಗೆಲ್ಲಲು ಮತ್ತು ಉತ್ತಮ ಮಳೆಯಾಗಲಿ ಎಂದು ಪ್ರಾರ್ಥಿಸಿ ಗಂಗುನಾಯಕ ತಾಂಡಾದಲ್ಲಿ ಜನರು ಕತ್ತೆಗಳ ಮದುವೆ ಮಾಡಿಸುವ ಮೂಲಕ ವಿಶೇಷ ಪ್ರಾರ್ಥನೆ ಸಲ್ಲಿಸಿದರು.
ಬೆಳಗ್ಗೆ ಗ್ರಾಮದ ಹಿರಿಯರು ಮತ್ತು ಯುವಕರು ಸೇವಾಲಾಲ್ ಮಂದಿರದಲ್ಲಿ ಸೇರಿದರು. ಬಳಿಕ ಎರಡು ಕತ್ತೆಗಳನ್ನು ತಂದು, ಸಾಂಪ್ರದಾಯಿಕವಾಗಿ ಅರಶಿಣ-ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಸಿಂಗರಿಸಿದರು. ವಧು-ವರರಂತೆ ಅಲಂಕಾರಗೊAಡ ಕತ್ತೆಗಳಿಗೆ ಮಂಗಲವಾದ್ಯಗಳ ಮೂಲಕ ಶಾಸ್ತೊçÃಕ್ತವಾಗಿ ಮದುವೆ ನೆರವೇರಿಸಲಾಯಿತು. ತಾಂಡಾದ ಮಹಿಳೆಯರು ಮಂಗಳಗೀತೆಗಳನ್ನು ಹಾಡುವ ಮೂಲಕ ಮದುವೆ ಕಳೆ ಹೆಚ್ಚಿಸಿದರು. ಬಳಿಕ ಗ್ರಾಮದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ನಡೆಸಲಾಯಿತು.
ಮದುವೆಯ ನಂತರ ಗ್ರಾಮಸ್ಥರೆಲ್ಲರೂ ಸೇರಿ ಸಾಂಪ್ರದಾಯಿಕ ಪದ್ಧತಿಯಂತೆ ಮನೆಗಳಿಗೆ ತೆರಳಿ ಜೋಳ, ಧಾನ್ಯಗಳನ್ನು ಭಿಕ್ಷೆಯ ರೂಪದಲ್ಲಿ ಸಂಗ್ರಹಿಸಿದರು. ಹೀಗೆ ಸಂಗ್ರಹಿಸಿದ ಧಾನ್ಯಗಳಿಂದ ಅಡುಗೆ ಸಿದ್ಧಪಡಿಸಿ, ವರುಣ ದೇವನಿಗೆ ನೈವೇದ್ಯ ಅರ್ಪಿಸಿದರು. ಬಳಿಕ ಎಲ್ಲರೂ ಸೇರಿ ಪ್ರಸಾದ ಸ್ವೀಕರಿಸಿದರು.
ಪ್ರಮುಖರಾದ ಅಶೋಕ ಚವ್ಹಾಣ್, ಸುಧಾಕರ ಪವಾರ್, ರಾಜು ಚವ್ಹಾಣ್, ತಿಪ್ಪಣ್ಣ ಗುಣಾಜಿ, ಗೋವಿಂದ ಪವಾರ್, ರವಿಪ್ರಕಾಶ ನರನಾಳ, ಕಿಶನ ಕಾರಭಾರಿ, ರಾಜಪ್ಪ, ಸುಭಾಷ, ಭೀಮಶಾ, ಬಾಲು ಪೂಜಾರಿ, ಹಣಮಂತ, ಗೋಪಾಲ, ಅಂಬರೀಷ, ಸುರೇಶ ಮಂದರಗಿ, ನಾಗಪ್ಪ ಧನಶ್ರೀ ಇತರರಿದ್ದರು.
"
ಪ್ರತಿ ಬಾರಿ ಮಳೆ ಕೈಕೊಟ್ಟಾಗ ನಮ್ಮ ಹಿರಿಯರು ಈ ರೀತಿ ಆಚರಣೆಗಳನ್ನು ಮಾಡುತ್ತಿದ್ದರು. ಕತ್ತೆಗಳ ಮದುವೆ ಮಾಡಿದರೆ ವರುಣ ದೇವನಿಗೆ ಕರುಣೆ ಬಂದು ಮಳೆ ಸುರಿಸುತ್ತಾನೆ ಎನ್ನುವ ದೃಢ ನಂಬಿಕೆ ನಮ್ಮದಾಗಿದೆ. ಈ ಬಾರಿ ಉತ್ತಮ ಮಳೆಯಾಗಿ ಕೆರೆ-ಕಟ್ಟೆಗಳು ತುಂಬಲಿ, ರೈತರ ಮೊಗದಲ್ಲಿ ಮಂದಹಾಸ ಮೂಡಲಿ ಎಂದು ದೇವರಲ್ಲಿ ಪ್ರಾರ್ಥಿಸಿz್ದೆÃವೆ.
| ಅಶೋಕ ಚವ್ಹಾಣ್, ನಿವಾಸಿ, ಗಂಗುನಾಯಕ ತಾಂಡಾ