ಕಲಬುರಗಿ: ಅಧಿಕಾರಿಗಳ ನಿರಂತರ ವರ್ಗಾವಣೆಯಿಂದ ಜೈಲಿನಲ್ಲಿ ವಿವಿಧ ಕೆಲಸಗಳು ಬಾಕಿ ಉಳಿದಿವೆ. ಹೈಟೆನ್ಶನ್ ವೈರ್ ಸೇರಿ ವಿವಿಧ ಯೋಜನೆಗಳನ್ನು ಪರಿಣಾಮಕಾರಿ ಜಾರಿಗೆ ಅಧಿಕಾರಿಗಳು ಒಂದೇ ಕಡೆ ದೀರ್ಘಾವಧಿ ಕಾರ್ಯನಿರ್ವಹಿಸುವ ಅಗತ್ಯವಿದೆ ಎಂದು ರಾಜ್ಯ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಡಿಜಿಪಿ ಅಲೋಕಕುಮಾರ್ ಹೇಳಿದರು.
ನಗರ ಹೊರವಲಯದ ಕೇಂದ್ರ ಕಾರಾಗೃಹಕ್ಕೆ ಶುಕ್ರವಾರ ಭೇಟಿ ನೀಡಿ ಪರಿಶೀಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಎಲ್ಲ ಜೈಲುಗಳಲ್ಲಿ ಅಗತ್ಯ ಸುಧಾರಣೆ ಜತೆ ಭದ್ರತೆ, ಶಿಸ್ತು ಮತ್ತು ಕೈದಿಗಳ ಪುನರ್ವಸತಿ ಕಾರ್ಯಗಳಿಗೆ ಆದ್ಯತೆ ನೀಡುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದು, ಕಾರಾಗೃಹಗಳಲ್ಲಿ ಕಂಡುಬರುವ ನ್ಯೂನತೆ ಸರಿಪಡಿಸಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ತಿಳಿಸಿದರು.
ರಾಜ್ಯಾದ್ಯಂತ ಕಾರಾಗೃಹಗಳ ಭದ್ರತಾ ವ್ಯವಸ್ಥೆ ಮತ್ತಷ್ಟು ಬಲಪಡಿಸಲಾಗುತ್ತಿದೆ. ಕಲಬುರಗಿಯಲ್ಲಿ ಜು.14ರಂದು ಮೂವರು ಕೈದಿಗಳ ಪರಾರಿ ನಡೆಯಬಾರದಿತ್ತು. ಆದರೂ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಎಂಟು ಸಿಬ್ಬಂದಿಯನ್ನು ಅಮಾನತು ಮಾಡಲಾಗಿದೆ. ಕಲಬುರಗಿ ಮಾತ್ರವಲ್ಲ ಬಳ್ಳಾರಿ, ಗೋಕಾಕ್, ಬೆಳಗಾವಿ ಇತರೆಡೆ ಕೈದಿಗಳ ಪರಾರಿ ಪ್ರಕರಣ ನಡೆದಿವೆ. ಇಂತಹ ಟನೆ ಮರುಕಳಿಸದಂತೆ ವ್ಯವಸೆ ಬಲಪಡಿಸುವ ಅಗತ್ಯವಿದೆ ಎಂದರು.
ಜನವರಿಯಲ್ಲಿ ಬೆಳಕಿಗೆ ಬಂದ ಗಾಂಜಾ ಕೇಸ್ ನಂತರ ಯಾವುದೇ ಪ್ರಕರಣ ವರದಿಯಾಗಿಲ್ಲ. ಕ್ರಮ ಕೈಗೊಂಡಿದ್ದು, ಸಂಬಂಧಿತ ಸಿಬ್ಬಂದಿಯನ್ನು ಮರು ನೇಮಕ ಮಾಡಿಲ್ಲ. ಜನವರಿ ನಂತರ ಗಂಭೀರ ಲೋಪಗಳು ಕಂಡುಬಂದಿಲ್ಲ. ಕಾರಾಗೃಹ ಸಿಬ್ಬಂದಿ ಹೆಚ್ಚಿನ ಎಚ್ಚರಿಕೆ ವಹಿಸಬೇಕಾಗಿದ್ದು, ಸೇವೆಯಲ್ಲಿರುವಾಗ ರ್ನಿಲಕ್ಷ$್ಯಕ್ಕೆ ಅವಕಾಶ ಇರಬಾರದು ಎಂದು ಹೇಳಿದರು.
867 ಹುದ್ದೆ ನೇಮಕಕ್ಕೆ ಅಧಿಸೂಚನೆ: ರಾಜ್ಯದ ಕಾರಾಗೃಹ ಇಲಾಖೆಯಲ್ಲಿ ಖಾಲಿ ಇರುವ 867 ಹುದ್ದೆಗಳ ನೇಮಕಾತಿಗೆ ಶ್ರೀ ಅಧಿಸೂಚನೆ ಪ್ರಕಟವಾಗುವ ಸಾಧ್ಯತೆ ಇದ್ದು, ಕಲ್ಯಾಣ ಕರ್ನಾಟಕಕ್ಕೆ 400 ಮೀಸಲಾಗಿವೆ ಎಂದು ರಾಜ್ಯ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಡಿಜಿಪಿ ಅಲೋಕಕುಮಾರ್ ಹೇಳಿದರು. ನಿವೃತ್ತ ಸೈನಿಕರ ಸೇವೆ ಬಳಸಿಕೊಳ್ಳುವ ಪ್ರಯತ್ನ ನಡೆದಿದ್ದು, 550 ಸಿಬ್ಬಂದಿ ಅಗತ್ಯವಿದ್ದರೂ 220 ಮಂದಿ ಮಾತ್ರ ಮುಂದೆ ಬಂದಿದ್ದಾರೆ. ಸಂಬಳ ಕಡಿಮೆ ಎಂಬ ಕಾರಣಕ್ಕೆ ಹಲವರು ಆಸಕ್ತಿ ತೋರಿಸುತ್ತಿಲ್ಲ. ಆದರೂ ಖಾಲಿ ಹುದ್ದೆಗಳ ಭರ್ತಿಗೆ ಸರ್ಕಾರ ನಿರಂತರ ಪ್ರಯತ್ನ ನಡೆಸುತ್ತಿದೆ ಎಂದರು.
ಜೈಲಿಗೆ ಭೇಟಿ, ಪರಿಶೀಲನೆ: ಕಲಬುರಗಿ ಕೇಂದ್ರ ಕಾರಾಗೃಹದಿಂದ ಮೂವರು ಕೈದಿಗಳ ಪರಾರಿಗೆ ಸಂಬಂಧಿಸಿದಂತೆ ಕಾರಾಗೃಹ ಮತ್ತು ಸುಧಾರಣೆ ಸೇವೆಗಳ ಡಿಜಿಪಿ ಅಲೋಕಕುಮಾರ್ ಶುಕ್ರವಾರ ಜೈಲಿಗೆ ಭೇಟಿ ನೀಡಿ ಪರಿಶೀಲಿಸಿ ಭದ್ರತಾ ವ್ಯವಸ್ಥೆ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದರು. ಜೈಲಿನ ಪ್ರತಿ ವಿಭಾಗಕ್ಕೆ ತೆರಳಿ ಸಿಸಿಟಿವಿ ಕ್ಯಾಮರಾ, ಭದ್ರತಾ ಗೋಡೆ (ಕಂಪೌಂಡ್), ವಿವಿಧ ಬ್ಯಾರಕ್ಗಳನ್ನು ಸೂಕ್ಷ$್ಮವಾಗಿ ವೀಸಿದರು. ಕಾರಾಗೃಹದ ಅಧೀಕ್ಷಕ ಕೃಷ್ಣಕುಮಾರ, ಎಸಿಪಿಗಳಾದ ಬಸವೇಶ್ವರ ಹೀರಾ, ಡಿ.ಟಿ. ಪ್ರಭು, ಫರಹತಾಬಾದ್ ಠಾಣೆಯ ಪಿಐ ಹುಸೇನ್ ಬಾಷಾ, ಸಂಚಾರ ಪಿಐ ಶಕೀಲ್ ಅಂಗಡಿ, ಕಾರಾಗೃಹದ ಉಪ ಅಧೀಕ್ಷಕ ಚನ್ನಪ್ಪ ಇತರರಿದ್ದರು.