kuda plot 
ಕಲಬುರಗಿ

ಕೂಡಾ ನಿವೇಶನ ಹೆಸರಲ್ಲಿ 35 ಲಕ್ಷ ರೂ. ವಂಚನೆ

ಕಲಬುರಗಿ: ನಗರದ ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಅಧಿಕಾರಿಗಳು ಪರಿಚಯವಿದ್ದು, ಸರ್ದಾರ್​ ವಲ್ಲಭಬಾಯಿ ಪಟೇಲ್​ ಯೋಜನೆ ಹಂತ&1ರಲ್ಲಿ ನಿವೇಶನ ಕೊಡಿಸುವುದಾಗಿ ನಂಬಿಸಿ 35 ಲಕ್ಷ ರೂ. ಪಡೆದು, ವಂಚಿಸಿದ ಟನೆ ನಡೆದಿದೆ.
ಮುಸ್ಲಿಂ ಚೌಕ್​ ಮೋಮೀನಪುರ ನಿವಾಸಿ ನಸಿರುದ್ದೀನ್​ ಸತ್ತಾರ ಮೋಸಕ್ಕೆ ಒಳಗಾದವರು. ಸಂತ್ರಸವಾಡಿ ನಿವಾಸಿ ಸೈಯದ್​ ಾರೂಕ್​ ಮತ್ತು ಆತನ ತಾಯಿ ಶಮಿದಾಬಾನು ವಂಚಿಸಿದವರು.
ಪರಸ್ಪರ ಇಬ್ಬರು 15 ವರ್ಷದಿಂದ ಪರಿಚಯರಿದ್ದಾರೆ. 2023 ಅ.20ರಂದು ಅಬ್ದುಲ್​ ಸತ್ತಾರ ಮನೆಗೆ ಬಂದಿದ್ದ ಸೈಯದ್​, ಶಮಿದಾಬಾನು ಅವರು ನಮಗೆ ಕೂಡಾದಲ್ಲಿ ಪರಿಚಯದ ಅಧಿಕಾರಿಗಳಿದ್ದು, ಸರ್ದಾರ್​ ವಲ್ಲಭಬಾಯಿ ಪಟೇಲ್​ ಯೋಜನೆ ಹಂತ&1ರ ಸರ್ವೇ 126ರಲ್ಲಿ 35 ಲಕ್ಷ ರೂ.ಗೆ ನಿವೇಶನ ಕೊಡಿಸುವುದಾಗಿ ನಂಬಿಸಿದ್ದಾರೆ. ನಂತರ ಹಂತ ಹಂತವಾಗಿ 2023ರಿಂದ 2025ರವರೆಗೆ ಚೆಕ್​, ಆರ್​ಟಿಜಿಎಸ್​ ಮೂಲಕ 35 ಲಕ್ಷ ರೂ. ನೀಡಿದ್ದಾರೆ. ಹಣ ನೀಡಿದ ನಂತರ ನಿವೇಶನ ಕೊಡಿಸಿ ಎಂದು ಕೇಳಿದಾಗ ಇಂದು, ನಾಳೆ ಎಂದು ದಿನದೂಡಿದ್ದಾರೆ. ಈ ಮಧ್ಯೆ ಕೂಡಾ ಕಚೇರಿಗೆ ಭೇಟಿ ನೀಡಿ 126ರಲ್ಲಿ ನಿವೇಶನದ ಬಗ್ಗೆ ಪರಿಶೀಲಿಸಿದಾಗ ಅಲ್ಲಿ ಯಾವುದೇ ನಿವೇಶನವಿಲ್ಲ ಎಂದು ತಿಳಿದು ಬಂದಿದ್ದು, ಮೋಸಕ್ಕೆ ಈಡಾಗಿದ್ದು ಗೊತ್ತಾಗಿದೆ ಎಂದು ಚೌಕ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.