ಸಾಗರ ಖಂಡ್ರೆ 
ಕಲಬುರಗಿ

ಚಂದ್ರಂಪಳ್ಳಿಯಲ್ಲಿ ಅರಣ್ಯ ಕಾಲೇಜು ಸ್ಥಾಪನೆ ಶೀಘ್ರ

ಚಿಂಚೋಳಿ: ಚಂದ್ರಂಪಳ್ಳಿ ಪ್ರವಾಸಿ ತಾಕ್ಷಣದಲ್ಲಿ ತೋಟಗಾರಿಕೆ ಜಮೀನು ಲಭ್ಯವಿದ್ದು, ಶ್ರೀ ಅರಣ್ಯ ಕಾಲೇಜು ಸ್ಥಾಪನೆ ಮಾಡಲಾಗುವುದು ಎಂದು ಬೀದರ್​ ಸಂಸದ ಸಾಗರ ಖಂಡ್ರೆ ಹೇಳಿದರು.

ಅರಣ್ಯ ಕಾಲೇಜು ಸ್ಥಾಪನೆಗೆ ಈಗಾಗಲೇ ಸಚಿವರಾದ ಈಶ್ವರ ಖಂಡ್ರೆ ಹಾಗೂ ಪ್ರಿಯಾಂಕ್​ ಖರ್ಗೆ ಚಿಂತನೆ ನಡೆಸಿದ್ದಾರೆ. ರಾಯಚೂರು ವಿಶ್ವವಿದ್ಯಾಲಯ ತಂಡ ಭೇಟಿ ನೀಡಿ ಪರಿಶೀಲನೆ ವರದಿ ನೀಡಬೇಕಿದೆ. ರೈತರ ವಿಚಾರದಲ್ಲಿ ಯಾರು ರಾಜಕೀಯ ಮಾಡಬಾರದು. ಪತೀತವಾಗಿ ಕೇಂದ್ರ ಸರ್ಕಾರದ ಬಳಿ ನಿಯೋಗ ತೆಗೆದುಕೊಂಡು ಹೋಗಿ ರಾಜ್ಯದ ಬರ ಪರಿಸ್ಥಿತಿ ಮನವರಿಕೆ ಮಾಡಬೇಕಿದೆ. ಅಲ್ಲದೆ ಸೂಕ್ತ ಬರ ಪರಿಹಾರಕ್ಕೆ ಒತ್ತಾಯಿಸೋಣ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಮುಂಬರುವ ದಿನಗಳಲ್ಲಿ ಕುಡಿವ ನೀರು, ವಿದ್ಯುತ್​, ಮೇವಿನ ಸಮಸ್ಯೆ ಉಲ್ಬಣವಾಗಲಿದ್ದು, ಜನ ಸಾಮಾನ್ಯರು ಮಿತವಾಗಿ ಬಳಕೆಗೆ ಮುಂದಾಗಬೇಕು. ಚಿಂಚೋಳಿ ಮಾರ್ಗವಾಗಿ ರೈಲು ಸಂಚಾರ ವಿಚಾರ ಸದನದಲ್ಲಿ ಪ್ರಸ್ತಾಪಿಸಿದ್ದೇನೆ. ಹೋರಾಟಗಾರರೊಂದಿಗೆ ಚರ್ಚಿಸಿದ್ದು, ಶೀಘ್ರವೇ ಕೇಂದ್ರ ರೈಲ್ವೆ ಸಚಿವರ ಬಳಿ ನಿಯೋಗ ತೆರಳಿ ಮನವಿ ಸಲ್ಲಿಸಲಾಗುವುದು ಎಂದರು.

ಕೆಪಿಸಿಸಿ ಉಪಾಧ್ಯಕ್ಷ ಸುಭಾಷ ರಾಠೋಡ್​, ಬ್ಲಾಕ್​ ಕಾಂಗ್ರೆಸ್​ ಅಧ್ಯ ಬಸವರಾಜ ಮಾಲಿ, ಮುಖಂಡರಾದ ಅನೀಲಕುಮಾರ ಜಮಾದಾರ, ಅಬ್ದುಲ್​ ಬಾಸೀದ್​, ಸಂತೋಷ ಗುತ್ತೇದಾರ್​, ಆನಂದ ಟೈಗರ್​, ಶರಣಪ್ಪ ಪಾಟೀಲ್​ ಇದ್ದರು.

ನರೇಗಾವನ್ನು ಕೇಂದ್ರ ಸರ್ಕಾರ ವಿಬಿ-ಜಿ ರಾಮ್​ ಜಿ ಯೋಜನೆಯನ್ನಾಗಿ ಮಾಡಿ ಮುಕ್ತವಾಗಿ ಕೆಲಸ ನಿರ್ವಹಿಸಲು ಬಿಡದೆ ಮೂಗುದಾರ ಹಾಕಿದೆ. ಅವರು ನೀಡುವ ಕಾಮಗಾರಿ ಮಾತ್ರ ಮಾಡಬೇಕು. ಹೊಸ ಕಾನೂನಿನ ಮೂಲಕ ಕಾರ್ಮಿಕ, ರೈತ, ಜನವಿರೋಧಿ ನೀತಿ ಅನುಸರಿಸುತ್ತಿದೆ.
> ಸಾಗರ ಖಂಡ್ರೆ, ಬೀದರ್​ ಸಂಸದ