ಬೆಳಗಾವಿ ಮಾದರಿಯಲ್ಲಿ ಟನ್​ ಕಬ್ಬಿಗೆ 3600 ರೂ. ದರ ನಿಗದಿ ಮಾಡುವಂತೆ ಆಗ್ರಹಿಸಿ ಯಡ್ರಾಮಿ ತಾಲೂಕಿನ ನಾಗರಹಳ್ಳಿಯಲ್ಲಿ ವಿವಿಧ ಸಂಘಟನೆಗಳಿಂದ ಬುಧವಾರ ರಸ್ತೆಯಲ್ಲಿ ಸಂಚಾರ ತಡೆದು ಪ್ರತಿಭಟನೆ ನಡೆಸಲಾಯಿತು. ದಂಡಪ್ಪ ಸಾಹು ಕುಳಗೇರಿ, ಸಾಹೇಬಗೌಡ ದೇಸಾಯಿ, ಸಾಂಬಶಿವ ಹಿರೇಮಠ, ಈರಣ್ಣ ಭಜಂತ್ರಿ ಇತರರಿದ್ದರು. 
ಕಲಬುರಗಿ

ಬೆಳಗಾವಿ ಮಾದರಿಯಲ್ಲಿ ದರ ನಿಗದಿ ಮಾಡಿ

ಯಡ್ರಾಮಿ: ಬೆಳಗಾವಿ ಮಾದರಿಯಲ್ಲಿ ಪ್ರತಿ ಟನ್​ ಕಬ್ಬಿಗೆ 3600 ರೂ. ದರ ನಿಗದಿಗೊಳಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ನಾಗರಹಳ್ಳಿ-ಮಳ್ಳಿ ಉಗಾರ್​ ಶುಗರ್​ ಸಕ್ಕರೆ ಕಾರ್ಖಾನೆ ಮುಂಭಾಗದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ (ಪ್ರವಿಣಶೆಟ್ಟಿ ಬಣ), ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಚೂನಪ್ಪ ಪೂಜೇರಿ, ಕೂಡಿಹಳ್ಳಿ ಚಂದ್ರಶೇಖರ ಬಣ) ಸೇರಿ ವಿವಿಧ ಸಂಘಟನೆಗಳಿಂದ ಬುಧವಾರ ಅನಿರ್ದಿಷ್ಟಾವಧಿ ಧರಣಿ ಪ್ರಾರಂಭಿಸಲಾಯಿತು. ಕಬ್ಬಿಗೆ ನ್ಯಾಯಯುತ ಬೆಲೆ ದೊರೆಯದ ಕಾರಣ ರೈತರು ಆರ್ಥಿಕ ಸಂಕಷ್ಟದಲ್ಲಿದ್ದಾರೆ. ಕೂಡಲೇ ಸರ್ಕಾರ ರೈತರ ನೆರವಿಗೆ ಧಾವಿಸಿ, ಬೆಳಗಾವಿ ಮಾದರಿಯಲ್ಲಿ ದರ ನಿಗದಿ ಮಾಡಬೇಕು. ರೈತರ ಕಬ್ಬನ್ನು ನಿಗದಿತ 15 ದಿನಗಳನೊಳಗಾಗಿ ಕಟಾವು ಮಾಡಬೇಕು. ಕಟಾವು ಮಾಡಿದ ಹದಿನೈದು ದಿನದಲ್ಲಿ ರೈತರ ಖಾತೆಗೆ ಹಣ ಜಮಾ ಮಾಡಬೇಕು. ಟನ್​ ಕಬ್ಬಿಗೆ 500ಗ್ರಾಂ ಗುಣಮಟ್ಟದ ಸಕ್ಕರೆ ನೀಡಬೇಕು. ಸಕ್ಕರೆ ಕಾರ್ಖಾನೆಯಿಂದ ಬಿಡುವ ಹೊಗೆ ಹಾಗೂ ಕಲುಷಿತ ನೀರಿನಿಂದ ರೈತರ ಜಮೀನು ಹಾಳಾಗುತ್ತಿದ್ದು, ಸೂಕ್ತ ಪರಿಹಾರ ನೀಡಬೇಕು. ಕಾರ್ಖಾನೆಯಲ್ಲಿ ರೈತ ಭವನ ನಿರ್ಮಾಣ ಮಾಡುವುದರ ಜತೆಗೆ ವಾಹನ ಚಾಲಕರು, ಕಾರ್ಮಿಕರಿಗೆ ಶುದ್ಧ ಕುಡಿವ ನೀರು ನೀಡಬೇಕು ಎಂದು ಒತ್ತಾಯಿಸಿದರು. ಮಾಗಣಗೇರಾದ ಶ್ರೀ ಏಕಾರ ಶಿವಾಚಾರ್ಯ, ಪ್ರಮುಖರಾದ ದಂಡಪ್ಪ ಸಾಹು ಕುಳಗೇರಿ, ಶಾಂತಪ್ಪ ಕೂಡಲಗಿ, ಶ್ರೀಶೈಲ ಚಿಕ್ಕಮಠ, ಸಾಹೇಬಗೌಡ ದೇಸಾಯಿ, ಸಾಂಬಶಿವ ಹಿರೇಮಠ, ಕೇಶುರಾಯಗೌಡ ಪಾಟೀಲ್​, ಯಲ್ಲಾಲಿಂಗ ಹರನಾಳ, ವಿಶ್ವನಾಥ ಪಾಟೀಲ್​, ಪ್ರಶಾಂತಗೌಡ ಪಾಟೀಲ್​, ಮಲ್ಲಿಕಾರ್ಜುನ ಬಿರಾದಾರ, ಮಹಾಂತಗೌಡ ಪಾಟೀಲ್​ ನಂದಿಹಳ್ಳಿ, ಚಂದ್ರಶೇಖರ ಪುರಾಣಿಕ, ಹಯ್ಯಾಳಪ್ಪ ಗಂಗಾಕರ, ಪ್ರತಾಪ ಕಟ್ಟಿ, ಗುರುನಾಥರೆಡ್ಡಿ ಸಾಸನೂರ, ನಿಂಗನಗೌಡ ಪಾಟೀಲ್​ ಮಾಗಣಗೇರಿ ಇತರರಿದ್ದರು. ಮಳ್ಳಿ ಗಾಂಧಿನಗರದ ಶ್ರೀಶೈಲ ಮಲ್ಲಿಕಾರ್ಜುನ ದೇವಸ್ಥಾನದಿಂದ ಉಗಾರ್​ ಶುಗರ್​ ಸಕ್ಕರೆ ಕಾರ್ಖಾನೆವರೆಗ ಬೃಹತ್​ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು.