ಕಲಬುರಗಿ ಸಂತೋಷ ಕಾಲೋನಿ ಬಳಿಯ ಕೆಎಚ್​ಬಿ ಗ್ರೀನ್​ ಪಾರ್ಕ್​ ಬಡಾವಣೆಯಲ್ಲಿ ಹಮ್ಮಿಕೊಂಡ ನವರಾತ್ರಿ ಉತ್ಸವದಲ್ಲಿ ಸಾಹಿತಿ ಮುಡುಬಿ ಗುಂಡೇರಾವ ಮಾತನಾಡಿದರು. ಅಮರಪ್ರಿಯ ಹಿರೇಮಠ, ಬಾಲಕೃಷ್ಣ ಕುಲಕರ್ಣಿ, ಬಸವರಾಜ ಕುಂಬಾರ ಇದ್ದರು. 
ಕಲಬುರಗಿ

ಹಬ್ಬ ಮಾನವೀಯ ಮೌಲ್ಯ ಪಾಲನೆಗೆ ಪ್ರೇರಣೆ

ಕಲಬುರಗಿ: ಹಬ್ಬಗಳ ಆಚರಣೆ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ಪಾಲನೆಗೆ ಪ್ರೇರಣೆಯಾಗಬೇಕು ಎಂದು ಸಂಶೋಧಕ, ಸಾಹಿತಿ ಮುಡುಬಿ ಗುಂಡೇರಾವ ಹೇಳಿದರು.

ಆಳಂದ ರಸ್ತೆಯ ಸಂತೋಷ ಕಾಲನಿ ಬಳಿಯ ಕೆಎಚ್​ಬಿ ಗ್ರೀನ್​ ಪಾರ್ಕ್​ ಬಡಾವಣೆಯಲ್ಲಿ ನಿವಾಸಿಗಳ ೇಮಾಭಿವೃದ್ಧಿ ಸಂ ಆಯೋಜಿಸಿರುವ ನವರಾತ್ರಿ ಉತ್ಸವದಲ್ಲಿ ವಿಶೇಷ ಉಪನ್ಯಾಸ ನೀಡಿದ ಅವರು, ಹಬ್ಬ, ಉತ್ಸವಗಳು ಸಂಸತಿಯ ಜೀವಾಳವಾಗಿವೆ. ಇಂದಿನ ಆಧುನಿಕ ಯುಗದಲ್ಲಿ ಸಂಸ್ಕೃತಿ ಮರೆಯಬಾರದು. ಮಕ್ಕಳಿಗೆ ಉತ್ತಮ ಸಂಸ್ಕಾರ ನೀಡಬೇಕು. ನವರಾತ್ರಿ ಸಂದರ್ಭದಲ್ಲಿ ಕೆಟ್ಟ ಆಲೋಚನೆ, ದುರಾಭ್ಯಾಸ ನಾಶವಾಗಿ ವ್ಯಸನಮುಕ್ತ ಸಮಾಜ ನಿರ್ಮಾಣವಾಗಬೇಕು ಎಂಬ ಆಶಯ ವ್ಯಕ್ತಪಡಿಸಿದರು.

ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷ ಬಾಲಕೃಷ್ಣ ಕುಲಕರ್ಣಿ, ಉದ್ಯಮಿ ಬಸವರಾಜ ಕುಂಬಾರ, ರಮೇಶ ಮೇಲಗಿರಿ, ಸಿದ್ರಾಮಪ್ಪ ಮಾಲಿಬಿರಾದಾರ ಇತರರಿದ್ದರು. ಶಿವಕಾಂತ ಚಿಮ್ಮಾ ಸ್ವಾಗತಿಸಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ ನಿರೂಪಣೆ ಮಾಡಿ ವಂದಿಸಿದರು. ಚಲನಚಿತ್ರ ಸಂಗೀತ ನಿರ್ದೇಶಕ ಅಮರಪ್ರಿಯ ಹಿರೇಮಠ ಮತ್ತು ಕಲಾವಿದೆ ಮೇನಾ ವಚನ ಗಾಯನ ನಡೆಸಿಕೊಟ್ಟರು. ನಿವಾಸಿಗಳಿಂದ ನಡೆದ ದಾಂಡಿಯಾ ಇತರ ನೃತ್ಯಗಳು ಗಮನಸೆಳೆದವು.

ಸಂಸ್ಕೃತಿ ಪ್ರತಿಕವಾಗಿರುವ ಹಬ್ಬ ಉತ್ಸವಗಳ ಆಚರಣೆ ಜತೆ ಸಮಾನತೆ ಸಾರುವ ವಚನಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು. ಮಾನವೀಯ ಮೌಲ್ಯಗಳು ಮರು ಸ್ಥಾಪನೆಗೊಂಡು ಕೌಟುಂಬಿಕ ಸಂಬಂಧಗಳು ಗಟ್ಟಿಯಾಗಬೇಕು. ಆದರ್ಶ ಸಮಾಜ ನಿರ್ಮಾಣಕ್ಕೆ ಎಲ್ಲರೂ ಮುಂದಾಗಬೇಕು.
> ಮುಡುಬಿ ಗುಂಡೇರಾವ ಸಾಹಿತಿ