ಕಲಬುರಗಿಯ ಶಿವಲಿಂಗ ನಗರದಲ್ಲಿ ಗಣೇಶ ಉತ್ಸವ ನಿಮಿತ್ತ ಆಯೋಜಿಸಿದ್ದ ನಗೆಹಬ್ಬವನ್ನು ಹಣಮಂತರಾಯ ಅಟ್ಟೂರ, ಡಾ.ದೇವಾನಂದ ಬಿರಾದಾರ ಉದ್ಘಾಟಿಸಿದರು. ಗುಂಡಣ್ಣ ಡಿಗ್ಗಿ, ಡಾ.ಅಮರೇಶ ಪತ್ತಾರ, ಶರಣಯ್ಯ ಹಿರೇಮಠ, ಶರಣು ದೇಸಾಯಿ, ಮಲಕಾರಿ ಪೂಜಾರಿ, ಸಾವಿತ್ರಿ ಪತ್ತಾರ, ಗಿರಿರಾಜ ಶಿರವಾಳ ಇತರರಿದ್ದರು. 
ಕಲಬುರಗಿ

ಹಬ್ಬ ಭಾವೈಕ್ಯತೆ ಬೆಳೆಸುವ ಸೇತುವೆ

ಕಲಬುರಗಿ: ಹಬ್ಬ-ಉತ್ಸವಗಳು ಕೇವಲ ಸಂತೋಷ, ಸಂಭ್ರಮ ಮತ್ತು ಮನರಂಜನೆಯ ಸಂದರ್ಭಗಳಲ್ಲ. ಅವು ನಮ್ಮ ಸಂಸ್ಕೃತಿ, ಪರಂಪರೆ, ಭಾವೈಕ್ಯತೆ ಮತ್ತು ಮಾನವೀಯ ಮೌಲ್ಯಗಳನ್ನು ಬೆಳೆಸುವ ಸೇತುವೆಗಳಾಗಿ ಕಾರ್ಯ ನಿರ್ವಹಿಸುತ್ತವೆ ಎಂದು ಹಾಸ್ಯ ಕಲಾವಿದ ಗುಂಡಣ್ಣ ಡಿಗ್ಗಿ ಹೇಳಿದರು.

ಆಳಂದ ರಸ್ತೆಯ ಚಿಂಚೋಳಿ ಲೇಔಟ್​ನಲ್ಲಿರುವ ಶಿವಲಿಂಗ ನಗರದಲ್ಲಿ ಗಣೇಶ ಉತ್ಸವದ ಅಂಗವಾಗಿ ಗುರುವಾರ ರಾತ್ರಿ ಆಯೋಜಿಸಿದ್ದ ನಗೆಹಬ್ಬ ಕಾರ್ಯಕ್ರಮದಲ್ಲಿ ಮಾತನಾಡಿ, ನಿತ್ಯದ ಬದುಕಿನಲ್ಲಿ ನಮ್ಮ ನಡುವೆ ಇರುವ ಭಿನ್ನತೆಗಳನ್ನು ಮರೆತು, ಒಂದಾಗಿ ಸೇರಿ ಸಂತೋಷವನ್ನು ಹಂಚಿಕೊಳ್ಳುವ ಅವಕಾಶವನ್ನು ಉತ್ಸವಗಳು ಕಲ್ಪಿಸುತ್ತವೆ. ಜೀವನದಲ್ಲಿ ನಗದೆ ಇರುವವನು ನಿಜವಾದ ಬಡವ ಎಂದರು.

ನ್ಯಾಯವಾದಿ ಹಣಮಂತರಾಯ ಅಟ್ಟೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಉತ್ಸವಗಳ ನಿಜವಾದ ಸಾರ್ಥಕತೆ ಆಡಂಬರದಲ್ಲಿಲ್ಲ, ಒಗ್ಗಟ್ಟಿನಲ್ಲಿದೆ. ಉತ್ಸವ ಆಚರಿಸುವಾಗ ಪರಿಸರ ಸಂರಕ್ಷಣೆ, ಸ್ವಚ್ಛತೆ, ಸರಳತೆ ಮತ್ತು ಸಾಮಾಜಿಕ ಹೊಣೆಗಾರಿಕೆಯನ್ನು ಮರೆಯಬಾರದು ಎಂದರು.

ಹಾಸ್ಯ ಕಲಾವಿದರಾದ ಶರಣು ದೇಸಾಯಿ ಹಾಸ್ಯದ ಮಾತುಗಳಿಂದ ನೆರೆದವರನ್ನು ನಗೆಗಡಲಲ್ಲಿ ತೇಲಿಸಿದರು. ಮೋಹನರಾಜ ಚಾರಿಟೇಬಲ್​ ಆಸ್ಪತ್ರೆ ನಿರ್ದೇಶಕ ಡಾ.ದೇವಾನಂದ ಬಿರಾದಾರ, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಬಾಬುರಾವ ಯಡ್ರಾಮಿ, ಪತ್ರಕರ್ತ ಶರಣಯ್ಯ ಹಿರೇಮಠ, ಪ್ರಮುಖರಾದ ಗಿರಿರಾಜ ಶಿರವಾಳ, ವಿಜಯಕುಮಾರ ಬಿರಾದಾರ, ವಿಶಾಲ, ರಾಮಚಂದ್ರ ವಿಶ್ವಕರ್ಮ, ದೇವೇಂದ್ರ ಪತ್ತಾರ, ರವಿ ಪತ್ತಾರ, ರಾಜು ವಿಶ್ವಕರ್ಮ, ಲಕ್ಷ್ಮೀಕಾಂತ ಪತ್ತಾರ, ಗಂಗಾಧರ ಚಿತಕೋಟಿ, ಲಕ್ಷ್ಮೀ ಪತ್ತಾರ, ಅನಿಲಕುಮಾರ ಬೆಡಗೆ, ರಜನಿಕಾಂತ ಬರುಡೆ ಇತರರಿದ್ದರು.

ಡಾ.ಅಮರೇಶ ಪತ್ತಾರ ಸ್ವಾಗತಿಸಿದರು. ಮಲಕಾರಿ ಪೂಜಾರಿ ನಿರೂಪಣೆ ಮಾಡಿದರು. ಸಾವಿತ್ರಿ ಪತ್ತಾರ ವಂದಿಸಿದರು. ದೀಪ್ತಿ ಪತ್ತಾರ ಭರತ ನಾಟ್ಯ ಮಾಡಿದರು. ಜನ್ಮದಾತ ವಿ.ಎಸ್​.ಅಟ್ಟೂರ ಸ್ಮಾರಕ ಚಾರಿಟೇಬಲ್​ ಟ್ರಸ್ಟ್​ ವತಿಯಿಂದ ಡಾ.ಅಮರೇಶ ಪತ್ತಾರ ಅವರನ್ನು ಸನ್ಮಾನಿಸಲಾಯಿತು.

ಸ್ನೇಹದಿಂದಲೇ ಎಲ್ಲ ಸಾಧನೆ ಮಾಡಲು ಸಾಧ್ಯವಿದೆ. ಉತ್ತಮ ಸ್ನೇಹಿತ-ಪುಸ್ತಕ ನಮ್ಮನ್ನು ಸನ್ಮಾರ್ಗದತ್ತ ಕರೆದುಕೊಂಡು ಹೋಗುತ್ತವೆ. ಸ್ವಾತಂತ್ರ ಸಂಗ್ರಾಮದಲ್ಲಿ ಶುರುವಾದ ಗಣೇಶ ಹಬ್ಬ, ಈಗ ನಮ್ಮೆಲ್ಲರನ್ನು ಒಂದುಗೂಡಿಸುತ್ತಿದೆ.
> ಡಾ.ದೇವಾನಂದ ಬಿರಾದಾರ, ನಿರ್ದೇಶಕ, ಮೋಹನರಾಜ ಚಾರಿಟೇಬಲ್​ ಆಸ್ಪತ್ರೆ