ಕೊಲೆ ಆರೋಪಿ ಗುಂಡೇರಾಯ 
ಕಲಬುರಗಿ

ದಾರಿ ಸಮಸ್ಯೆ ಮುಕ್ತಿಗೆ ಮಗಳನ್ನೇ ಕೊಂದ ತಂದೆ ಪೊಲೀಸ್​ ಬಲೆಗೆ

ಕಲಬುರಗಿ: ಜಮೀನಿನ ರಸ್ತೆಯ ಸಮಸ್ಯೆ ಬಗೆಹರಿಸಲು ಅಂಗವಿಕಲ ಮಗಳನ್ನು ಕೊಲೆ ಮಾಡಿ, ಡೆತ್​ ನೋಟ್​ ಬರೆದಿಟ್ಟು ಆತ್ಮಹತ್ಯೆ ಎಂಬಂತೆ ಬಿಂಬಿಸಿ, ರಸ್ತೆಗೆ ಅಡ್ಡಿಯಾದವರ ಮೇಲೆ ಆತ್ಮಹತ್ಯೆಯ ಆರೋಪ ಹೊರೆಸಿದ ಪ್ರಕರಣ ಭೇದಿಸಿ, ಕೊಲೆಗೈದ ತಂದೆಯನ್ನು ಬಂಧಿಸಲಾಗಿದೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ.ತಿಳಿಸಿದರು.
ಕಲ್ಲಹಂಗರಗಾ ಗ್ರಾಮದಲ್ಲಿ ಗುಂಡೇರಾರ ನೀಲೂರ ಮಗಳನ್ನೇ ಕೊಂದು, ಬಂಧಿತನಾದ ತಂದೆ. ನ.19ರಂದು 17 ವರ್ಷದ ಅಂಗವಿಕಲ ಬಾಲಕಿ ಮನೆಯಲ್ಲಿ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡ ದೂರು ಸಬ್​ ಅರ್ಬನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸ್ಥಳಕ್ಕೆ ಭೇಟಿ ನೀಡಿದ್ದಾಗ ಆತ್ಮಹತ್ಯೆಯಲ್ಲ ಕೊಲೆ ಎಂಬ ಶಂಕೆ ಆಧರಿಸಿ, ತನಿಖೆ ನಡೆಸಿದಾಗ ತಂದೆ ನಡೆಸಿದ್ದ ಷಡ್ಯಂತ್ರ ಬೆಳಕಿಗೆ ಬಂದಿದೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
17 ವರ್ಷದ ಅಂಗವಿಕಲ ಬಾಲಕಿಯೂ ಅಷ್ಟು ಎತ್ತರದ ಛಾವಣಿ ನಿಲುಕುತ್ತಿರಲಿಲ್ಲ. ಜಮೀನಿನ ವಿವಾದ ಬಗೆಹರಿಯುತ್ತದೆ ಇಬ್ಬರು ಸಾಯೋಣ ಎಂದು ನಂಬಿಸಿ, ಬ್ಯಾರೆಲ್​ ಮೇಲೆ ನಿಲ್ಲಿಸಿ, ಹಗ್ಗ ಕಟ್ಟಿದ್ದಾನೆ. ನಂತರ ಬ್ಯಾರೇಲ್​ನ್ನು ತಂದೆಯೇ ಒದ್ದಿದ್ದು, ಬಾಲಕಿ ಮೃತಪಟ್ಟಿದ್ದಾಳೆ ಎಂದು ತಿಳಿಸಿದರು.
ಮೇಲ್ನೋಟಕ್ಕೆ ಪ್ರಕರಣದಲ್ಲಿ ಅನುಮಾನಗಳನ್ನು ಕಂಡು ೋರೆಸಿಕ್ಸ್​, ಫಿಂಗರ್​ ಪ್ರಿಂಟ್​ ಸೇರಿ ಡಿಜಿಟಲ್​ ಸಾಗಳನ್ನು ಸಂಗ್ರಹಿಸಿದಾಗ ಕೊಲೆ ಎಂಬುದು ಸ್ಪಷ್ಟವಾಗಿದ್ದು, ತಂದೆಯೇ ಕಾರಣ ಎಂಬುದು ಪತ್ತೆ ಹಚ್ಚಿ ಬಂಧಿಸಲಾಗಿದೆ. ಪ್ರಕರಣದಲ್ಲಿ ಎಸಿಪಿ ಬಸವೇಶ್ವರ ನೇತೃತ್ವದಲ್ಲಿ ಸಿಎಸ್​ಬಿ ಟಕ, ಸಬ್​ ಅರ್ಬನ್​ ಠಾಣೆ ಪ್ರಭಾರ ಪಿಐ ಭೋಜರಾಜ ರಾಠೋಡ್​, ಪಿಎಸ್​ಐ ಬಸವರಾಜ, ಎಎಸ್​ಐ ನಾಗರಾಜ, ಸಿಬ್ಬಂದಿ ಮಂಜುನಾಥ, ಅಶೋಕ, ಫಿರೋಜ ಅವರ ತಂಡ ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಕ್ಕೆ ಶ್ಲಾನೆ ವ್ಯಕ್ತಪಡಿಸಿದರು.