- ಜಿಲ್ಲಾಡಳಿತ ಹೇಳಿದರೂ ಇಲ್ಲ ಸ್ಪಂದನೆ
- ಖಾಸಗಿಯಲ್ಲಿ ದರ ದುಪ್ಪಟ್ಟು
ಕಲಬುರಗಿ: ಮುಂಗಾರು ಬಿತ್ತನೆಗೆ ಸಜ್ಜಾಗಿರುವ ಜಿಲ್ಲೆಯ ರೈತರಿಗೆ ರಸಗೊಬ್ಬರ ತಾಪತ್ರೇಯ ಪದೇ ಪದೆ ಕಾಡುತ್ತಿದ್ದು, ರಸಗೊಬ್ಬರ ಕೊರತೆ ಇಲ್ಲವೆಂದು ಜಿಲ್ಲಾಡಳಿತ ಹೇಳುತ್ತಿದ್ದು, ನಗರದ ಗಂಜ್ನಲ್ಲಿರುವ ತಾಲೂಕು ಒಕ್ಕಲುತನ ಹುಟ್ಟುವಳಿ ಮಂಡಳಿಯಲ್ಲಿಯೇ ಡಿಎಪಿ ರಸಗೊಬ್ಬರ ಸಂಗ್ರಹ ಇಲ್ಲವೆಂದು ವಾಪಸ್ ಕಳುಹಿಸಿದ್ದು, ರೈತರನ್ನು ಇಕ್ಕಟ್ಟಿಗೆ ಸಿಲುಕಿಸಿದೆ.
ಖಾಸಗಿಯಲ್ಲಿ ಹೆಚ್ಚಿನ ದರ ಪಡೆಯುತ್ತಿದ್ದಾರೆ ಎಂದು ಸರ್ಕಾರದ ವಿತರಣಾ ಕೇಂದ್ರವಾದ ನಗರದ ಕಲಬುರಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂ ನಿಯಮಿತದಲ್ಲಿ ಗುರುವಾರ ಬೆಳಗ್ಗೆ ರೈತರು ಬಂದಾಗ ಡಿಎಪಿ ಇಲ್ಲವೆಂದು ವಾಪಸ್ ಕಳುಹಿಸಿದ ಟನೆ ನಡೆದಿದೆ.
ನಸುಕಿನ ಜಾವ 4ಗಂಟೆಗೆ ರೈತರು ಆಗಮಿಸಿ ಸರತಿಯಲ್ಲಿ ನಿಂತ್ತಿದ್ದು, ಒಂದು ಪಹಣಿಗೆ ಎರಡು ಚೀಲ ಡಿಎಪಿ, ಎರಡು ಚೀಲ ಯೂರಿಯಾ ನೀಡುತ್ತೇನೆ ಎನ್ನುತ್ತಾರೆ. ಆದರೆ ರೈತರಿಗೆ ಅವಶ್ಯವಿರುವಷ್ಟು ನೀಡಿರೆಂದರೆ ನೀಡುತ್ತಿಲ್ಲ. ಎರಡ್ಮೂರು ದಿನದಿಂದ ಬರುತ್ತಿದ್ದು, ಡಿಎಪಿ ಸ್ಟಾಕ್ ಇಲ್ಲ ಎನ್ನುತ್ತಿದ್ದಾರೆ. ಇದರಿಂದ ಖಾಸಗಿಯವರ ಬಳಿ ಹೋಗುವಂತಾಗಿದೆ. ಅಲ್ಲಿ ದರ ಹೆಚ್ಚಾಗಿದೆ ಎಂದು ರೈತರು ಅಳಲು ತೋಡಿಕೊಂಡರು.
ತಾಲೂಕು ಒಕ್ಕಲುತನ ಹುಟ್ಟುವಳಿ ಮಾರಾಟ ಸಹಕಾರ ಸಂ ನಿಯಮಿತದಲ್ಲಿ ಡಿಎಪಿ ಚೀಲಕ್ಕೆ 1350 ರೂ. ಪಡೆಯಲಾಗುತ್ತದೆ. ಆದರೆ ಖಾಸಗಿಯಲ್ಲಿ 2000ದಿಂದ 2200 ರೂ. ಪಡೆಯಲಾಗುತ್ತಿದೆ. ಸರ್ಕಾರಿ ಸಂಸ್ಥೆಯಲ್ಲಿ ಸ್ಟಾಕ್ ಇಲ್ಲದ್ದಕ್ಕೆ ರೈತರು ಅನಿವಾರ್ಯವಾಗಿ ಖಾಸಗಿಯಾಗಿ ಹೆಚ್ಚಿನ ದರ ಪಡೆಯುವಂತಾಗಿದೆ. ಯೂರಿಯೂ ಸಹ 266 ರೂ. ಇದ್ದು, ಖಾಸಗಿಯವರಲ್ಲಿ 400&500 ರೂ. ವಸೂಲಿ ಮಾಡಲಾಗುತ್ತಿದೆ ಎಂದು ರೈತರು ದೂರಿದರು. ಆಳಂದ ಪಟ್ಟಣದಲ್ಲಿ 2200 ರೂ.ಗೆ ಒಂದು ಚೀಲ ಡಿಎಪಿ ದೊರೆಯುತ್ತಿದೆ ಎಂದು ರೈತರು ಅಲ್ಲಿದ್ದ ರೈತರಿಗೆ ಕರೆ ಮಾಡಿ, ಎಲ್ಲರ ಎದುರೇ ದೃಢಪಡಿಸಿಕೊಂಡ ಟನೆಯೂ ನಡೆಯಿತು.
ಕಾಳಸಂತೆಯಲ್ಲಿ ಎಷ್ಟು ಬೇಕಾದರೂ ಸಿಗುತ್ತೆ
ಬ್ಲಾಕ್ನಲ್ಲಿ ಹೆಚ್ಚುವರಿ ದರಕ್ಕೆ ಎಷ್ಟು ಬೇಕಾದರೂ ಡಿಎಪಿ, ಯೂರಿಯಾ ಸಿಗುತ್ತದೆ. ಆದರೆ ಹಣ ಯಾರು ನೀಡಬೇಕು. ಸರ್ಕಾರ, ಜಿಲ್ಲಾಡಳಿತ ಒಂದು ರ್ನಿಧಿಷ್ಟ ದರ ನಿಗದಿ ಮಾಡಿದರೆ ಅದನ್ನೆ ಕೊಡಲು ಸಿದ್ಧ. ಹೀಗೆ ಸತಾಯಿಸಿ, ಸಮಸ್ಯೆ ಮಾಡಬಾರದು. ಐದಾರು ದಿನ ಅಲೆದಾಡುವುದರದಲ್ಲಿ ಹೋಗುತ್ತಿದೆ. ಸ್ಪಷ್ಟತೆ ಇರಲಿ. ಒಂದು ತಿಂಗಳು ಜಿಲ್ಲಾಡಳಿತ ಎಲ್ಲವನ್ನು ಬಿಟ್ಟು ರೈತರ ಈ ಸಮಸ್ಯೆಯನ್ನು ನಿರ್ವಹಣೆ ಮಾಡಬೇಕು. ಇಲ್ಲದಿದ್ದರೆ ಹಣ ಹೊಡೆಯುವವರ ಸಂಖ್ಯೆ ಹೆಚ್ಚಲಿದೆ ಎಂದು ರೈತರಾದ ಶಂಭುಲಿಂಗ ಬೆಳಗುಂಪಿ, ಶರಣಪ್ಪ ಕಿರಣಗಿ, ದೌಲಸಾಬ್ ನದ್ಾ, ಮೌಲಾಲಿ ಕೆರಮಗಿ, ಮಲಕಾಜಪ್ಪ ಜಂಬಗಿ ಕಿಡಿ ಕಾರಿದರು.
ಸ್ಟಾಕ್ ಇಲ್ಲ, ತಾಲೂಕಲ್ಲಿ ಕೊಡ್ತಿಲ್ಲ
ರಸಗೊಬ್ಬರವನ್ನು ಎಲ್ಲ ತಾಲೂಕುಗಳಲ್ಲಿ ವಿತರಿಸಬೇಕು. ಆಯಾ ತಾಲೂಕಿನ ರೈತರು ಅಲ್ಲಿಯೇ ಖರೀದಿಸಬೇಕು. ಜಿಲ್ಲಾ ಕೇಂದ್ರವಾಗಿದ್ದರಿಂದ ನಮ್ಮಲ್ಲಿ ಬಂದು ಕೇಳುತ್ತಿದ್ದಾರೆ. ಸದ್ಯಕ್ಕೆ ನಮ್ಮಲ್ಲಿ ಡಿಎಪಿ ಸಂಗ್ರಹ ಇರುವಷ್ಟು ನೀಡಿದ್ದೇವೆ. ಬಂದ ತಕ್ಷಣ ಪುನ@ ವಿತರಿಸಲಾಗುವುದು ಎಂದು ಕಲಬುರಗಿ ತಾಲೂಕು ಒಕ್ಕಲುತನ ಹುಟ್ಟುವಳಿ ಮಂಡಳಿಯ ವ್ಯವಸ್ಥಾಪಕ ರಾಚಪ್ಪ ತಿಳಿಸಿದರು.
20 ಎಕರೆ ಜಮೀನಿದೆ. ಮೂರ್ನಾಲ್ಕು ದಿನದಿಂದ ಬರುತ್ತಿದ್ದೇನೆ. ಡಿಎಪಿ ಇಲ್ಲವೆಂದು ಹೇಳುತ್ತಿದ್ದಾರೆ. ಒಂದು ಪಹಣಿಗೆ 2 ಚೀಲ ಕೊಡುತ್ತೇನೆ ಎಂದರೆ ಎಷ್ಟು ಬಾರಿ ಬರಬೇಕು.? ದಿನಕ್ಕೆ ಮೂರ್ನಾಲ್ಕು ನೂರು ರೂ. ಖರ್ಚು ಬಂದು ಹೋಗಲು ಆಗುತ್ತಿದೆ. ದಿನಾ ಓಡಾಡೋದರಲ್ಲೇ ಕಾಲ, ಖರ್ಚು ಹೋಗುತ್ತಿದೆ. ಸರ್ಕಾರ ಸಮರ್ಪಕವಾಗಿ ವಿತರಣೆ ಮಾಡಬೇಕು.
— ಶ್ರೀಮಂತ ಬೆಳಗುಂಪ, ರೈತ ಚಿತ್ತಾಪುರ