boar attack 
ಕಲಬುರಗಿ

ಕಾಡು ಹಂದಿದಾಳಿಗೆ ರೈತ ಸಾವು

ರಮೇಶ ಮೇಳಕುಂದಾ
ಕಲಬುರಗಿ: ಕಾಡು ಹಂದಿ ದಾಳಿ ನಡೆಸಿದ್ದರಿಂದ ಗಂಭೀರವಾಗಿ ಗಾಯಗೊಂಡ ಕೃಷಿ ಕೂಲಿ ಕಾರ್ಮಿಕ ರೇವಣಸಿದ್ದಪ್ಪ ಮುಕರಂಬಿ ಸ್ಥಳದಲ್ಲೇ ಮೃತಪಟ್ಟ ಟನೆ ಅಲಗೂಡ ಗ್ರಾಮದಲ್ಲಿ ಮಾ.23ರಂದು ನಡೆದಿದೆ. ಮಾ.23ರಂದು ಗ್ರಾಮದ ಸೋಮಶೇಖರ ಗೌಡ ಅವರ ಜಮೀನಿನಲ್ಲಿ ಕೆಲಸಕ್ಕೆ ಹೋಗಿದ್ದು, ವಾಪಸ್​ ಬಂದಿರಲಿಲ್ಲ. ಹುಡುಕಾಡುತ್ತ ಹೋದಾಗ ಹೊಲದ ನಾಲಾದಲ್ಲಿ ಬಿದಿದ್ದು, ಕಾಡು ಹಂದಿಗಳ ಮರಿಗಳಿದ್ದವು. ಎಲ್ಲವನ್ನು ಓಡಿಸಿದ್ದಾರೆ. ಕಾಡು ಹಂದಿ ದಾಳಿಯಿಂದ ಮೃತಪಟ್ಟಿದ್ದು, ಅಂತ್ಯಸಂಸ್ಕಾರ ನೆರವೇರಿಸಲಾಗಿದೆ. ಸಾವಿನ ನೋವಿನಲ್ಲಿ ದೂರು ನೀಡಿರುವುದು ತಿಳಿದಿರಲಿಲ್ಲ. ಪ್ರಸ್ತುತ ದೂರು ದಾಖಲಿಸುತ್ತಿದ್ದು, ತನಿಖೆ ನಡೆಸಿ, ಸರ್ಕಾರದ ಪರಿಹಾರ ಒದಗಿಸಬೇಕು ಎಂದು ಸಬ್​ ಅರ್ಬನ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.