ಕಾಳಗಿಯಲ್ಲಿ ಹಮ್ಮಿಕೊಂಡಿದ್ದ ಸಮಾರಂಭವನ್ನು ಪ್ರಾಥಮಿಕ ಶಾಲಾ ಶಿಕರ ಸಂದ ಅದ್ಯ ಚಂದ್ರಶೇಖರ ನುಗ್ಗಲಿ ಉದ್ಘಾಟಿಸಿದರು. ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಶಶಿಧರ ಬಿರಾದಾರ, ಸಂತೋಷ ಗಂಗೂ, ಮರೆಪ್ಪ ಹೊಸಮನಿ ಇತರರಿದ್ದರು. 
ಕಲಬುರಗಿ

ಶಿಕ್ಷಕರಿಗೆ ಪಾಠ ಮಾಡಲು ಅನುವು ಮಾಡಿಕೊಡಿ

ಕಾಳಗಿ: ಶಿಕ್ಷಕರಿಗೆ ಪಾಠ ಮಾಡುವುದಕ್ಕಿಂತ ಅನ್ಯ ಕಾರ್ಯಗಳ ಭಾರ ಹೆಚ್ಚಾಗಿದೆ. ಇದನ್ನು ತಪ್ಪಿಸಿ ಮಕ್ಕಳಿಗೆ ಗುಣಮಟ್ಟದ ಶಿಕ್ಷಣ ಕೊಡಿಸಲು ಅನುವು ಮಾಡಿಕೊಡಬೇಕು ಎಂದು ಕರ್ನಾಟಕ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಚಂದ್ರಶೇಖರ ನುಗ್ಗಲಿ ಮನವಿ ಮಾಡಿದರು.

ನೀಲಕಂಠ ಕಾಳೇಶ್ವರ ಕಲ್ಯಾಣ ಮಂಟಪದಲ್ಲಿ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಿಂದ ಸೋಮವಾರ ಹಮ್ಮಿಕೊಂಡಿದ್ದ ಪದಾಧಿಕಾರಿಗಳ ಪದಗ್ರಹಣ, ಸವೋರ್ತ್ತಮ ಶಿಕ್ಷಕ ಪ್ರಶಸ್ತಿ ಪ್ರದಾನ ಮತ್ತು ಬಡ್ತಿ ಹೊಂದಿದ ಮುಖ್ಯಶಿಕ್ಷಕರ ಸನ್ಮಾನ ಸಮಾರಂಭ ಉದ್ಘಾಟಿಸಿ ಮಾತನಾಡಿ, ಶಿಕ್ಷಕರ ಬಹು ವರ್ಷಗಳ ಬೇಡಿಕೆ ಬಡ್ತಿ ನೀಡುವಲ್ಲಿ ಮತ್ತು ಹಳೇ ಶಿಕ್ಷಕರಿಗೆ ಟಿಇಟಿ ರದ್ದುಪಡಿಸುವ ಕಾನೂನು ಜಾರಿಗೆ ತರುವಲ್ಲಿ ಸಂಘಟನೆ ನಿರಂತರ ಪರಿಶ್ರಮ ಪಡುತ್ತಿದೆ ಎಂದರು.

ಶಾಸಕ ಡಾ.ಅವಿನಾಶ ಜಾಧವ್​ ಮಾತನಾಡಿ, ಶಿಕ್ಷಕರು ಸಮಾಜದ ನಿಜವಾದ ಕಣ್ಣುಗಳು. ಜ್ಞಾನದ ಜ್ಯೋತಿ ಸದಾ ಬೆಳಗಿಸುವ ಶ್ರೇಷ್ಠ ಮಾರ್ಗದರ್ಶಕರಾಗಿದ್ದಾರೆ. ಒಪಿಎಸ್​ ಜಾರಿ ಹೋರಾಟಕ್ಕೆ ಸದಾ ಬೆಂಬಲ ನೀಡುವೆ. ಶ್ರೀ ಕಾಳಗಿಯಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಶುರು ಮಾಡಲಾಗುವುದು ಎಂದು ಭರವಸೆ ನೀಡಿದರು.

ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಸಂತೋಷ ಕಲಮೂಡಕರ್​, ಭರತನೂರ ಶ್ರೀ ಚಿಕ್ಕಗುರುನಂಜೇಶ್ವರ ಸ್ವಾಮೀಜಿ, ಬಿಇಒ ಶಶಿಧರ ಬಿರಾದಾರ ಮಾತನಾಡಿದರು.

ಜಿಲ್ಲಾಧ್ಯಕ್ಷ ಸಂತೋಷ ಗಂಗೂ, ಪ್ರಧಾನ ಕಾರ್ಯದರ್ಶಿ ಮರೆಪ್ಪ ಹೊಸಮನಿ, ಕ್ಷೇತ್ರ ಸಮನ್ವಯಾಧಿಕಾರಿ ನಾಗಶೆಟ್ಟಿ ಭದ್ರಶೆಟ್ಟಿ, ಪ್ರಮುಖರಾದ ಶಂಕರ ಡಾಂಗೆ, ಶಿವಶರಣಪ್ಪ ಮಂಠಾಳ, ದೇವಿಂದ್ರಪ್ಪ ಹೊಳ್ಕರ್​, ಬಸಂತರಾಯ ಪೆದ್ದಿ, ಪಿತಾಂಬರ ಮಡಿವಾಳ, ಮಹಮ್ಮದ್​ ಯೂಸುಫ್​ಖಾನ್​, ನಾಗರಾಜ ಮಡಿವಾಳ, ಗಂಗಾಧರ ಯೋಗಿ, ಶಿವಕುಮಾರ ಶಾಸ್ತ್ರಿ, ಚಂದ್ರಕಾಂತ ತಳವಾರ, ಶಿವಾನಂದ ನಾಲವಾರ ಇತರರಿದ್ದರು.

ಸಾಧಕ ಶಿಕ್ಷಕರಿಗೆ ಸವೋರ್ತ್ತಮ ಶಿಕ್ಷಕ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಬಡ್ತಿ ಹೊಂದಿದ ಮುಖ್ಯಗುರುಗಳನ್ನು ಸತ್ಕರಿಸಲಾಯಿತು.