ಕಲಬುರಗಿ ಅಪ್ಪ ಪಬ್ಲಿಕ್​ ಶಾಲೆಯಲ್ಲಿ ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಸಂಸ್ಥೆ ವತಿಯಿಂದ ಬುಧವಾರ ಆಯೋಜಿಸಿದ್ದ ವಿಭಾಗ ಮಟ್ಟದ ದೇಶಭಕ್ತಿ ಹಾಗೂ ಜಾನಪದ ಗೀತ ಗಾಯನ ಸ್ಪರ್ಧೆ ಕಾರ್ಯಕ್ರಮಕ್ಕೆ ಸಿ.ಬಿ.ಪಾಟೀಲ್​ ಓಕಳಿ ಚಾಲನೆ ನೀಡಿದರು. ಎಸ್​.ಪಿ.ಸುಳ್ಳದ್​, ಪೀರಪ್ಪ ಹೂಗುಂಡ, ಬಸವರಾಜ ಬಳೂಂಡಗಿ, ಮಹೇಶ ಹೂಗಾರ್​, ವಿಜಯಕುಮಾರ ಜಮಖಂಡಿ ಇತರರಿದ್ದರು. 
ಕಲಬುರಗಿ

ಏಕತೆ ಮೌಲ್ಯ ಮೈಗೂಡಿಸಿಕೊಂಡು ಉತ್ತಮ ನಾಯಕರಾಗಿ

ಕಲಬುರಗಿ: ಸ್ಕೌಟ್ಸ್​ ಮತ್ತು ಗೈಡ್ಸ್​ ವಿದ್ಯಾರ್ಥಿಗಳು ದೇಶದ ಏಕತೆ ಮೌಲ್ಯ ಮೈಗೂಡಿಸಿಕೊಂಡು ಭವಿಷ್ಯದಲ್ಲಿ ಉತ್ತಮ ನಾಯಕರಾಗಿ ಹೊರಹೊಮ್ಮಬೇಕು ಎಂದು ಎಸ್​.ಪಿ.ಸುಳ್ಳದ ಕರೆ ನೀಡಿದರು.

ಅಪ್ಪಾ ಪಬ್ಲಿಕ್​ ಶಾಲೆಯಲ್ಲಿ ಭಾರತ ಸ್ಕೌಟ್ಸ್​ ಮತ್ತು ಗೈಡ್ಸ್​ ಜಿಲ್ಲಾ ಸಂಸ್ಥೆಯಿಂದ ಬುಧವಾರ ಹಮ್ಮಿಕೊಂಡಿದ್ದ ವಿಭಾಗ ಮಟ್ಟದ ದೇಶಭಕ್ತಿ ಹಾಗೂ ಜಾನಪದ ಗೀತ ಗಾಯನ ಸ್ಪರ್ಧೆಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಸ್ಪರ್ಧೆಯಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ವಿಭಾಗ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟದ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ತಮ್ಮ ಜಿಲ್ಲೆಗಳಿಗೆ ಕೀರ್ತಿ ತರಬೇಕು ಎಂದು ಹೇಳಿದರು.

ರಾಜ್ಯ ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಬಸವರಾಜ ಬಳೂಂಡಗಿ, ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಮಹೇಶ ಹೂಗಾರ, ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಜಿಲ್ಲಾಧ್ಯಕ್ಷ ಸಂತೋಷ ಗಂಗೂ ಮಾತನಾಡಿದರು.

ವಿಭಾಗೀಯ ಸಹಾಯಕ ಆಯುಕ್ತ ಸಿ.ಬಿ.ಪಾಟೀಲ್​ ಓಕಳಿ ಸ್ಪರ್ಧೆಗೆ ಚಾಲನೆ ನೀಡಿದರು. ದಕ್ಷಿಣ ಕ್ಷೇತ್ರದ ಶಿಕ್ಷಣಾಧಿಕಾರಿ ವಿಜಯಕುಮಾರ ಜಮಖಂಡಿ, ಪ್ರಮುಖರಾದ ಸೈಯದ್​ ಮೊಹಮ್ಮದ್​, ಸುಜಾತಾ ಮುಲ್ಲಾ, ರಾಜಕುಮಾರ ಮರಾಠೆ, ಪ್ರಮೀಳಾ ಪಾಟೀಲ್​, ರಮೇಶ ತಿಪಶೆಟ್ಟಿ, ಶಂಕರಗೌಡ ಹೊಸಮನಿ, ಶಿವಶರಣಪ್ಪ ಮಂಠಾಳೆ, ಅಮರೇಶ ಕೂರಿ, ಸುಮಂಗಲಾ ಎನ್​.ಎಂ., ರಾಣಪ್ಪ ಸಂಗನ, ನರಸಿಂಗ್​ ರಾಠೋಡ್​, ಸಂಗೀತಾ ತಿವಾರಿ, ಶೋಭಾ ಸಿಂಗೆ, ಶಿವಲೀಲಾ ಕಲಗುರಕಿ ಇತರರಿದ್ದರು.

ಜಿಲ್ಲಾ ಕಾರ್ಯದರ್ಶಿ ಪೀರಪ್ಪ ಹೂಗುಂಡ ಪ್ರಾಸ್ತಾವಿಕ ಮಾತನಾಡಿದರು. ಜಯಪ್ರಕಾಶ ಕಟ್ಟಿಮನಿ ನಿರೂಪಣೆ ಮಾಡಿದರು. ಗುರುಲಿಂಗಯ್ಯ ಹಿರೇಮಠ ವಂದಿಸಿದರು.