ಅಫಜಲಪುರ: ದೇಶದ ಸ್ವಾತಂತ್ರ್ಯಕ್ಕಾಗಿ ತನ್ನ ಜೀವವನ್ನೇ ಪಣಕ್ಕಿಟ್ಟ ವೀರ ರಾಣಿ ಕಿತ್ತೂರು ಚನ್ನಮ್ಮ ಅವರು ಮನುಕುಲಕ್ಕೆ ದಾರಿದೀಪ ಎಂದು ಪಂಚಮಸಾಲಿ ಸಮಾಜದ ತಾಲೂಕು ಅಧ್ಯ ಚಂದು ದೇಸಾಯಿ ಹೇಳಿದರು. ವೀರ ರಾಣಿ ಕಿತ್ತೂರು ಚನ್ನಮ್ಮ ವೃತ್ತದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಿತ್ತೂರು ಚನ್ನಮ್ಮ ಅವರ 248ನೇ ಜಯಂತಿಯಲ್ಲಿ ಮಾತನಾಡಿ, ರಾಣಿ ಚನ್ನಮ್ಮ ಮೂರ್ತಿ ಪ್ರತಿಷ್ಠಾಪನೆ ಹಾಗೂ ವೃತ್ತ ನಿರ್ಮಾಣಕ್ಕಾಗಿ ಶ್ರಮಿಸಲಾಗುವುದು. ಈ ನಿಟ್ಟಿನಲ್ಲಿ ಶ್ರೀದಲ್ಲಿ ಸಮಾಜದ ಪ್ರಮುಖರ ಸಭೆ ಕರೆದು ಚರ್ಚಿಸಲಾಗುವುದು. ಈಗಾಗಲೇ ಶಾಸಕ ಎಂ.ವೈ.ಪಾಟೀಲ್, ಕೆಕೆಆರ್ಟಿಸಿ ಅಧ್ಯ ಅರುಣಕುಮಾರ ಪಾಟೀಲ್ ಅರೊಂದಿಗೆ ಚರ್ಚಿಸಿದ್ದು, ಸಹಕಾರ ನೀಡುವುದಾಗಿ ಭರವಸೆ ನೀಡಿದ್ದಾರೆ ಎಂದರು. ಪ್ರಮುಖರಾದ ಬಸವರಾಜ ವಾಳಿ, ನಾಗರಾಜ ಬಿ., ಶಿವಪುತ್ರ ಬಿ., ಯಶ್ವಂತ ಬಡದಾಳ, ಸಿದ್ದನಗೌಡ ಪಾಟೀಲ್, ಬಸವರಾಜ ಮ್ಯಾಳೇಸಿ, ಸಾಯಬಣ್ಣ ಬೊರೇಗಾಂವ, ಮಲ್ಲಿಕಾರ್ಜುನ ಡಾಂಗೆ, ಭಾಗೇಶ ಬೊರೇಗಾಂವ, ಜಗದೇವಪ್ಪ ಸಾತಲಗಾಂವ, ಮಳೆಪ್ಪ ಡಾಂಗೆ, ಸಿದ್ದು ಅತನೂರ, ರಾಜು ಬೂತಿ, ಎಚ್.ಸಿ.ಪಾಟೀಲ್, ರವಿ ಇತರರಿದ್ದರು.