kalaburagi urban develpment
- ಪ್ರಿಯಾಂಕ್ ಖರ್ಗೆ ಹೇಳಿಕೆ
- ರು.11.99 ಕೋಟಿ ವೆಚ್ಚದ 40 ಕಾಮಗಾರಿಗೆ ಅಡಿಗಲ್ಲು
ಕಲಬುರಗಿ: ಅಪ್ಪನ ಕೆರೆ, ಕಲಬುರಗಿ ಕೋಟೆ ಅಭಿವೃದ್ಧಿ ಸೇರಿ ಹಲವು ಜನಪರ, ಪ್ರವಾಸೋದ್ಯಮ ಪೂರಕ ಯೋಜನೆ ನಗರಕ್ಕೆ ಬರಲಿದ್ದು, ನಗರದ ಸಮಗ್ರ ಅಭಿವೃದ್ಧಿ ಮಾಡಿ, ನವ ನಗರ ನಿರ್ಮಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಭರವಸೆ ನೀಡಿದರು.
ನಗರದ ಹುಮನಾಬಾದ ರಿಂಗ್ ರಸ್ತೆ ವೃತ್ತದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಅನುದಾನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ಮುಂಭಾಗ ನವೀಕರಣ, ವಿವಿಧ ವಾರ್ಡ್ಗಳಲ್ಲಿ ಉದ್ಯಾನ, ವೃತ್ತಗಳ ಅಭಿವೃದ್ಧಿ ಹಾಗೂ ಸ್ಮಶಾನ ಅಭಿವೃದ್ಧಿ ಸೇರಿ 11.99 ಕೋಟಿ ವೆಚ್ಚದ 40 ವಿವಿಧ ಅಭಿವೃದ್ಧಿ ಕಾಮಗಾರಿಗೆ ಅಡಿಗಲ್ಲು ನೆರವೇರಿಸಿ ಮಾತನಾಡಿದರು.
ನಗರದ ಅಭಿವೃದ್ಧಿಗೆ ನೀಲಿನೆ ತಯಾರಿಸಿದ್ದು, ನಗರದ 17 ವಾರ್ಡ್ ಉದ್ಯಾನಗಳನ್ನು 3.16 ಕೋಟಿ ರೂ. ಮತ್ತು 4 ಪ್ರಮುಖ ವೃತ್ತಗಳು 5 ಕೋಟಿ, ರೂ.ನಲ್ಲಿ ಹೊಸ ರೂಪ ಪಡೆಯಲಿವೆ. 3.58 ಕೋಟಿ ರೂ. ವೆಚ್ಚದಲ್ಲಿ 18 ರುದ್ರಭೂಮಿ ಸುಧಾರಣೆ, 25 ಲಕ್ಷ ರೂ.ನಲ್ಲಿ ಕೂಡಾ ಕಚೇರಿ ನವೀಕರಣಕ್ಕೆ ವಿನಿಯೋಗಿಸಲಾಗುತ್ತಿದೆ ಎಂದರು.
ಡಾ.ಮಲ್ಲಿಕಾರ್ಜುನ ರ್ಖಗೆ ಅವರು ಕಲಬುರಗಿಗೆಗೆ 371 ಜೆ, ಇಎಸ್ಐ ಆಸ್ಪತ್ರೆ ಸೇರಿ ಮಹತ್ತರ ಕೊಡುಗೆ ನೀಡಿದ್ದಾರೆ. ಕಾಂಗ್ರೆಸ್ ಪಕ್ಷ ಅಭಿವೃದ್ಧಿಗೆ ಶ್ರಮಿಸಿದೆ ಎಂದರು.
ಶಾಸಕ ಅಲ್ಲಮಪ್ರಭು ಪಾಟೀಲ್ ಮಾತನಾಡಿ, 30 ವರ್ಷದ ಅಗತ್ಯತೆ ಗಮನದಲ್ಲಿ ಇಟ್ಟುಕೊಂಡು ಸಚಿವ ಪ್ರಿಯಾಂಕ್ ರ್ಖಗೆ ದೂರದೃಷ್ಟಿಯ ಕಾಮಗಾರಿ ಕೈಗೊಳ್ಳುತ್ತಿದ್ದಾರೆ. ರಾಮಮಂದಿರ ಸೇರಿ 4 ಪ್ರಮುಖ ವೃತ್ತಗಳ ಸೌಂದಯೀರ್ಕರಣ, 18 ಸ್ಮಶಾನ ನವೀಕರಣ , ಉದ್ಯಾನ ಅಭಿವೃದ್ಧಿ, ಮಹಿಳಾ ಕ್ರೀಡಾಂಗಣ, ಮೃಗಾಲಯ, ಹಸಿರು ನಾಡು ಮಾಡಲಾಗುತ್ತಿದೆ ಎಂದರು.
ಕೂಡಾ ಅಧ್ಯಕ್ಷ ಮಜರ್ ಆಲಂಖಾನ್ ಮಾತನಾಡಿದರು. ಕೂಡಾ ಆಯುಕ್ತ ಶ್ರೀಶೈಲ್ ಸಿಂಗ್ ಸ್ವಾಗತಿಸಿದರು. ಎಂಎಲ್ಸಿ ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ್ ಹರವಾಳ, ಪ್ರಮುಖರಾದ ಸೈಯ್ಯದ್ ಮಹೆಬೂದ್ ಚಿಸ್ತಿ ಸಾಹೇಬ್, ಚಂದ್ರಿಕಾ ಪರಮೇಶ್ವರ, ಮೇಯರ್ ವರ್ಷಾ ಜಾನೆ, ಡಿಸಿ ಇಕ್ರಮ್ ಶರ್ೀ, ಜಿಪಂ ಸಿಇಓ ಭಂವರ್ಸಿಂಗ್ ಮೀನಾ, ಪಾಲಿಕೆ ಆಯುಕ್ತ ಅವಿನಾಶ ಶಿಂಧೆ ಇತರರಿದ್ದರು.
ನಗರದ ಸಮಗ್ರ ಅಭಿವೃದ್ಧಿ, ಹಸುರೀಕರಣ ಮತ್ತು ಮೂಲ ಸೌಕರ್ಯ ಮೇಲ್ದರ್ಜೆಗೇರಿಸಲು 11.99 ಕೋಟಿ ರೂ. ವೆಚ್ಚದಲ್ಲಿ ವಿವಿಧ ಯೋಜನೆಗೆ ಚಾಲನೆ ನೀಡಲಾಗಿದೆ. 11 ಉದ್ಯಾನಗಳ ಟೆಂಡರ್ ಪ್ರಕ್ರಿಯೆ ಶ್ರೀ ಮುಗಿಯಲಿದೆ. ನಗರದ ಪ್ರಮುಖ ರಸ್ತೆಗಳ ವೃತ್ತಗಳ ಸೌಂದಯೀರ್ಕರಣ ಮತ್ತು ನಗರಾಭಿವೃದ್ಧಿ ಪ್ರಾಧಿಕಾರದ ಹಳೇ ಕಚೇರಿ ಕಟ್ಟಡ ಆಧುನಿಕ ಶೈಲಿಯಲ್ಲಿ ನವೀಕರಿಸುವ ಕೆಲಸಗಳು ಪ್ರಗತಿಯಲ್ಲಿವೆ.
— > ಮಜರ್ ಆಲಂಖಾನ್ ಅಧ್ಯಕ್ಷ ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರ