ಆಳಂದನಲ್ಲಿ ಹಮ್ಮಿಕೊಂಡಿದ್ದ ಸಮಾರಂಭದಲ್ಲಿ ರಾಜ್ಯ ಹಾಗೂ ಜಿಲ್ಲಾ ಮಟ್ಟದಲ್ಲಿ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸತರನ್ನು ಸತ್ಕರಿಸಲಾಯಿತು. ಶಿವಶರಣಪ್ಪ ಮೂಳೆಗಾಂವ್​, ರವೀಂದ್ರ ಕಂಠೆಕುರೆ, ಪ್ರಭಾಕರ ಸಲಗೆರೆ, ಸತೀಶ ಷಣ್ಮುಖ, ವಿಜಯಕುಮಾರ ಜಿಡಗಿ ಇತರರಿದ್ದರು. 
ಕಲಬುರಗಿ

ವಿದ್ಯಾರ್ಥಿಗಳಲ್ಲಿ ವಿಜ್ಞಾನ ಆಸಕ್ತಿ ಮೂಡಿಸುವ ಕೆಲಸವಾಗಲಿ

ಆಳಂದ: ವಿಜ್ಞಾನವು ಮಾನವನ ಜೀವನವನ್ನು ಸುಲಭ, ಸುರಕ್ಷಿತವಾಗಿಡುವ ಮಹತ್ವದ ಶಕ್ತಿ ಹೊಂದಿದೆ ಎಂದು ಭಾರತ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾಧ್ಯಕ್ಷ ಶಿವಶರಣಪ್ಪ ಮೂಳೆಗಾಂವ್​ ತಿಳಿಸಿದರು.

ಸರ್ಕಾರಿ ನೌಕರರ ಭವನದಲ್ಲಿ ಭಾರತ ಜ್ಞಾನ ವಿಜ್ಞಾನ ಸಮಿತಿಯಿಂದ ಶನಿವಾರ ಹಮ್ಮಿಕೊಂಡಿದ್ದ ರಾಷ್ಟ್ರೀಯ ವೈಜ್ಞಾನಿಕ ಮನೋಭಾವ ದಿನ ಕಾರ್ಯಕ್ರಮದಲ್ಲಿ ಮಾತನಾಡಿ, ನಾವು ಬಳಸುವ ಮೊಬೈಲ್​, ವಿದ್ಯುತ್​, ಔಷಧಿ, ವಾಹನ, ಇಂಟರ್​ನೆಟ್​ ಇವೆಲ್ಲವೂ ವಿಾನದ ಕೊಡುಗೆಯಾಗಿವೆ. ವಿದ್ಯಾರ್ಥಿಗಳಲ್ಲಿ ವಿಜ್ಞಾನ ಆಸಕ್ತಿ ಬೆಳೆಸುವುದು, ಸಂಶೋಧನೆ ಮತ್ತು ಅವಿಷ್ಕಾರಗಳಿಗೆ ಉತ್ತೇಜನ ನೀಡುವ ಕೆಲಸ ಆಗಬೇಕಿದೆ ಎಂದು ಅಭಿಪ್ರಾಯಪಟ್ಟರು.

ಸಮಾಜದ ಸಮಸ್ಯೆಗಳಿಗೆ ವೈಜ್ಞಾನಿಕ ಪರಿಹಾರ ಕಂಡುಹಿಡಿಯಬೇಕು. ಎಲ್ಲರೂ ಮೂಢನಂಬಿಕೆಗಳಿಂದ ಹೊರಬರಬೇಕು. ತಪ್ಪು, ಅನ್ಯಾಯವನ್ನು ಖಂಡಿಸುವ ಎದೆಗಾರಿಕೆ ಬೆಳೆಸಿಕೊಳ್ಳಬೇಕು. ಪ್ರತಿ ಜ್ಞಾನದ ಹಿಂದೆ ವಿಜ್ಞಾನ ಇರುತ್ತದೆ, ವಿಜ್ಞಾನ ಚಳವಳಿಯನ್ನು ಜನರ ಮಧ್ಯೆ ತೆಗೆದುಕೊಂಡು ಹೋಗುವ ಕೆಲಸ ಆಗಬೇಕಿದೆ ಎಂದರು.

ಶಿಕ್ಷಕ ಬಸವರಾಜ ಪಾವಲೆ, ಸತೀಶ ಷಣ್ಮುಖ, ಮರೆಪ್ಪ ಬಡಿಗೇರ, ವಿಜಯಕುಮಾರ ಜಿಡಗಿ, ಚಂದ್ರಕಾಂತ ಪೂಜಾರಿ, ಶ್ರೀಶೈಲ ಮಾಡಿಯಾಳೆ ಮಾತನಾಡಿದರು. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಧ್ಯಾಪಕ ಡಾ.ರವೀಂದ್ರ ಕಂಠೆಕುರೆ ಅಧ್ಯಕ್ಷತೆ ವಹಿಸಿದ್ದರು.

ಪ್ರಭಾಕರ ಸಲಗರೆ ಇತರರಿದ್ದರು. ರಾಜ್ಯ ಹಾಗೂ ಜಿಲ್ಲಾ ಮಟ್ಟದ ಉತ್ತಮ ಶಿಕ್ಷಕ ಪ್ರಶಸ್ತಿ ಪುರಸತರಾದ ನಿಂಗಪ್ಪ ಮಂಗೊಂಡಿ, ಮಲ್ಲಿಕಾರ್ಜುನ ಪಟ್ಟಣ, ರೇವಣಸಿದ್ದಪ್ಪ ಯಾದವಾಡ, ಮಹಾದೇವ ಗುಣಕಿ, ಲಕ್ಷ್ಮೀ ಪಾಟೀಲ್​, ಚಂದ್ರಕಾಂತ ಬಬಲಾದಕರ್​ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು.