ಮಹಾಗಾಂವ್​ ಕ್ರಾಸ್​ನಲ್ಲಿರುವ ಮೌಂಟ್​ವೇವ್​ ಕಾಲೇಜಿನಲ್ಲಿ ಹಮ್ಮಿಕೊಂಡ ಶಿಕರ ದಿನಾಚರಣೆಯಲ್ಲಿ ಸಾಧಕರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಸತ್ಕರಿಸಲಾಯಿತು. ಶಿವಪ್ರಭು ಪಾಟೀಲ್​, ವೈಜನಾಥ ತಡಕಲ್​, ವಿಜಯಕುಮಾರ ತೇಗಲತಿಪ್ಪಿ, ಶಿವಶೆಟ್ಟಿ ಪಾಟೀಲ್​ ಇತರರಿದ್ದರು. 
ಕಲಬುರಗಿ

ಮಕ್ಕಳಲ್ಲಿನ ಅಜ್ಞಾನ ದೂರವಾಗಿಸುವ ಕೆಲಸ ಆಗಲಿ

ಕಮಲಾಪುರ: ಪ್ರತಿ ಯಶಸ್ವಿ ವ್ಯಕ್ತಿ ಹಿಂದೆ ಗುರುವಿನ ಆಶೀರ್ವಾದ ಇದ್ದೆ ಇರುತ್ತದೆ. ಮುಂದೆ ಗುರಿ, ಹಿಂದೆ ಗುರು ಇದ್ದಾಗ ಮಾತ್ರ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದು ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ವೈಜನಾಥ ತಡಕಲ್​ ಹೇಳಿದರು.

ಮಹಾಗಾಂವ್​ ಕ್ರಾಸ್​ನಲ್ಲಿರುವ ಮೌಂಟ್​ವೇವ್​ ಪದವಿಪೂರ್ವ ಕಾಲೇಜಿನಲ್ಲಿ ಕನ್ನಡ ಸಾಹಿತ್ಯ ಪರಿಷತ್​ನಿಂದ ಭಾನುವಾರ ಹಮ್ಮಿಕೊಂಡಿದ್ದ ಶಿಕ್ಷಕರ ದಿನಾಚರಣೆ ಹಾಗೂ ಸಾರ್ಥಕ ಶಿಕ್ಷಕ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮಾತನಾಡಿ, ಶಿಕ್ಷಕರು ಉತ್ತಮ ಸಮಾಜದ ನಿರ್ಮಾಪಕರಾಗಿದ್ದು, ಮಕ್ಕಳಲ್ಲಿನ ಅಜ್ಞಾನವೆಂಬ ಅಂಧಕಾರ ಅಳಿಸಿ ಜ್ಞಾನವೆಂಬ ಬೆಳಕನ್ನು ನೀಡಬೇಕು. ಶಿಕ್ಷಕರನ್ನು ಗೌರವಿಸುವ ಶ್ರೇಷ್ಠ ಕಾರ್ಯ ಪರಿಷತ್​ ನಡೆಸುತ್ತದೆ. ಪ್ರಸ್ತುತ ಸಮಾಜದಲ್ಲಿ ಕೇವಲ ಅಂಕಗಳಿಕೆಗೆ ಪ್ರಾಧಾನ್ಯತೆ ನೀಡುತ್ತಿರುವುದು ಉತ್ತಮ ಬೆಳವಣಿಗೆಯಲ್ಲ. ಮಕ್ಕಳನ್ನು ಹಣಗಳಿಸುವ ಯಂತ್ರಗಳನ್ನಾಗಿಸುವುದನ್ನು ಬಿಟ್ಟು ಉತ್ತಮ ಸಂಸ್ಕಾರ ನೀಡುವುದು ಅತ್ಯವಶ್ಯಕವಾಗಿದೆ ಎಂದು ಶ್ಲಾಘಸಿದರು.

ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಶಿವಪ್ರಭು ಪಾಟೀಲ್​ ಮಾತನಾಡಿ, ಗುರುಗಳ ಮಾರ್ಗದರ್ಶನವಿಲ್ಲದೆ ಯಾರೊಬ್ಬರೂ ಯಶಸ್ವಿಯಾಗಲು ಸಾಧ್ಯವಿಲ್ಲ. ಕನ್ನಡ ಭಾಷೆ ಉಳಿಸಿ, ಬೆಳೆಸುವಲ್ಲಿ ಶಿಕ್ಷಕರ ಹಾಗೂ ಕನ್ನಡ ಸಾಹಿತ್ಯ ಪರಿಷತ್​ನ ಕೊಡುಗೆ ಅಪಾರವಾಗಿದೆ. ನಿರಂತರ ಕಾರ್ಯಕ್ರಮಗಳ ಮೂಲಕ ಸಾಂಸ್ಕೃತಿಕ ಜಿಲ್ಲೆಯನ್ನಾಗಿಸಲು ಕಸಾಪ ಶ್ರಮಿಸುತ್ತಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಕನ್ನಡ ಸಾಹಿತ್ಯ ಪರಿಷತ್​ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಮಾತನಾಡಿ, ಪರಿಷತ್ತಿನಿಂದ ಜಿಲ್ಲೆಯ ಪ್ರತಿ ತಾಲೂಕುಗಳಲ್ಲಿಯೂ ಶಿಕ್ಷಕರನ್ನು ಗೌರವಿಸುವ ಕಾರ್ಯ ನಿರಂತರವಾಗಿ ಮಾಡುತ್ತಿದ್ದೇವೆ. ಕನ್ನಡ ಭಾಷೆ ಎಂದರೆ ಮೂಗು ಮುರಿಯುವ ವಾತಾವರಣದಲ್ಲಿ ನಾವಿದ್ದೇವೆ. ಇಂಥ ಸಂದಿಗ್ಧ ಪರಿಸ್ಥಿತಿಯಲ್ಲೂ ಗಡಿ ಭಾಗಗಳಿಗೆ ಹೋಗಿ ಕನ್ನಡದ ಜಾಗೃತಿ ಕೆಲಸ ಪರಿಷತ್​ ಮಾಡುತ್ತಿದೆ. ಇದಕ್ಕೆ ನಿಮ್ಮೆಲ್ಲರ ಸಹಕಾರ ಅಗತ್ಯ ಎಂದು ಹೇಳಿದರು.

ಜಿಪಂ ಮಾಜಿ ಸದಸ್ಯ ಶಿವಶಕ್ತಿ ಪಾಟೀಲ್​, ಸರ್ಕಾರಿ ಪ್ರೌಢಶಾಲಾ ಶಿಕರ ಸಂಘದ ಉಪಾಧ್ಯಕ್ಷ ಪ್ರಕಾಶ ನರೋಣಾ ಮಾತನಾಡಿದರು.

ಕಸಾಪ ತಾಲೂಕು ಅಧ್ಯಕ್ಷ ಸುರೇಶ ಲೇಂಗಟಿ, ಪ್ರಮುಖರಾದ ಶಿವರಾಜ ಅಂಡಗಿ, ಧರ್ಮಣ್ಣ ಧನ್ನಿ, ರಾಜೇಂದ್ರ, ಮಿಟ್ಟೆಸಾಬ್​ ಮುಲ್ಲಾ, ಸೋಮನಗೌಡ ವಿಟ್ಲಾಪುರ, ಮಹೇಶ ಚಿತ್ತಾಪಳ್ಳಿ, ರೋಹಿದಾಸ್​, ಅನ್ನಪೂರ್ಣ ಉಳ್ಳಾಗಡ್ಡಿ, ರವೀಂದ್ರ ಬಿ.ಕೆ., ಸಂಜಯ ಕುಮಾರ ನಾಟೀಕರ್​, ಅನಂತಕುಮಾರ ಪಾಟೀಲ್​, ಪ್ರೇಮಾ ಅಂತಪನಾಳ, ಕಾವೇರಿ ಇತರರಿದ್ದರು.

ಕೀರ್ತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ಪ್ರೀತಿ ಹಾಗೂ ಸಂಗಡಿಗರು ಸ್ವಾಗತಿಸಿದರು.

ಮೌಂಟ್​ವೇವ್​ ಪಿಯು ಕಾಲೇಜಿನ ಪ್ರಾಂಶುಪಾಲ ಮಹಾದೇವ ಬಡ ನಿರೂಪಣೆ ಮಾಡಿದರು. ಅನಂತಕುಮಾರ ಪಾಟೀಲ್​ ಸ್ವಾಗತಿಸಿದರು. ಸಂಜಯಕುಮಾರ ನಾಟಿಕಾರ್​ ವಂದಿಸಿದರು.

ಸಾಧಕರಿಗೆ ಗೌರವ

ರಾಜೇಶ್ವರಿ ಬಿರಾದಾರ, ಅರುಣಕುಮಾರ ಮೂಲಿಮನಿ, ವೆಂಕುಬಾಯಿ ರಜಪೂತ, ಜಲಜಾ ಹಿರೇಮಠ, ಪ್ರಭು ನಾಯಕ್​, ಶೋಭಾ ಪಾಟೀಲ್​, ಮುನವರ ಜಹಾನ್​, ಬಸವರಾಜ ಮರಗುತ್ತಿ, ರಾಜಶ್ರೀ ಪಾಟೀಲ್​, ಆನಂದ ರಾಠೋಡ್​, ಕುಶಾ ಮಂಠಾಳ ಅವರಿಗೆ ಸಾರ್ಥಕ ಶಿಕ್ಷಕ ಪ್ರಶಸ್ತಿ ನೀಡಿ ಗೌರವಿಸಲಾಯಿತು.