Madhu bangarappa 
ಕಲಬುರಗಿ

ಜೂನ್​, ಜುಲೈಗೆ ಶಿಕ್ಷಕರ ನೇಮಕ ಪೂರ್ಣ

ಕಲಬುರಗಿ: ಶೈಕ್ಷಣಿಕ ಪ್ರಗತಿಗೆ, ಲಿತಾಂಶ ಸುಧಾರಣೆಗೆ ಪ್ರಮುಖ ಟ್ಟ ಶಿಕ್ಷಕರ ನೇಮಕಕ್ಕೆ ವೇಗ ನೀಡಿದ್ದು, 13 ಸಾವಿರ ಶಿಕ್ಷಕರನ್ನು ನೇಮಿಸಿದ್ದು, ಶೇ.80 ಆದೇಶ ಪತ್ರ ನೀಡಲಾಗಿದೆ. ಡಿ.6ರಂದು ಟಿಇಟಿ ಪರೀೆ ನಡೆಸಿದ್ದು, ಕಲ್ಯಾಣ ಕರ್ನಾಟಕ ಭಾಗಕ್ಕೆ 5800 ಶಿಕ್ಷಕರ ನೇಮಕ ಆದೇಶ ಹೊರಡಿಸಲಾಗಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಸಚಿವ ಮಧು ಬಂಗಾರಪ್ಪ ಹೇಳಿದರು.
ಟಿಇಟಿ ಪರೀಕ್ಷೆ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ 5,800 ಶಿಕ್ಷಕರ ನೇಮಕಾತಿಗೆ ಆದೇಶ ಹೊರಡಿಸಲಾಗಿದ್ದು, ಸಿಇಟಿ ಮೂಲಕ ಶೀಘ್ರದಲ್ಲೇ ಉಳಿದ ನೇಮಕಾತಿ ಪೂರ್ಣಗೊಳಿಸಲಾಗುವುದು. ಬಾಕಿ ಉಳಿದ ಸ್ಥಾನಕ್ಕೆ ಇಡೀ ರಾಜ್ಯದಲ್ಲಿ 51 ಸಾವಿರ ಅತಿಥಿ ಶಿಕ್ಷಕರನ್ನು ನೇಮಿಸಲಾಗುವುದು. ಎಲ್ಲ ಪ್ರಕ್ರಿಯೆ ಪ್ರಸಕ್ತ ಶೈಕ್ಷಣಿಕ ವರ್ಷ ಪುನ@ರಾರಂಭಕ್ಕೆ ಮುನ್ನ ಪೂರ್ಣಗೊಳಿಸಲಾಗುವುದು ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮರುಪರೀೆಯಿಂದ ಆತ್ಮವಿಶ್ವಾಸ ಹೆಚ್ಚಳ: ವಿದ್ಯಾರ್ಥಿಗಳ ಆತ್ಮವಿಶ್ವಾಸ ಹೆಚ್ಚಿಸಲು ಸುಧಾರಿತ ಹಾಗೂ ಕಠಿಣ ಪರೀಕ್ಷಾ ಪದ್ಧತಿಯಿಂದ ಲಿತಾಂಶ ಕುಸಿದಿದ್ದು, ಮೂರು ಹಂತದ ಪರೀಕ್ಷೆಗಳನ್ನು ರಾಜ್ಯದಲ್ಲಿ ದೇಶದಲ್ಲೇ ಮೊದಲ ಬಾರಿಗೆ ಅಳವಡಿಸಲಾಗಿದೆ. ಇದರ ಫಲವಾಗಿ 1.26 ಲಕ್ಷ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ. ಗಣಿತದಲ್ಲಿ ಮಕ್ಕಳ ಹಿಂದುಳಿಯುವಿಕೆ ನಿವಾರಣೆಗೆ ವಿಶೇಷ ಕ್ರಮ ಕೈಗೊಳ್ಳಲಾಗುತ್ತಿದೆ. ಪಿಯುಸಿಯಲ್ಲೂ ಮರು ಪರೀೆಯಿಂದ ಸುಮಾರು 46 ಸಾವಿರ ವಿದ್ಯಾರ್ಥಿಗಳು ಉತ್ತೀರ್ಣರಾಗಿದ್ದಾರೆ ಎಂದು ಹೇಳಿದರು.
ಅನುದಾನಿತ ಶಾಲೆಗೆ ಅನುಮತಿ: 1995ರ ನಂತರ ಅನುದಾನಿತ ಶಾಲೆಗಳಿಗೆ ಅನುಮೋದನೆ ನೀಡಿಲ್ಲ. ಕನ್ನಡ ಶಾಲೆಗಳು ಉಳಿಸಲು ಈ ಕಾರ್ಯ ಅಗತ್ಯವಿದ್ದು, ಈ ಬಗ್ಗೆ ಆರ್ಥಿಕ ಇಲಾಖೆ ಜತೆ ಚರ್ಚಿಸಿದ್ದು, ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದೆ. ವಾರ್ಷಿಕ 300 ಕೋಟಿ ರೂ. ಹೊರೆ ಆಗುತ್ತದೆ ಎಂದು ಮನವರಿಕೆ ಮಾಡಲಾಗಿದೆ. ಸಿಎಂ ಅನುಮತಿ ನೀಡುವ ಭರವಸೆ ಇದೆ ಎಂದು ಹೇಳಿದರು.
ವಿಧಾನ ಪರಿಷತ್​ ಸದಸ್ಯ ಜಗದೇವ ಗುತ್ತೇದಾರ, ಜಿಲ್ಲಾ ಪಂಚಾಯಿತಿ ಸಿಇಒ ಭಂವರ್​ ಸಿಂಗ್​ ಮೀನಾ, ಶಾಲಾ ಶಿಕ್ಷಣ ಮತ್ತು ಸಾಕ್ಷರತ ಇಲಾಖೆ ಅಪರ ಆಯುಕ್ತ ರಾಹುಲ್​ ಪಾಂಡ್ವೆ ಇತರರಿದ್ದರು.