ಕಲಬುರಗಿ

ರಷ್ಯಾ ಸಮ್ಮೇಳನಕ್ಕೆ ಡಾ.ಜಂಗೆ ಆಯ್ಕೆ

ಕಲಬುರಗಿ: ರಷ್ಯಾದಲ್ಲಿ ಮೇ 18ರಿಂದ ನಡೆಯಲಿರುವ ವಾರ್ಷಿಕ ಅಖಿಲ ರಷ್ಯಾ ಲೈಬ್ರರಿ ಕಾಂಗ್ರೆಸ್​ ಸಮ್ಮೇಳನದಲ್ಲಿ ಭಾರತ ತಂಡದ ಪ್ರತಿನಿಧಿಯಾಗಿ ಗುಲ್ಬರ್ಗ ವಿಶ್ವವಿದ್ಯಾಲಯದ ಗ್ರಂಥಪಾಲಕ ಪ್ರೊ.ಸುರೇಶ ಜಂಗೆ ಆಯ್ಕೆಯಾಗಿದ್ದಾರೆ. ರಷ್ಯನ್​ ಲೈಬ್ರರಿ ಅಸೋಸಿಯೇಶನ್​ ಆಯೋಜಿಸಿರುವ ಐದು ದಿನಗಳ ಸಮ್ಮೇಳನದಲ್ಲಿ ಗ್ರಂಥಪಾಲಕ ಡಾ.ಸುರೇಶ ಜಂಗೆ ಭಾಗವಹಿಸಲಿದ್ದು, ಪ್ರಸ್ತುತ ಗ್ರಂಥಾಲಯ ಕ್ಷೇತ್ರದಲ್ಲಿ ಆಗುತ್ತಿರುವ ಇತ್ತೀಚಿನ ಬದಲಾವಣೆ, ಡಿಜಿಟಲ್​ ತಂತ್ರಜ್ಞಾನದ ಬಳಕೆ, ಗ್ರಂಥಾಲಯಗಳ ಆಧುನೀಕರಣ ಮತ್ತು ಪುಸ್ತಕಗಳ ಸಂಗ್ರಹಣೆ ವಿಧಾನಗಳ ಕುರಿತು ಭಾರತ ಹಾಗೂ ರಷ್ಯಾದ ತಜ್ಞಾರು ಚರ್ಚಿಸುವರು. ಸಮ್ಮೇಳನಕ್ಕೆ ಆಯ್ಕೆಯಾಗಿರುವುದು ವಿಶ್ವವಿದ್ಯಾಲಯಕ್ಕೆ ಕೀರ್ತಿ ತಂದಿದೆ ಎಂದು ಗುಲ್ಬರ್ಗ ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಶಶಿಕಾಂತ ಉಡಿಕೇರಿ ಹರ್ಷ ವ್ಯಕ್ತಪಡಿಸಿದ್ದಾರೆ.