ಬಿಜಿ ಪಾಟೀಲ್ ಕ್ರೀಡಾಂಗಣ, ಕ್ರೀಡಾಕೂಟ ಉದ್ಘಾಟಿಸಿದ ವೆಂಕಟೇಶ ಪ್ರಸಾದ, ಶ್ರೇಯಾಂಕ್ ಪಾಟೀಲ್
- ಕೆಎಸ್ಸಿಎ ಅಧ್ಯಕ್ಷ ವೆಂಕಟೇಶ ಪ್ರಸಾದ್, ಕ್ರಿಕೆಟ ಪಟು ಶ್ರೇಯಾಂಕಾ ಪಾಟೀಲ್ರಿಂದ ಉದ್ಘಾಟನೆ
- ಬಹು ಕ್ರೀಡೆಗಳ ಅಂಕಣ ಹೊಂದಿದ ಕ್ರೀಡಾಂಗಣ
- ಅಂತಾರಾಷ್ಟ್ರೀಯ ಗುಣಮಟ್ಟದ ಸೌಲಭ್ಯ, ಮಾನದಂಡ ಅಳವಡಿಕೆ
ಕಲಬುರಗಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಕ್ರೀಡಾಸಕ್ತಿ ಹೆಚ್ಚುತ್ತಿದ್ದು, ಈ ಭಾಗದ ವಿದ್ಯಾರ್ಥಿಗಳಿಗೆ, ಚಂದ್ರಕಾಂತ ಪಾಟೀಲ್ ಶಾಲೆಯ ಮಕ್ಕಳಿಗೆ ಅತ್ಯಾಧುನಿಕ ಕ್ರೀಡಾಂಗಣವೂ ಬಲ ನೀಡಲಿದ್ದು, ನಿರಂತರ ಅಭ್ಯಾಸದ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳಾಗಿ ಹೊರ ಹೊಮ್ಮಬೇಕು ಎಂದು ಕರ್ನಾಟಕ ರಾಜ್ಯ ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ವೆಂಕಟೇಶ ಪ್ರಸಾದ ಹೇಳಿದರು
ನಗರದ ಚಂದ್ರಕಾಂತ ಪಾಟೀಲ್ ಇಂಗ್ಲಿಷ್ ಮಾಧ್ಯಮ ಶಾಲೆ (ಸಿಬಿಎಸ್ಇ) ಯಲ್ಲಿ ಬುಧವಾರ ಡಾ.ಬಿ.ಜಿ.ಪಾಟೀಲ್ ಕ್ರೀಡಾಂಗಣ ಲೋಕಾರ್ಪಣೆ, 37ನೇ ಕ್ರೀಡಾಕೂಟವನ್ನು ಉದ್ಘಾಟಿಸಿ ಮಾತನಾಡಿ, ಅತ್ಯುತ್ತಮ ಸೌಲಭ್ಯ, ಗುಣಮಟ್ಟದ ಕ್ರೀಡಾಂಗಣ ನಿರ್ಮಿಸಿದ್ದು, ಶಾಲೆ ವಿದ್ಯಾರ್ಥಿಗಳು ನಿತ್ಯ ಪಾಠದ ನಂತರ ಕನಿಷ್ಠ ಎರಡು ಗಂಟೆ ಕ್ರೀಡೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಮೊಬೈಲ್, ಗೇಮ್, ಟಿವಿಯಿಂದ ದೂರ ಉಳಿದು, ಕ್ರಿಕೆಟ್, ುಟಬಾಲ್, ಓಟ, ಬಾಸ್ಕೆಟ್ ಬಾಲ್ ಸೇರಿ ಇತರೆ ಕ್ರೀಡೆ ಅಭ್ಯಾಸದಲ್ಲಿ ಸಕ್ರೀಯವಾಗಿದ್ದರೆ ದೈಹಿಕ, ಮಾನಸಿಕ ಆರೋಗ್ಯ ಸುಸ್ಥಿರವಾಗಿರುತ್ತದೆ. ಅಧ್ಯಯನಕ್ಕೂ ಪೂರಕವಾಗಿರುತ್ತದೆ. ದಿನವಿಡೀ ಚಟುವಟಿಕೆಯಿಂದ ಇರುವಂತೆ ಶಕ್ತಿ ನೀಡುತ್ತದೆ ಎಂದು ಹೇಳಿದರು.
ಎಸ್ಬಿ ಪಾಟೀಲ್ ಗ್ರೂಪ್ನ ವ್ಯವಸ್ಥಾಪಕ ನಿರ್ದೇಶಕ ಚಂದ್ರಕಾಂತ ಬಿ.ಪಾಟೀಲ್ ಮಾತನಾಡಿ, ಭವಿಷ್ಯದಲ್ಲಿ ಕಲ್ಯಾಣ ಕರ್ನಾಟಕದಿಂದ ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಹೊರ ಹೊಮ್ಮಬೇಕು ಎಂದು ಹೇಳಿದರು.
ರಾಷ್ಟ್ರೀಯ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿ ಶ್ರೇಯಾಂಕಾ ಪಾಟೀಲ್ ಮಾತನಾಡಿದರು. ಎಸ್ಬಿ ಪಾಟೀಲ್ ಗ್ರೂಪ್ನ ಅಧ್ಯಕ್ಷ ಡಾ.ಬಿಜಿ ಪಾಟೀಲ್ ಮಾತನಾಡಿದರು. ಎಸ್ಬಿ ಪಾಟೀಲ್ ಗ್ರೂಪ್ನ ಕಾರ್ಯನಿರ್ವಾಹಕ ನಿರ್ದೇಶಕ ಡಾ.ಕೈಲಾಶ್ ಬಿ.ಪಾಟೀಲ್ ಮತ್ತು ಶಾಲಾ ಪ್ರಾಂಶುಪಾಲ ಕೆ.ರವಿಕುಮಾರ ಇತರರಿದ್ದರು.
ಅಂತಾರಾಷ್ಟ್ರೀಯ ಮಟ್ಟದ ಅಂಕಣ
ಕಲ್ಯಾಣ ಕರ್ನಾಟಕ ಭಾಗದಲ್ಲೇ ಪ್ರಥಮ ಬಾರಿಗೆ ಖಾಸಗಿ ಸಿಬಿಎಸ್ಇ ಶಾಲೆಯೊಂದರಲ್ಲಿ ಅಂತಾರಾಷ್ಟ್ರೀಯ ಮಟ್ಟದ ಯುರೋಪಿಯನ್ ಮೇಕ್ ಕ್ರೀಡಾಂಗಣ ಚಂದ್ರಕಾಂತ ಪಾಟೀಲ್ ಆಂಗ್ಲ ಮಾಧ್ಯಮ ಶಾಲೆಯಲ್ಲಿ ನಿರ್ಮಿಸಲಾಗಿದೆ. ಎಲ್ಲ ಅಂತಾರಾಷ್ಟ್ರೀಯ ಮಾನದಂಡಗಳನ್ನು ಅನುಸರಿಸಿ, ಗುಣಮಟ್ಟದ ಸಾಮಗರಿ ಬಳಸಿ ಯುರೋಪಿಯನ್ ಮೇಕ್ ಸಿಂಥೆಟಿಕ್ ರ್ಟಫ್ ಮತ್ತು ಸ್ಯಾಂಡ್ವಿಚ್ನಿಂದ ಮೈದಾನ ನಿರ್ಮಿಸಲಾಗಿದೆ. ಈ ಅಂಕಗಣದಲ್ಲಿ ಕ್ರಿಕೆಟ್, ುಟಬಾಲ್, ಖೋ ಖೋ, ಕಬ್ಬಡ್ಡಿ, ಉದ್ದ ಜಿಗಿತ, ಎತ್ತರ ಜಿಗಿತ, ಹಾಕಿ ಆಡಬಹುದು. ಓಟಕ್ಕೆ ಪ್ರತ್ಯೇಕ ಸಿಂಥೆಟಿಕ್ ಟ್ರಾ$್ಯಕ್ ಸಹ ಹೊಂದಿದೆ. ಅಂತಾರಾಷ್ಟ್ರೀಯ ಕ್ರೀಡಾಪಟುಗಳು ಅಭ್ಯಾಸಕ್ಕೆ ಇರುವ ಎಲ್ಲ ವ್ಯವಸ್ಥೆ, ಮಾನದಂಡದ ಸಾಮರ್ಥ್ಯ ಇಲ್ಲಿ ಅಳವಡಿಸಲಾಗಿದೆ.