- ಕಾರ್ ಡಿಕ್ಕಿ ಆಗಿದ್ದಕ್ಕೆ ಕಿರಿಕ್
ಕಲಬುರಗಿ: ನಗರದ ಸೇಡಂ ರಸ್ತೆಯ ಬಿಲಗುಂದಿ ವೃತ್ತ (ರ್ಖಗೆ ಪೆಟ್ರೋಲ್ ಪಂಪ್)ದ ಬಳಿ ಸಿಗ್ನಲ್ ವೇಳೆ ನಿಲ್ಲಿಸಿದ ವೈದ್ಯನ ಕಾರ್ಗೆ ಅಪರಿಚಿತನೊಬ್ಬ ಹಿಂದಿನಿಂದ ಕಾರ್ ಡಿಕ್ಕಿ ಮಾಡಿದ್ದಲ್ಲದೇ ವೈದ್ಯನ ಮೇಲೆ ಹಲ್ಲೆ ಮಾಡಿದ ಟನೆ ಶುಕ್ರವಾರ ನಡೆದಿದೆ. ಜಿಮ್ಸ್ನ ವೈದ್ಯ ಡಾ.ಅಕ್ಷಯ ಮದನೂರ ಹಲ್ಲೆಗೊಳಗಾದವರು.
ಸಂಜೆ 5ಗಂಟೆಗೆ ಪತ್ನಿಯ ಭೇಟಿಗೆಂದು ಇಎಸ್ಐಸಿ ಆಸ್ಪತ್ರೆಗೆ ಭೇಟಿ ನೀಡಲು ಕಾರ್ನಲ್ಲಿ ಹೊರಟಾಗ ಬಿಲಗುಂದಿ ವೃತ್ತದಲ್ಲಿ ಸಿಗ್ನಲ್ನಲ್ಲಿ ಕಾರ್ ನಿಲ್ಲಿಸಿದ್ದು, ಹಿಂದಿನಿಂದ ವ್ಯಕ್ತಿಯೊಬ್ಬ ಕಾರ್ ಗುದ್ದಿದ್ದಾನೆ. ಪ್ರಶ್ನಿಸಿದಾಗ ವೈದ್ಯನ ಕಾರ್ ಚಾವಿ ತೆಗೆದುಕೊಂಡು ಜಗಳ ಮಾಡಿದ್ದಾನೆ. ಪೊಲೀಸರು ಸಮಾಧಾನ ಪಡಿಸಿ ಕಳುಹಿಸಿದ್ದಾರೆ. ನಂತರ ಬೈಕ್ ಮೇಲೆ ಮೂವರ ಜತೆ ಬಂದ ಅಪರಿಚಿತನು ವೈದ್ಯನನ್ನು ಕಾರ್ನಿಂದ ಹೊರಗೆ ಎಳೆದು, ಹಲ್ಲೆ ಮಾಡಿದ್ದು, ಗಂಭೀರವಾಗಿ ಗಾಯಗೊಂಡಿದ್ದಾನೆ. ಎಂ.ಬಿ.ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.