ಕಲಬುರಗಿ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ನಿಂದ ಅ.28 ಮತ್ತು 29ರಂದು ವಿಶ್ವೇಶ್ವರಯ್ಯ ಭವನದಲ್ಲಿ ಜಿಲ್ಲಾ 23ನೇ ಕನ್ನಡ ಸಾಹಿತ್ಯ ಸಮ್ಮೇಳನ ಹಮ್ಮಿಕೊಳ್ಳಲಾಗಿದ್ದು, ಈಗಿನಿಂದಲೇ ಭರದ ಸಿದ್ಧತೆ ನಡೆಯುತ್ತಿವೆ ಎಂದು ಕಸಾಪ ಜಿಲ್ಲಾಧ್ಯಕ್ಷ ವಿಜಯಕುಮಾರ ತೇಗಲತಿಪ್ಪಿ ಹೇಳಿದರು.
ಕನ್ನಡ ಭವನದಲ್ಲಿ ಶುಕ್ರವಾರ ಜಿಲ್ಲಾ ಸಮ್ಮೇಳನದ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಆಯ್ಕೆಯಾದ ಜಿಲ್ಲಾ ಸರ್ಕಾರಿ ನೌಕರರ ಸಂದ ಅಧ್ಯಕ್ಷ ಬಸವರಾಜ ಬಳೂಂಡಗಿ ಹಾಗೂ ಗೌರವಾಧ್ಯಕ್ಷರಾದ ಮಾಜಿ ಉಪ ಮಹಾಪೌರೆ ನಾಗವೇಣಿ ಕಮಕನೂರ ಅವರನ್ನು ಸತ್ಕರಿಸಿ ಮಾತನಾಡಿ, ಯಶಸ್ವಿ ನುಡಿ ಜಾತ್ರೆಗೆ ಸಕಲ ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದರು,
ಬಸವರಾಜ ಬಳೂಂಡಗಿ, ನಾಗವೇಣಿ ಕಮಕನೂರ ಮಾತನಾಡಿದರು.
ಪ್ರಮುಖರಾದ ಶಿವರಾಜ ಅಂಡಗಿ, ಶರಣರಾಜ ಛಪ್ಪರಬಂದಿ, ಸೈಯ್ಯದ್ ನಜಿರುದ್ದೀನ್ ಮುತ್ತವಲ್ಲಿ, ರವೀಂದ್ರಕುಮಾರ ಭಂಟನಳ್ಳಿ, ಧರ್ಮರಾಜ ಜವಳಿ, ಹಣಮಂತರಾವ ಪೆಂಚನಪಳ್ಳಿ, ನಾಗರಾಜ ಪಾಟೀಲ, ಅನೀಲಕುಮಾರ ತೇಗಲತಿಪ್ಪಿ, ರವಿಕುಮಾರ ಶಹಾಪೂರಕರ್, ರಾಜು ಕೋಷ್ಟಿ, ಪೊ.ಬಿ.ಎ.ಪಾಟೀಲ್ ಮಹಾಗಾಂವ್, ಸಂಗಣ್ಣ ಚೋರಗಸ್ತಿ, ಮಲ್ಲಿನಾಥ ಸಂಗಶೆಟ್ಟಿ, ಜಯಶ್ರೀ ಜಮಾದಾರ, ಪ್ರಭುಶೆಟ್ಟಿ ಮುದ್ದಾ, ನಾಗರಾಜ ಪೂಜಾರಿ, ಮಲ್ಲಿಕಾರ್ಜುನ ಯಂಕಂಚಿ, ಚಂದ್ರಕಾಂತ ಸೂರನ್ ಇತರರಿದ್ದರು.
ಲೋಕೋಪಯೋಗಿ ಇಲಾಖೆ ನಿವೃತ್ತ ಮುಖ್ಯ ಇಂಜಿನಿಯರ್ ಡಾ.ಸುರೇಶ ಶರ್ಮಾ, ವಾಣಿಜ್ಯ ತೆರಿಗೆ ಇಲಾಖೆಯ ಕಾಶಿನಾಥ ಪಲ್ಲೇರಿ ಅವರನ್ನು ಗೌರವಾಧ್ಯಕ್ಷ ಹಾಗೂ ಕಾರ್ಯಾಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಗಿಯಿತು.