ಕಲಬುರಗಿ: ಮಧುಮೇಹ- ಪಾದದ ಶುಶ್ರೂಷೆಗಾಗಿ (ಡಯಾಬಿಟಿಕ್ ಫೂಟ್ ಕೇರ್) ರಾಜ್ಯದ ಎಲ್ಲ ವೈದ್ಯಕಿಯ ಕಾಲೇಜು ಆಸ್ಪತ್ರೆಗಳಲ್ಲಿ ಪೋಡಿಯಾಟ್ರಿಕ್ ವಿಭಾಗಗಳನ್ನು ಆರಂಭಿಸಲಾಗುವುದು. ಇಲಾಖೆಯಿಂದ ತಪಾಸಣೆಗೂ (ಸ್ಕ್ರೀನಿಂಗ್) ವ್ಯವಸ್ಥೆ ಮಾಡಲಾಗುವುದು ಎಂದು ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಹೇಳಿದರು.
ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಪ್ರಯಾಸ್ (ಪೋಡಿಯಾಟ್ರಿ ರೀಚ್ ಅಕ್ರಾಸ್ ಇಂಡಿಯಾ ಾರ್ ಅವರೇನೇಸ್ ಆ್ಯಂಡ್ ಸ್ಕ್ರೀನಿಂಗ್) ಸಂಸ್ಥೆಯಿಂದ ಸೋಮವಾರ ಏರ್ಪಡಿಸಿದ್ದ ರಾಷ್ಟ್ರೀಯ ಅಭಿಯಾನಕ್ಕೆ ಚಾಲನೆ ನೀಡಿ, ಡಿಜಿಟಲ್ ಪೋಡಿಯಾಟ್ರಿ ತಪಾಸಣೆ ವ್ಯಾನ್ ಉದ್ಘಾಟಿಸಿ ಮಾತನಾಡಿ, ಭಾರತದಲ್ಲೇ ಪ್ರಥಮ ಪ್ರಯೋಗ ಇದಾಗಿದೆ ಎಂದರು.
ಬೆಂಗಳೂರಿನಲ್ಲಿರುವ ಎಂಡೋಕೆನಾಲಜಿ ಉತ್ತಮವಾಗಿ ಕೆಲಸ ನಿರ್ವಹಿಸುತ್ತಿದ್ದು, ಅದೇ ಮಾದರಿ ಕಲಬುರಗಿ, ಮೈಸೂರಿನಲ್ಲಿ ಶಾಖಾ ಕೇಂದ್ರಗಳನ್ನು ಸ್ಥಾಪಿಸಲಾಗುವುದು. ಆಧುನಿಕ ತಂತ್ರಜ್ಞಾನದ ನೆರವಿನೊಂದಿಗೆ ಸಕ್ಕರೆ ರೋಗಿಗಳ ಪಾದದಲ್ಲಿನ ಬಿರುಕುಗಳನ್ನು ಆರಂಭದಲ್ಲೇ ತಪಾಸಣೆ ಮಾಡಿದರೆ ಪತ್ತೆ ಹಚ್ಚಬಹುದು. ಇದರಿಂದ ಒತ್ತಡ ಕಡಿಮೆ ಆಗಿ, ಪಾದಗಳನ್ನು ರಸಲು ಸಾಧ್ಯವಿದೆ. ಭಾರತ ಮಧುಮೇಹದ ತವರಾಗಿದ್ದು, ಪಾದಗಳ ಸುರಕ್ಷತೆ ಬಗ್ಗೆ ಜಾಗೃತಿ ಅಗತ್ಯವಾಗಿದೆ ಎಂದು ತಿಳಿಸಿದರು.
ಜಿಮ್ಸ್ ಆವರಣದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಕೈಗೊಂಡಿದ್ದು, ತಾಯಿ -ಮಗು ಆಸ್ಪತ್ರೆ, ಕ್ರಿಟಿಕಲ್ ಕೇರ್ ಯೂನಿಟ್, ಟ್ರಾಮಾ ಕೇರ್ ಸೆಂಟರ್ ಜತೆಗೆ ನಿಮ್ಹಾನ್ಸ್ ಶಾಖೆ, ಜಯದೇವ ಹೃದ್ರೋಗ ಆಸ್ಪತ್ರೆ ಶಾಖೆ, ಐವಿಎಫ್ ವ್ಯವಸ್ಥೆ ಮತ್ತಿತರ ಸೌಕರ್ಯಗಳನ್ನು ಸ್ಥಾಪಿಸಿ ಕಲಬುರಗಿ ನಗರವನ್ನು ಆರೋಗ್ಯ ಹಬ್ ಮಾಡಲಾಗಿದೆ ಎಂದರು.
ಫೂಟ್-ಸೆಕ್ಯೂರ್ ಸ್ಥಾಪಕ ಡಾ.ಸಂಜಯ್ ಶರ್ಮ ಮಾತನಾಡಿ, ಪ್ರಪಂಚದಲ್ಲಿ 20 ಸೆಕೆಂಡಿಗೆ ಓರ್ವ ವ್ಯಕ್ತಿಯ ಕಾಲನ್ನು ಕತ್ತರಿಸುವ ಸ್ಥಿತಿ ಬಂದಿದೆ. ಭಾರತದಲ್ಲಿ ಪ್ರತಿ ವರ್ಷ 14 ಲಕ್ಷ ಜನರ ಕಾಲುಗಳನ್ನು ಶಸ್ತ್ರಚಿಕಿತ್ಸೆಯಿಂದ ಕತ್ತರಿಸಲಾಗುತ್ತಿದೆ. ಆದರೆ ಇವುಗಳಲ್ಲಿ ಬಹುತೇಕ ತಡೆಗಟ್ಟಬಹುದಾದ, ನಿಯಂತ್ರಿಸಬಹುದಾಗ ಪ್ರಕರಣಗಳಿದ್ದವು ಎಂದರು.
ಸ್ರೈಡ್ ಏಯ್ಡ್' ಸ್ಥಾಪಕ ತಜ್ಞ ವೈದ್ಯ ಡಾ.ಪವನ್ ಬೇಲೆಹಳ್ಳಿ ಮಾತನಾಡಿ, ಡಯಾಬಿಟಿಕ್ ಫೂಟ್ ರೋಗ ಗಂಭೀರ, ತೀವ್ರ ಉದಾಸೀನಕ್ಕೆ ಒಳಗಾಗಿರುವ ಅನಾರೋಗ್ಯವಾಗಿದೆ. ಸಕ್ಕರೆ ಕಾಯಿಲೆ ಹಾಗೂ ಪ್ರೀ-ಡಯಾಬಿಟಿಕ್ ಪ್ರಕರಣಗಳು ಹೆಚ್ಚುತ್ತಿರುವುದರಿಂದ ಆರಂಭಿಕ ಹಂತದಲ್ಲಿ ಪತ್ತೆ ಹಾಗೂ ಜಾಗೃತಿ ಬಹಳ ಮುಖ್ಯ. ರೋಗಿಗಳಿಗೆ ಸಕಾಲಿಕ ತಪಾಸಣೆ ಹಾಗೂ ಸೂಕ್ತ ಚಿಕಿತ್ಸೆ ನೀಡುವುದು ಪೆಯಾಸ್ ಉದ್ದೇಶ ಎಂದರು.
ಜಿಮ್ಸ್ನ ಡೀನ್ ಹಾಗೂ ನಿರ್ದೇಶಕ ಡಾ.ಉಮೇಶ ಎಸ್.ಆರ್., ವೈದ್ಯಕಿಯ ಸೂಪರಿಂಟೆಂಡೆಂಟ್ ಡಾ.ಶಿವಕುಮಾರ್ ಸಿ.ಆರ್. ಇತರರಿದ್ದರು.