ಕಲಬುರಗಿ ಶರಣಬಸವೇಶ್ವರ ಜಾತ್ರೆ ಉಚ್ಛಾಯಿ ಉತ್ಸವ 
ಕಲಬುರಗಿ

ಶರಣರ ಉಚ್ಛಾಯಿಗೆ ಭಕ್ತರ ಜೈಕಾರ

ಕಲಬುರಗಿ: ಇಳಿಸಂಜೆಯಲ್ಲಿ ಬೆಳಗಿದ ದೀವಟಿಕೆಗಳು, ವಾದ್ಯ ಮೇಳಗಳ ೂಷಣೆ, ಶರಣಬಸವೇಶ್ವರರಿಗೆ ಜೈಕಾರ, ಶಂಖನಾದ, ಪೂಜ್ಯರ ದಿವ್ಯ ಸ್ಪರ್ಷದೊಂದಿಗೆ ಮಹಾದಾಸೋಹ ಮೂರ್ತಿ ಶ್ರೀ ಶರಣಬಸವೇಶ್ವರರ 204ನೇ ಮಹಾದಾಸೋಹ ಯಾತ್ರೆ ನಿಮಿತ್ತ ಶನಿವಾರ ಸಹಸ್ರಾರು ಭಕ್ತರ ಮಧ್ಯೆ ಉಚ್ಛಾಯಿ ಉತ್ಸವ ಶ್ರದ್ಧೆ ಭಕ್ತಿಯೊಂದಿಗೆ ನೆರವೇರಿತು.
ಶ್ರೀ ಶರಣಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಇಳಿ ಸಂಜೆ ಹೊತ್ತಿನಲ್ಲಿ ಮಹಾದಾಸೋಹ 9ನೇ ಪೀಠಾಧಿಪತಿ ಚಿ.ದೊಡ್ಡಪ್ಪ ಅಪ್ಪ ಉಚ್ಛಾಯಿಗೆ ಪೂಜೆ ಸಲ್ಲಿಸಿ, ನೆರೆದ ಭಕ್ತಸ್ತೋಮದತ್ತ ಕೈ ಬೀಸುವುದರೊಂದಿಗೆ ಚಾಲನೆ ನೀಡಿದರು. ಧರ್ಮದಂಡ ಹೊತ್ತ ಸೇವಕರು ಉಚ್ಛಾಯಿ ಮೇಲೆ ನಿಂತು, ಚಾಮರ ಬೀಸುತ್ತಲೇ ಉಚ್ಛಾಯಿ ಮುಂದೆ ಸಾಗಿ, ಮೂಲ ಸ್ಥಾನ ತಲುಪಿತು.
ಡೊಳ್ಳು, ಹಲಗೆ, ಚಿಟ್ಟಲಗಿ ವಾದ್ಯ ಮೇಳಗಳು ಪುರವಂತರ ಸೇವೆಯೊಂದಿಗೆ ಶ್ರೀ ಶರಣಬಸವೇಶ್ವರರ ಪಲ್ಲಕ್ಕಿಯು ಛತ್ರಿ, ಛಾಮರಗಳೊಂದಿಗೆ ಆಗಮಿಸಿ, ಉಚ್ಛಾಯಿಗೆ ಸುತ್ತು ಹಾಕಿದ ತಕ್ಷಣ ಸಹಸ್ರಾರು ಭಕ್ತರು ಶರಣಬಸವೇಶ್ವರ ಮಹಾರಾಜ ಕಿ ಜೈ, ಹರ ಹರ ಮಹಾದೇವ, ಪೂಜ್ಯ ದೊಡ್ಡಪ್ಪ ಅಪ್ಪ ಮಹಾರಾಜ ಕೀ ಜೈಕಾರ ಮೊಳಗಿಸಿದರು. ನೆರೆದಿದ್ದ ಸಹಸ್ರಾರು ಭಕ್ತರು ಉಚ್ಛಾಯಿಗೆ ಬಾಳೆ ಹಣ್ಣು, ಉತ್ತತ್ತಿ ಎಸೆದು ಭಕ್ತಿ ಸಮರ್ಪಿಸಿದರು.
ಉಚ್ಛಾಯಿ ಎಳೆಯುವ ಮುನ್ನ ಸಾಗುವ ಮಾರ್ಗದಲ್ಲಿ ಜನಸಂದಣಿ ಮಧ್ಯೆಯೂ ನಂದಿಯೊಂದಿಗೆ ಬಂದು ನಿಂತು, ದರ್ಶನ ನೀಡಿ, ಅಚ್ಚರಿ ಮೂಡಿಸಿತು. ಉತ್ಸವದ ನಂತರ ಭಕ್ತರು ಉಚ್ಛಾಯಿ ಮತ್ತು ಶರಣಬಸವೇಶ್ವರರ ಗದ್ದುಗೆಗೆ ಸರತಿಯಲ್ಲಿ ನಿಂತು ನಮನಗಳನ್ನು ಸಲ್ಲಿಸಿ, ದಾಸೋಹ ಮನೆಯಲ್ಲಿ ಪ್ರಸಾದ ಸ್ವೀಕರಿಸಿದರು. ಉಚ್ಛಾಯಿ ಉತ್ಸವ ನಡೆಯುತ್ತಲೇ ರಥದ ಕಲಶದ ಪೂರ್ಣಪೀಠ ಅಳವಡಿಸಲಾಯಿತು. ೆಳಗುಂಪಿಯ ಶ್ರೀ ಅಭಿನವ ಪರ್ವತೇಶ್ವರ ಶಿವಾಚಾರ್ಯರು, ಮಾತೋಶ್ರೀ ಡಾ.ದಾಾಯಿಣಿ ಅಪ್ಪ, ಶರಣಬಸವೇಶ್ವರ ವಿದ್ಯಾವರ್ಧಕ ಸಂದ ಕಾರ್ಯದರ್ಶಿ ಬಸವರಾಜ ದೇಶಮುಖ ಸೇರಿ ಜಿಲ್ಲೆಯ ಗಣ್ಯರು, ಸಂಸ್ಥಾನದವರು ಸಹಸ್ರಾರು ಭಕ್ತರಿದ್ದರು. ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಹಾಜರಿದ್ದು, ಬಂದೋಬಸ್​ ನಿಗಾ ವಹಿಸಿದರು.