ಕಲಬುರಗಿ: ರೌಡಿ ಶೀಟರ್ ಗಳ ಜತೆ ಫೋಟೋ ತೆಗೆಸಿಕೊಳ್ಳುವುದು, ಪಾರ್ಟಿ ಮಾಡಿದರೆ ಸಹಿಸುವುದಿಲ್ಲ ಎಂದು ಗೃಹ ಸಚಿವ ಪ್ರಿಯಾಂಕ್ ಖರ್ಗೆ ಎಚ್ಚರಿಕೆಯ ಮಧ್ಯೆಯೂ ಅಫಜಲಪುರ ತಾಲೂಕಿನ ದೇವಲಗಾಣಗಾಪುರ ಪೊಲೀಸ್ ಠಾಣೆ ಪಿಎಸ್ ಐ ರೌಡಿ ಶೀಟರ್ ಜತೆ ಫೋಟೋ ತೆಗೆಸಿಕೊಂಡಿರುವುದು, ಠಾಣೆಗೆ ಕರೆಸಿ ಸನ್ಮಾನಿಸಿರುವ ಘಟನೆ ಬೆಳಕಿಗೆ ಬಂದಿದೆ.
ಪಿಎಸ್ ಐ ಸಂಗೀತಾ ರೌಡಿಶೀಟರ್ ಮಾರುತಿ ಜತೆ ಫೋಟೋ ತೆಗೆಸಿಕೊಂಡು, ಆತನನ್ನು ಸತ್ಕರಿಸಿರುವ ಫೋಟೋಗಳು ವೈರಲ್ ಆಗಿವೆ.
ಪೊಲೀಸ್ ಠಾಣೆಯಲ್ಲಿ ನಡೆದ ಕಾರ್ಯಕ್ರಮದಲ್ಲೂ ರೌಡಿ ಶೀಟರ್ ಭಾಗಿಯಾದ ಘಟನೆ ನಡೆದಿದೆ.
ಗಾಣಗಾಪುರ ಠಾಣೆ ರೌಡಿ ಶೀಟರ್ ಮಾರುತಿಗೆ ವಿಐಪಿ ಆತಿಥ್ಯವನ್ನು ಪೊಲೀಸರು ನೀಡಿದ್ದಾರೆ.
ಖುದ್ದು ಖಾಕಿಯಿಂದಲೇ ರೌಡಿ ಶೀಟರ್ ಗೆ ಆತಿಥ್ಯ ನೀಡಿರುವುದು ಚರ್ಚೆಗೆ ಕಾರಣವಾಗಿದೆ ಅಲ್ಲದೇ ಖಾಕಿ ಆತಿಥ್ಯಕ್ಕೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಈ ಚಿತ್ರಗಳು ಸುಮಾರು ಒಂದುವರೆ ವರ್ಷದ ಹಿಂದಿನದ್ದು ಎಂದು ಹೇಳಲಾಗುತ್ತಿದೆ.