Deer escapes from Kalaburagi zoo 
ಕಲಬುರಗಿ

ಕಲಬುರಗಿ ಪ್ರಾಣಿ ಸಂಗ್ರಹಾಲಯದಿಂದ ಜಿಂಕೆ ಪರಾರಿ

ಕಲಬುರಗಿ: ನಗರದಲ್ಲಿರುವ ಹಳೇ ಪ್ರಾಣಿ ಸಂಗ್ರಹಾಲಯದಿಂದ ಚುಕ್ಕೆ ಜಿಂಕೆಗಳು ಗೋಡೆ ಹಾರಿ ಹೊರ ಹೋದ ಘಟನೆ ನಡೆದಿದೆ.
ನಗರದ ಸಾರ್ವಜನಿಕ ಉದ್ಯಾನದಲ್ಲಿರುವ ಹಳೇ ಪ್ರಾಣಿ ಸಂಗ್ರಹಾಲಯದಿಂದ ಮೂರು ಜಿಂಕೆಗಳು ತಡೆಗೋಡೆಯಿಂದ ಹಾರಿ ಹೋಗಿ, ಜನನಿಬೀಡ ಸ್ಥಳಗಳತ್ತ ಓಡಿ ಬಂದಿವೆ.
ಸಂಗ್ರಹಾಲಯದ ಹಿಂದುಗಡೆ ಇರುವ ವಿಠಲ್ ನಗರದತ್ತ ಹಾರಿ ಬಂದಿದ್ದು, ಅವುಗಳನ್ನು ನೋಡಿದ ಸಾರ್ವಜನಿಕರು ತಕ್ಷಣ ಅರಣ್ಯ ಇಲಾಖೆ ಗಮನಕ್ಕೆ ತಂದಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಅವುಗಳನ್ನು ಹಿಡಿಯಲು ಹರಸಾಹಸ ಪಟ್ಟಿದ್ದಾರೆ.
ಒಂದು ಜಿಂಕೆ ಮನೆಯೊಂದರಲ್ಲಿ ಸಿಲುಕಿದ್ದು, ಮತ್ತೊಂದು ಜಿಂಕೆಯೂ ನಗರರ ಶರಣ ನಗರದತ್ತ ಹೋಗಿದ್ದು, ಅರಣ್ಯ ಇಲಾಖೆ ಅಧಿಕಾರಿಗಳು ಪತ್ತೆ ಮಾಡುವಲ್ಲಿ ನಿರತರಾಗಿದ್ದಾರೆ.