ಸುಲೇಪೇಟ ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಶುಕ್ರವಾರ ಸುಲೇಪೇಟ ತಾಲೂಕು ಬೇಡಿಕೆ ಸಮಿತಿ ನೇತೃತ್ವದಲ್ಲಿ ಬಂದ್​ ಹೋರಾಟ ನಡೆಸಿ ತಹಸೀಲ್ದಾರ್​ ಶಿವಾನಂದ ಮೇತ್ರೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಚಾಂದ್​ಪಾಶಾ ಮೋಮಿನ್​, ಶಿವಕುಮಾರ ಸೊಂತ, ರುದ್ರಮುನಿ ರಾಮತೀರ್ಥಕರ, ತಾಹೇರ್​ ಪಟೇಲ್​ ಇತರರಿದ್ದರು. 
ಕಲಬುರಗಿ

ಸುಲೇಪೇಟ ತಾಲೂಕು ಕೇಂದ್ರವಾಗಿ ಘೋಷಿಸಿ

ಚಿಂಚೋಳಿ: ಸುಲೇಪೇಟ ಪ್ರಮುಖ ವ್ಯಾಪಾರ ಕೇಂದ್ರವಾಗಿ ಬೆಳೆಯುತ್ತಿದೆ. ಆಡಳಿತಾತ್ಮಕ ಅನುಕೂಲ ಹಾಗೂ ಈ ಭಾಗದ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ ತಾಲೂಕು ಕೇಂದ್ರವನ್ನಾಗಿ ಘೋಷಿಸುವುದು ಅಗತ್ಯವಾಗಿದೆ ಎಂದು ಮಹಾರುದ್ರಪ್ಪ ದೇಸಾಯಿ ಒತ್ತಾಯಿಸಿದರು.

ಸುಲೇಪೇಟ ಹೋಬಳಿಯನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸಬೇಕು ಎಂದು ಒತ್ತಾಯಿಸಿ ಸುಲೇಪೇಟ ತಾಲೂಕು ಬೇಡಿಕೆ ಸಮಿತಿ ನೇತೃತ್ವದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಬಂದ್​ ಹೋರಾಟದಲ್ಲಿ ಮಾತನಾಡಿ, ಹೋಬಳಿ ಮಟ್ಟದ ಸೇವೆಗಳಿಂದ ಸಾರ್ವಜನಿಕರಿಗೆ ಆಗುತ್ತಿರುವ ವಿಳಂಬ ತಪ್ಪಿಸಲು ಹಾಗೂ ವ್ಯಾಪಾರ ಚಟುವಟಿಕೆಗಳಿಗೆ ಇನ್ನಷ್ಟು ವೇಗ ನೀಡಲು ತಾಲೂಕು ಮಾನ್ಯತೆ ನೀಡಬೇಕು. ಕೂಡಲೇ ಸರ್ಕಾರ ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ತಹಸೀಲ್ದಾರ್​ ಶಿವಾನಂದ ಮೇತ್ರೆ ಅವರಿಗೆ ಮನವಿಪತ್ರ ಸಲ್ಲಿಸಲಾಯಿತು. ಚಾಂದ್​ಪಾಶಾ ಮೋಮಿನ್​, ಶಿವಕುಮಾರ ಸೊಂತ, ರುದ್ರಮುನಿ ರಾಮತೀರ್ಥಕರ, ತಾಹೇರ್​ ಪಟೇಲ್​, ಮಾಣಿಕರಾವ ಗುಲಗುಂಜಿ, ಮಹೇಶ ಬೇಮಳಗಿ, ರವಿ ರಾಠೋಡ್​, ನಾಮದೇವ ಪಾಟೀಲ್​, ಶಾಮರಾವ ಮಾದೇಶಿ, ಶಿವಶಂಕ್ರಯ್ಯ ಸ್ವಾಮಿ, ಮಲ್ಲಿಕಾರ್ಜುನ ಹುಮನಾಬಾದಿ, ಶಿವಕುಮಾರ ಸಜ್ಜನ್​, ಶಿವಕುಮಾರ ಕೊತ್ತಾಪೇಟ, ಚಂದ್ರಶೇಖರ ಎನ್​.ಹೂನಳ್ಳಿ, ಮಲ್ಲಿಕಾರ್ಜುನ ದೇಸಾಯಿ, ಸುಭಾಷ ಪಾಟೀಲ್​, ರಮೇಶ ದೇಸಾಯಿ, ಸಂಪತಕುಮಾರ ಬೆಳ್ಳಿಚುಕ್ಕಿ, ರಜಾಕ್​ ಪಟೇಲ್​, ನಸೀರ್​ ಹುಸೇನ್​ ಮದ್ದರಗಿ ಇತರರಿದ್ದರು.