ಚಿತ್ತಾಪುರದಲ್ಲಿ ಹಮ್ಮಿಕೊಂಡಿದ್ದ ಕನಕದಾಸ ಜಯಂತಿ ಪೂರ್ವಭಾವಿ ಸಭೆಯಲ್ಲಿ ತಹಸೀಲ್ದಾರ್​ ನಾಗಯ್ಯ ಹಿರೇಮಠ ಮಾತನಾಡಿದರು. ರಾಜಕುಮಾರ ಮರತೂರಕರ್​, ಮಲ್ಲಿಕಾರ್ಜುನ ಡಬ್ಬಿಗೇರ ಇತರರಿದ್ದರು.  
ಕಲಬುರಗಿ

27ರಂದು ಕನಕ ಜಯಂತಿ ಅದ್ದೂರಿ ಆಚರಣೆಗೆ ನಿರ್ಧಾರ

ಚಿತ್ತಾಪುರ: ದಾಸ ಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ತಾಲೂಕು ಆಡಳಿತವತಿಯಿಂದ ನ.27ರಂದು ಅದ್ದೂರಿಯಾಗಿ ಆಚರಣೆ ಮಾಡೋಣ ಎಂದು ತಹಸೀಲ್ದಾರ್​ ನಾಗಯ್ಯ ಹಿರೇಮಠ ಹೇಳಿದರು. ಪ್ರಜಾಸೌಧ ಕಚೇರಿ ಸಭಾಂಗಣದಲ್ಲಿ ಭಕ್ತ ಕನಕದಾಸ ಜಯಂತಿ ನಿಮಿತ್ತ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಅಧ್ಯಕ್ಷತೆವಹಿಸಿ ಮಾತನಾಡಿ, ಪ್ರಜಾಸೌಧ ಕಚೇರಿಯಲ್ಲಿ ಬೆಳಗ್ಗೆ 10ಕ್ಕೆ ಕನಕದಾಸರ ಭಾವಚಿತ್ರಕ್ಕೆ ವಿಶೇಷ ಪೂಜೆ, ವೇದಿಕೆ ಕಾರ್ಯಕ್ರಮ ನಡೆಸಲಾಗುವುದು. ಎಲ್ಲ ಸರ್ಕಾರಿ ಕಚೇರಿ, ಶಾಲಾ-ಅಂಗನವಾಡಿಗಳಲ್ಲಿ ಬೆಳಗ್ಗೆ ಭಕ್ತ ಕನಕದಾಸರ ಜಯಂತಿ ಕಡ್ಡಾಯವಾಗಿ ಆಚರಿಸಬೇಕು ಎಂದು ಸೂಚನೆ ನೀಡಿದರು. ಕುರುಬ ಸಮಾಜದ ತಾಲೂಕು ಅಧ್ಯಕ್ಷ ಮಲ್ಲಿಕಾರ್ಜುನ ಡಬ್ಬಿಗೇರ ಮಾತನಾಡಿ, ವೇದಿಕೆ ಕಾರ್ಯಕ್ರಮಕ್ಕೂ ಮುನ್ನ ಕನಕದಾಸರ ಭಾವಚಿತ್ರದ ಅದ್ದೂರಿ ಮೆರವಣಿಗೆ ಕುರುಬ ಸಮಾಜದಿಂದ ನಡೆಸಲಾಗುವುದು ಎಂದು ಹೇಳಿದರು. ಗ್ರೇಡ್​-2 ತಹಸೀಲ್ದಾರ್​ ರಾಜಕುಮಾರ ಮರತೂರಕರ, ಅಧಿಕಾರಿಗಳಾದ ಭಾರತಿ ದಂಡೋತಿ, ಸಂಜೀವಕುಮಾರ ಮಾನಕರ್​, ಡಾ.ಶಂಕರ ಕಣ್ಣಿ, ಶಿವಶರಣಪ್ಪ ಮಂಠಾಳೆ, ಅಮೃತರಾವ ರಸಾಗರ, ಜುಮ್ಮಣ್ಣ ಪೂಜಾರಿ, ಮಲ್ಲಿಕಾರ್ಜುನ ಪೂಜಾರಿ ಮೊಗಲಾ, ಯಲ್ಲಾಲಿಂಗ ಇವಣಿ, ಬಸವರಾಜ ಪೂಜಾರಿ ಮೊಗಲಾ, ಸಂತೋಷ ಪೂಜಾರಿ, ಪ್ರದಿಪ ಕದ್ದರಗಿ, ಸಂತೋಷ ಮರಗೋಳ, ಜಗನ್ನಾಥ ಆಲೂರ್​, ಯಲ್ಲಾಲಿಂಗ ಮರಗೋಳ, ಭೀಮರಾಯ ಕರದಾಳ, ತಿಪ್ಪಣ್ಣ ವಗ್ಗರ, ಈರಣ್ಣ ಹಲಕರ್ಟಿ, ಬೋಜು ಬಾಗೋಡಿ, ವಸಂತ ಬಾಗೋಡಿ, ಮಂಜುನಾಥ ಜೀವಣಗಿ, ನಾಗರಾಜ ಚಿತ್ತಾಪುರ, ಹಣಮಂತ ಚಿತ್ತಾಪುರ, ಹಂಪಯ್ಯ ಅಳ್ಳೊಳ್ಳಿ, ಯಲ್ಲಾಲಿಂಗ ಕನಗನಳ್ಳಿ, ಲಿಂಗರಾಜ ಕಡಬೂರ, ಬೀರಪ್ಪ ರಾಜೋಳ್ಳಿ, ಸಿದ್ದಪ್ಪ ಸಾತನೂರ, ಮಲ್ಲಪ್ಪ ರಾಜೋಳ್ಳಿ, ನಿಂಗಪ್ಪ ಚಿತ್ತಾಪುರ, ನಿಂಗಣ್ಣ ರಾವೂರ, ಕಲ್ಯಾಣಿ ಚಿತ್ತಾಪುರ, ಯಲ್ಲಾಲಿಂಗ ತೊನಸನಳ್ಳಿ ಇತರರಿದ್ದರು.