ಅಫಜಲಪುರ ತಾಲೂಕಿನ ದೇವಲಗಾಣಗಾಪುರದಲ್ಲಿ ಲಕ್ಷಾಂತರ ಭಕ್ತರ ಜೈಘೋಷಗಳ ಮಧ್ಯೆ ಶುಕ್ರವಾರ ಶ್ರೀಗುರು ದತ್ತ ಮಹಾರಾಜರ ಭವ್ಯ ರಥೋತ್ಸವ ಜರುಗಿತು.  
ಕಲಬುರಗಿ

ಭವ್ಯ ರಥೋತ್ಸವದೊಂದಿಗೆ ದತ್ತ ಜಯಂತಿ ಸಂಪನ್ನ

ಹರೀಶ ಕುಲಕರ್ಣಿ

ಪ್ರಮುಖ ಮುಖ್ಯಾಂಶಗಳು

  • ದೇವಲಗಾಣಗಾಪುರಕ್ಕೆ ಹರಿದುಬಂದ ಲಕ್ಷಾಂತರ ಭಕ್ತರು
  • ಮೊಳಗಿದ ನರಸಿಂಹ ಸರಸ್ವತಿ ಮಹಾರಾಜ ಕೀ ಜೈಘೋಷ
ಅಫಜಲಪುರ: ಕಲಬುರಗಿ ಜಿಲ್ಲೆ ಪವಿತ್ರ ಮತ್ತು ಖ್ಯಾತ ಪುಣ್ಯ ಕ್ಷೇತ್ರ ದೇವಲಗಾಣಗಾಪುರದಲ್ಲಿ ದೇಶದ ವಿವಿಧೆಡೆಯಿಂದ ಹರಿದುಬಂದ ಲಕ್ಷಾಂತರ ಭಕ್ತರ ಜೈಘೋಷಗಳ ಮಧ್ಯೆ ಶುಕ್ರವಾರ ಶ್ರೀ ಗುರು ದತ್ತ ಮಹಾರಾಜರ ವೈಭವದ ರಥೋತ್ಸವ ನೆರವೇರಿತು.
ನಸುಕಿನ ಜಾವ ಕಾಕಡಾರತಿಯಿಂದ ಶುರುವಾದ ಪೂಜಾ ಕೈಂಕರ್ಯಗಳು ಗುರುಗಳ ಮೂರ್ತಿ, ಸ್ಫಟಿಕ ಲಿಂಗ, ಸಾಲಿಗ್ರಾಮಗಳಿಗೆ ಮಹಾನ್ಯಾಸ, ಲಘುನ್ಯಾಸ, ಪಂಚಾಮೃತಪೂರ್ವಕ ರುದ್ರಾಭಿಷೇಕ, ಗಂಧ, ತುಳಸಿ ಪುಷ್ಪ ಸಮರ್ಪಣೆ, ನಿರ್ಗುಣ ಪಾದುಕೆಗಳನ್ನು ಸಿಂಹಾಸನ ಮೇಲಿರಿಸಿ ಕೇಸರ, ಕಸ್ತೂರಿ, ಅತ್ತರ ಲೇಪನ ಮಾಡಿ ತುಳಸಿ ಮತ್ತು ಕಾಶಾಯ ವಸ್ತç ಇರಿಸಿ ಫಳಾರ ನೈವೇದ್ಯದೊಂದಿಗೆ ಪಾದುಕಾ ಮಂಗಳಾರುತಿ ಜರುಗಿತು. ನಂತರ ಚಿಂತಾಮಣಿ ಗಣಪನಿಗೆ ಪೂಜಾಭಿಷೇಕ, ಸನಕಾಧಿಕಾ ದೇವತೆಗಳು ಹಾಗೂ ಅಶ್ವತ್ಥ ಮರದ ಪೂಜೆ ನಡೆಯಿತು. ತ್ರಿಮೂರ್ತಿ ರೂಪದ ದತ್ತ ಮಹಾರಾಜರನ್ನು ವಿವಿಧ ಬಗೆಬಗೆಯ ಫಲ-ಪುಷ್ಪಗಳಿಂದ ಅಲಂಕರಿಸಿ ಮಹಾಮಂಗಳಾರತಿ ನೆರವೇರಿಸಿದ ಬಳಿಕ ಭಕ್ತರಿಗೆ ಪಂಚಾಮೃತ, ಗಂಧ ವಿತರಿಸುವ ಮೂಲಕ ದರ್ಶನಕ್ಕೆ ಅನುವು ಮಾಡಿಕೊಡಲಾಯಿತು.
ಮಧ್ಯಾಹ್ನ ೧೨ಕ್ಕೆ ಮಹಾ ನೈವೇದ್ಯ, ಮಹಾಮಂಗಳಾರತಿ ಸಮರ್ಪಿಸಲಾಯಿತು. ಸಂಜೆ ೫ಕ್ಕೆ ನಿರ್ಗುಣ ಮಠದ ಗರ್ಭಗುಡಿಯಿಂದ ಸಾಲಕಾರಿ ಅರ್ಚಕ ವೃಂದದಿAದ ಬಾಲ ದತ್ತ ಮಹಾರಾಜರ ಮೂರ್ತಿಯನ್ನು ಮೆರವಣಿಗೆ ಮೂಲಕ ದೇವಸ್ಥಾನದ ಗೋಪುರದ ಮುಂಬಾಗಕ್ಕೆ ತಂದು ಪುಷ್ಪಾಲಂಕೃತ ರಥತದಲ್ಲಿ ಪ್ರತಿಷ್ಠಾಪಿಸಿದ ನಂತರ ರಥೋತ್ಸವಕ್ಕೆ ಚಾಲನೆ ನೀಡಲಾಯಿತು. ಲಕ್ಷಾಂತರ ಭಕ್ತರು ಭಕ್ತಿಯಿಂದ ಗುರುವಿನ ತೇರನ್ನು ಹನುಮಾನ ಮಂದಿರ ಮಾರ್ಗವಾಗಿ ಪುನಃ ನಿರ್ಗುಣ ಮಠದವರೆಗೆ ಎಳೆದು ಕೃತಾರ್ಥರಾದರು.
ದತ್ತ ಮಹಾರಾಜ ಕೀ ಜೈ... ಶ್ರೀ ನರಸಿಂಹ ಸರಸ್ವತಿ ಮಹಾರಾಜ ಕೀ ಜೈ.. ದಿಗಂಬರ ದಿಗಂಬರ ಶ್ರೀಪಾದ ವಲ್ಲಭ ದಿಗಂಬರ... ಬ್ರಹ್ಮ, ವಿಷ್ಣು, ಮಹೇಶ್ವರ... ಅನುಸಯತ್ರಿ ಸುಕುಮಾರ... ಅವಧೂತ ಚಿಂತನ ಗುರುದೇವ ದತ್ತ ಸೇರಿ ವಿವಿಧ ಜೈಘೋಷಗಳನ್ನು ಮೊಳಗಿಸುತ್ತ ಭಕ್ತರು ರಥಕ್ಕೆ ಬಾಳೆ ಹಣ್ಣು, ಉತ್ತತ್ತಿ, ನಾಣ್ಯ ಎಸೆದು ಹರಕೆ ತೀರಿಸಿದರು.
ರಥೋತ್ಸವ ಮಾರ್ಗದುದ್ದಕ್ಕೂ ಮಹಿಳೆಯರಿಂದ ಬಗೆಬಗೆಯ ಬಣ್ಣಗಳಿಂದ ರಂಗೋಲಿ ಬಿಡಿಸಿ ಹೂಗಳಿಂದ ಸಿಂಗರಿಸಲಾಗಿತ್ತು. ಭಜನೆ, ಕೀರ್ತನೆ, ಶಹನಾಯಿ, ತಮಟೆ, ಹಲಗೆ, ಬ್ಯಾಂಡ್ ಬ್ರಾಸ್‌ನಂಥ ವಾದ್ಯಗಳು ಮೆರುಗು ನೀಡಿದವು. ರಾತ್ರಿ ೮ಕ್ಕೆ ಸಾಲಕಾರಿ ಅರ್ಚಕರಿಂದ ನಿರ್ಗುಣ ಮಠದ ಪ್ರಾಂಗಣದಲ್ಲಿ ಮಹಾರಾಜರ ಉತ್ಸವ ಮೂರ್ತಿಯನ್ನು ಅಲಂಕೃತ ಪಲ್ಲಕ್ಕಿಯಲ್ಲಿ ಕುಳ್ಳಿರಿಸಿ ಭಜನೆ, ಕೀರ್ತನೆಗಳ ಮೂಲಕ ಗರ್ಭಗುಡಿಗೆ ಮೂರು ಸುತ್ತು ಪ್ರದಕ್ಷಿಣೆ ಹಾಕಿ ಮಹಾಮಂಗಳಾರತಿ ಮೂಲಕ ಜಯಂತ್ಯುತ್ಸವ ಭಕ್ತಿಭಾವದೊಂದಿಗೆ ತೆರೆ ಕಂಡಿತು.
ಪ್ರಮುಖರಾದ ನಾಗೇಶಭಟ್ಟ ಪೂಜಾರಿ, ದತ್ತಾತ್ರೇಯ ಪೂಜಾರಿ, ಮನೋಹರ ಪೂಜಾರಿ, ಚಂದ್ರವಿಲಾಸ ಪೂಜಾರಿ, ಕಲ್ಲಮಭಟ್ಟ ಪೂಜಾರಿ, ಸಾಲಕಾರಿ ಕಾರ್ಯದರ್ಶಿ ಪ್ರಿಯಾಂಕ್ ಪೂಜಾರಿ, ಉದಯ ಪೂಜಾರಿ, ಪ್ರಖ್ಯಾತ ಪೂಜಾರಿ, ಪ್ರಫುಲ್ ಪೂಜಾರಿ, ಪ್ರವೀಣ ಪೂಜಾರಿ, ಕರುಣಾಕರ ಪೂಜಾರಿ, ದಿಗಂಬರ ಪೂಜಾರಿ, ಪ್ರಸಾದ ಪೂಜಾರಿ, ಅವಧೂತ ಪೂಜಾರಿ, ನರಹರಿ ಪೂಜಾರಿ, ಗುಂಡುಭಟ್ಟ ಪೂಜಾರಿ, ಕೌಸ್ತುಭ ಪೂಜಾರಿ, ದೇವು ಪೂಜಾರಿ, ಭರತ ಪೂಜಾರಿ, ರೋಹಿತ ಪೂಜಾರಿ, ಕಿರಣ ಪೂಜಾರಿ, ಶ್ರೀಧರ ಪೂಜಾರಿ, ಅಭಯ ಪೂಜಾರಿ, ಚಂದನ ಪೂಜಾರಿ, ಶರತ್ ಪೂಜಾರಿ, ಆಶೀರ್ವಾದ ಪೂಜಾರಿ, ಅಲರ್ಕ್ ಪೂಜಾರಿ, ಸರ್ವೇಶ್ ಪೂಜಾರಿ, ಚೇತನ್ ಪೂಜಾರಿ, ಪ್ರದ್ಯುಮ್ನ ಪೂಜಾರಿ, ಪ್ರಶಾಂತ ಪೂಜಾರಿ, ಸ್ವರೂಪ ಪೂಜಾರಿ, ಪ್ರತೀಕ್ ಪೂಜಾರಿ, ಸಮರ್ಥ ಪೂಜಾರಿ, ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಶಿವಕಾಂತಮ್ಮ, ದತ್ತು ನಿಂಬರಗಿ ಇತರರಿದ್ದರು.

೫೩ ಅಧ್ಯಾಯದ ಗುರುಚರಿತ್ರೆ ಪಾರಾಯಣ

ಗುರು ಪರಂಪರೆಯಲ್ಲಿ ಗುರು ಚರಿತ್ರೆಗೆ ಉನ್ನತ ಸ್ಥಾನವಿದ್ದು, ಜಯಂತ್ಯುÃತ್ಸವಕ್ಕೆ ಆಗಮಿಸುವ ಭಕ್ತರು ಭೀಮಾ-ಅಮರ್ಜಾ ಸಂಗಮದ ಔದುಂಬರ ವೃP್ಷÀದ ಕೆಳಗೆ ೫೩ ಅಧ್ಯಾಯದ ಗುರುಚರಿತ್ರ ಪಠಿಸಿ ಭಕ್ತಿ ಸ್ಥಾನ ಸಂಗಮ, ಕರ್ಮಸ್ಥಾನ ನಿರ್ಗುಣ ಮಠ ಮತ್ತು ಮುಕ್ತಿ ಸ್ಥಾನ ಕ¯್ಲೆÃಶ್ವರ ದರ್ಶನ ಪಡೆದುಕೊಂಡರು.
"

ಪೂರ್ವಜರಾದ ಭಾಸ್ಕರ ಭಟ್ಟರಿಂದ ಇದುವರೆಗೆ ಸುಮಾರು ೧೬ ತಲೆಮಾರುಗಳಿಂದ ಮಹಾರಾಜರೇ ನಮ್ಮ ಸರ್ವಸ್ವವೆಂದು ಸರತಿಯಂತೆ ನಿರ್ಗುಣ ಮಠ, ಸಂಗಮ ಮತ್ತು ಕ¯್ಲÉÃಶ್ವರ ಕ್ಷೇತ್ರದಲ್ಲಿ ನಿತ್ಯ ತ್ರಿಕಾಲ ಪೂಜೆ, ನೈವೇದ್ಯ ಸೇವೆ ಸಮರ್ಪಿಸಲಾಗುತ್ತಿದೆ. ಎಲ್ಲವನ್ನು ಬಲ್ಲ ಗುರುಗಳು ಕಾರುಣ್ಯಮೂರ್ತಿಯಾಗಿ ಭಕ್ತರನ್ನು ಉದ್ಧರಿಸುತ್ತಿz್ದÁರೆ.

| ನಾಗೇಶಭಟ್ಟ ಪೂಜಾರಿಹಿರಿಯ ಅರ್ಚಕ,

ನಿತ್ಯ ಜೀವನದಲ್ಲಿ ಶ್ರದ್ಧೆ ಮತ್ತು ಭಕ್ತಿಯಿಂದ ತ್ರಿಮೂರ್ತಿ ಸ್ವರೂಪಿ ದತ್ತ ಮಹಾರಾಜರನ್ನು ಸ್ಮರಿಸುವ ಭಕ್ತರಿಗೆ ದರ್ಶನ ಭಾಗ್ಯ ಕರುಣಿಸುತ್ತಾರೆ ಎಂಬ ನಂಬಿಕೆ ಭಕ್ತರಲ್ಲಿದೆ. ಶಸ್ತç ಮತ್ತು ಶಾಸ್ತçಹಿಡಿದ ಮಹಾರಾಜರು ದುಷ್ಟರನ್ನು ಶಿಕ್ಷಿಸಿ ಶಿಷ್ಟರನ್ನು ರಕ್ಷಿಸುತ್ತಿz್ದÁರೆ.

| ಮನೋಹರ ಪೂಜಾರಿ