ಮಾಜಿ ಶಾಸಕ ರಾಜಕುಮಾರ ತೆಲ್ಕೂರ 
ಕಲಬುರಗಿ

ದಲಿತರ ಹಣ ವಾಪಸ್ ನೀಡದಿದ್ರೆ ಹೋರಾಟ

ಪ್ರಮುಖ ಮುಖ್ಯಾಂಶಗಳು

  • ಮಾಜಿ ಶಾಸಕ ರಾಜಕುಮಾರ ತೆಲ್ಕೂರ ಎಚ್ಚರಿಕೆ
  • ಎಸ್‌ಸಿಎಸ್‌ಪಿ-ಟಿಎಸ್‌ಪಿ ಅನುದಾನ ದುರ್ಬಳಕೆಗೆ ಕಿಡಿ
ಕಲಬುರಗಿ: ಮೂರು ವರ್ಷದಿಂದ ದುರ್ಬಳಕೆ ಆಗುತ್ತಿರುವ ಎಸಿಎಸ್‌ಪಿ ಮತ್ತು ಟಿಎಸ್‌ಪಿಯ ೩೯ ಸಾವಿರ ಕೋಟಿ ರೂ. ದಲಿತರಿಗೆ ವಾಪಸ್ ನೀಡುವುದನ್ನು ಸಿಎಂ ಸಿದ್ದರಾಮಯ್ಯ ಬಜೆಟ್‌ನಲ್ಲಿ ಘೋಷಿಸಬೇಕು. ಇಲ್ಲದಿದ್ದರೆ ವಿಧಾನಸೌಧದ ಒಳ ಮತ್ತು ಹೊರಗೆ ಬಿಜೆಪಿ ಪ್ರತಿಭಟನೆ ನಡೆಸಲಿದೆ ಎಂದು ಮಾಜಿ ಶಾಸಕ ರಾಜಕುಮಾರ ಪಾಟೀಲï ತೆಲ್ಕೂರ ಎಚ್ಚರಿಸಿದರು.
ಗ್ಯಾರಂಟಿ ಯೋಜನೆಗಳ ಅನುಷ್ಠಾನಕ್ಕಾಗಿ ೩೯ ಸಾವಿರ ಕೋಟಿ ರೂ. ದುರುಪಯೋಗ ಮಾಡಿಕೊಂಡಿರುವ ಸರ್ಕಾರ ಮತ್ತೊಂದು ಬಜೆಟ್ ಮಂಡನೆ ಹೆಸರಿನಲ್ಲಿ ಮತ್ತೆ ೧೫ ಸಾವಿರ ಕೋಟಿ ರೂ. ಮುಳುಗಿಸಲು ಸಜ್ಜಾಗಿದೆ. ೭ಡಿ ಕಾಯ್ದೆ ಕಿತ್ತು ಹಾಕಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಕಾಯ್ದೆ ಬಲಪಡಿಸಿದ್ದು ನಾವು ಎಂದು ಬೆನ್ನು ತಟ್ಟಿಕೊಳ್ಳುವ ಸಿದ್ದರಾಮಯ್ಯ ಒಳಗೊಳಗೆ ೭ಸಿ ಮೂಲಕ ದಲಿತರ ಮೀಸಲು ನಿಧಿಗೆ ಕನ್ನ ಹಾಕುತ್ತಿz್ದÁರೆ ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ಹರಿಹಾಯ್ದರು.
೨೦೨೫-೨೬ರಲ್ಲಿ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ಬಜೆಟ್‌ನಲ್ಲಿ ನಿಗದಿಯಾಗಿದ್ದು ೪೨,೦೧೮ ಕೋಟಿ ರೂ. ಆದರೆ ಈ ವರ್ಷ ಫೆ.೧೬ರವರೆಗೆ ಬಳಕೆಯಾಗಿದ್ದು ಕೇವಲ ೨೩, ೭೮೮ ಕೋಟಿ ರೂ. ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಈ ಅನುದಾನದಲ್ಲಿ ಗ್ಯಾರಂಟಿಗಾಗಿ ೧೩,೪೪೩ ಕೋಟಿ ರೂ. ಅಂದರೆ ಈ ವರ್ಷ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿಗೆ ಖರ್ಚಾಗಿರುವುದು ೧೦, ೩೪೫ ಕೋಟಿ ರೂ.. ೧೮,೨೩೦ ಕೋಟಿ ರೂ. ಖರ್ಚಾಗದೆ ಉಳಿದಿದೆ. ಈ ಅನುದಾನ ತಿಂಗಳಾAತ್ಯವರೆಗೆ ಖರ್ಚಾಗುತ್ತಾ ಎಂದು ಪ್ರಶ್ನಿಸಿದರು.
ಸರ್ಕಾರ ಹಲವಾರು ನಿಗಮಗಳಿಗೆ ಅನುದಾನ ನೀಡದ್ದರಿಂದ ಗಂಗಾಕಲ್ಯಾಣ, ಐರಾವತ ವಾಹನ ಯೋಜನೆ, ಭೂ ಒಡೆತನ, ವಿದ್ಯಾರ್ಥಿ ವೇತನ, ವಿದೇಶಗಳಲ್ಲಿ ಉನ್ನತ ವ್ಯಾಸಂಗ, ವಸತಿ ಕಟ್ಟಡ ನಿರ್ಮಾಣ ಸೇರಿ ವಿವಿಧ ಯೋಜನೆಗಳು ನೆಲಕಚ್ಚಿವೆ. ಈ ಯೋಜನೆಗಳಿಗೆ ಪ್ರತಿ ಶಾಸಕರಿಗೆ ಎಷ್ಟು ಹಣ ಸಿಕ್ಕಿದೆ ಎಂದು ಬಾಯ್ಬಿಟ್ಟು ಹೇಳ್ತೀರಾ ಎಂದು ಕಾಂಗ್ರೆಸ್‌ನ ದಲಿತ ಶಾಸಕರನ್ನು ಪ್ರಶ್ನಿಸಿದರು.
ಸಿದ್ದರಾಮಯ್ಯ ಬಜೆಟ್ ಮಂಡನೆಗೆ ಮುನ್ನವೇ ಎಸ್‌ಸಿಎಸ್‌ಪಿ ಮತ್ತು ಟಿಎಸ್‌ಪಿ ಹಣಕ್ಕೆ ಕೈ ಹಾಕುವುದಿಲ್ಲ ಎಂದು ಘೋಷಿಸಬೇಕು. ಸಂವಿಧಾನ ರP್ಷÀಣೆ ಅಭಿಯಾನಕ್ಕೆ ಖಜಾನೆಯಿಂದ ಹಣ ಕೊಡಬೇಕು. ೩೯ ಸಾವಿರ ಕೋಟಿ ಹಣದಲ್ಲಿ ಎಲ್ಲ ಜಿ¯್ಲೆ ದಲಿತರ ಅಭಿವೃದ್ಧಿಗೆ ಮೂಲಸೌಲಭ್ಯ ಒದಗಿಸಲು ತಲಾ ಒಂದು ಕೋಟಿ ಮೀಸಲಿಡಬೇಕು. ಎಲ್ಲ ಎಸ್‌ಸಿ-ಎಸ್‌ಟಿ ನಿಗಮಗಳಿಗೆ ತಲಾ ೧೦೦೦ ಕೋಟಿ ಕನಿಷ್ಠ ಅನುದಾನ ಘೋಷಿಸಬೇಕು. ದುರ್ಬಳಕೆಗೆ ದಾರಿ ಮಾಡಿಕೊಡುತ್ತಿರುವ ೭ಸಿ ಕಾಯ್ದೆ ರದ್ದುಪಡಿಸಬೇಕು ಎಂದು ಒತ್ತಾಯಿಸಿದರು.
ಶಾಸಕರಾದ ಬಸವರಾಜ ಮತ್ತಿಮಡು, ಶಶೀಲï ನಮೋಶಿ, ಪP್ಷÀದ ಮುಖಂಡರಾದ ಶರಣಪ್ಪ ತಳವಾರ, ಚಂದ್ರಶೇಖರ ಪರಸರೆಡ್ಡಿ, ಅವ್ವಣ್ಣ ಮ್ಯಾಕೇರಿ, ಜಿ¯್ಲÁಧ್ಯP್ಷÀ ಅಶೋಕ ಬಗಲಿ, ಶಿವರಾಜ ಪಾಟೀಲï ರz್ದÉÃವಾಡಗಿ, ವೆಂಕಟಪ್ರಸಾದ ಮಾಲಪಾಟಿ, ಉಮೇಶ ಪಾಟೀಲï, ಶಿವಯೋಗಿ ನಾಗನಹಳ್ಳಿ, ಮಹೇಂದ್ರ ಪೂಜಾರಿ, ಮಲ್ಲಿಕಾರ್ಜುನ ಜಿನ್ನಕೇರಿ, ಗುರು ನರಬೋಳಿ, ಆನಂದ ಕೊರಳ್ಳಿ, ಬಾಬುರಾವ ಹಾಗರಗುಂಡಗಿ, ನಾಗರಾಜ ಮಹಾಗಾಂವಕರ್ ಇದ್ದರು.

ಕಲಬುರಗಿಗೆ ಆನ್‌ಲೈನ್ ಎಂಪಿ

ಸಂಸದ ರಾಧಾಕೃಷ್ಣ ದೊಡ್ಡಮನಿ ಎರಡೂವರೆ ವರ್ಷದಲ್ಲಿ ಒಂದೇ ಒಂದು ಸಭೆ ನಡೆಸದೆ ಮೊನ್ನೆ ದಿಶಾ ಮೀಟಿಂಗ್ ಆನ್‌ಲೈನ್ ಮೂಲಕ ನಡೆಸಿ ಕಲಬುರಗಿಯ ಆನ್‌ಲೈನ್ ಎಂಪಿ ಎಂಬ ಖ್ಯಾತಿಗೆ ಪಾತ್ರರಾಗಿz್ದÁರೆ ಎಂದು ಮಾಜಿ ಸಂಸದ ಡಾ.ಉಮೇಶ ಜಾಧವ್ ಲೇವಡಿ ಮಾಡಿದರು. ಕೇಂದ್ರ ಪುರಸ್ಕೃತ ಯೋಜನೆಗಳ ಪ್ರಗತಿಗಾಗಿ ನಡೆಸುವ ದಿಶಾ ಸಭೆ ತರಾತುರಿಯಲ್ಲಿ ಫೆ.೨೮ರಂದು ಕರೆದು ಸ್ವತಃ ಸಂಸದರು ಗೈರುಹಾಜರಾಗಿ ವಿಡಿಯೋ ಕಾನ್ಫರೆನ್ಸ್ ಮೂಲಕ ಕೇವಲ ಆರು ನಿಮಿಷ ಬೆಂಗಳೂರಿನಿAದ ಪಾಲ್ಗೊಂಡು ಕಲಬುರಗಿ ಮತದಾರರಿಗೆ ಚಳ್ಳೆ ಹಣ್ಣು ತಿನ್ನಿಸಿz್ದÁರೆ. ದಿಶಾ ಸಭೆ ಆನ್‌ಲೈನ್ ಮೂಲಕ ಮಾಡಿದ್ದು ದೇಶದ ಇತಿಹಾಸದಲ್ಲೇ ಪ್ರಥಮ ಎಂದು ಆರೋಪಿಸಿದರು. ಕಲಬುರಗಿ ವಿಮಾನ ನಿಲ್ದಾಣ ಬಂದ್ ಆದರೂ ಸಂಸದರು ಕೇಂದ್ರಕ್ಕೆ ಒಂದು ಪತ್ರ ಬರೆದು ಮೌನವಾಗಿರುವುದು ವಿಷಾದನೀಯ. ಕರೋನಾ ಸಂದರ್ಭದಲ್ಲಿ ವಿಮಾನ ಹಾರಾಟ ನಡೆಸಿ ಜನರಿಗೆ ಪ್ರಯೋಜನವಾಗುವಂತೆ ಮಾಡಲಾಗಿತ್ತು. ಆದರೀಗ ಶ್ರೀಮಂತರ ವಿಮಾನ ಮಾತ್ರ ಇಳಿಯುವ ನಿಲ್ದಾಣವಾಗಿ ಪರಿವರ್ತನೆಗೊಂಡಿದೆ ಎಂದು ವ್ಯಂಗ್ಯವಾಡಿದರು.
"

ದಲಿತರ ಯೋಜನೆಗೆ ಮೀಸಲಿರುವ ಅನುದಾನ ದುರ್ಬಳಕೆ ಮಾಡುತ್ತಿರುವ ಸರ್ಕಾರದ ಬಗ್ಗೆ ದಲಿತ ಸಮುದಾಯದ ಶಾಸಕರು ಮತ್ತು ಸಚಿವರು ಚಕಾರ ಎತ್ತುತ್ತಿಲ್ಲ. ದೇಶ-ವಿದೇಶದ ವಿವಿಧ ಸಂಗತಿ ಕುರಿತು ಮಾತನಾಡುವ ಜಿ¯್ಲÁ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಸಹ ಈ ಕುರಿತು ಧ್ವನಿ ಎತ್ತದಿರುವುದು ದೊಡ್ಡ ದುರಂತ.

| ರಾಜಕುಮಾರ ಪಾಟೀಲ್ ತೆಲ್ಕೂರಮಾಜಿ ಶಾಸಕ