ರಾಜ್ಯದ ವಿವಿಧೆಡೆ ಪರೀಕ್ಷೆ ನಡೆಯಲಿದೆ. ಸಮಸ್ತಕ್ಕೆ ಪರಿಗಣಿಸಲು ಕೋರಿಕೆ
- ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾಹಿತಿ
- ಸಿಯುಕೆ ಯುಜಿ ಕೋರ್ಸ್ ಪ್ರವೇಶ ಪರೀಕ್ಷೆ
ಕಲಬುರಗಿ:ಕಡಗಂಚಿಯಲ್ಲಿರುವ ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯದ (ಸಿಯುಕೆ) ಪ್ರಸಕ್ತ ವರ್ಷದ ಸ್ನಾತಕ (ಯುಜಿ) ಕೋರ್ಸ್ ಪ್ರವೇಶಕ್ಕೆ ಜ.೩೧ರವರೆಗೆ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬೇಕು ಎಂದು ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಹೇಳಿದರು.
ರಾಷ್ಟಿçÃಯ ಪರೀಕ್ಷಾ ಸಂಸ್ಥೆಯು ಶಿP್ಷÀಣ ಸಚಿವಾಲಯದಡಿ ಸಿಯುಕೆ ವಿವಿಧ ೧೫ ಸ್ನಾತಕ (ಯುಜಿ) ಕೋರ್ಸ್ ಪ್ರವೇಶಕ್ಕಾಗಿ ಪರೀಕ್ಷೆ ನಡೆಸುತ್ತದೆ. ಪಿಯುಸಿ ಓದುತ್ತಿರುವ ಹಾಗೂ ಈಗಾಗಲೇ ಓದಿರುವವರು ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು ಎಂದು ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಂಪ್ಯೂಟರ್ ಆಧಾರಿತ ಪ್ರವೇಶ ಪರೀಕ್ಷೆಗೆ ಅರ್ಜಿ ಸಲ್ಲಿಕೆ ಪ್ರಕ್ರಿಯ ಆರಂಭವಾಗಿದ್ದು, ಜ.೩೧ರ ರಾತ್ರಿ ೧೧.೫೦ರವರೆಗೆ ಅವಕಾಶವಿದೆ. ತಿದ್ದುಪಡಿಗೆ ಎರಡು ದಿನ ಅವಕಾಶ ನೀಡಿದ್ದು, ಫೆ.೧ರಿಂದ ೪ರವರೆಗೆ ಮಾಡಬಹುದು ಎಂದರು.
ಬಿ.ಟೆಕ್ ಇಲೆಕ್ಟಿçಕಲï, ಇಲೆಕ್ಟಾçನಿಕ್ ಆ್ಯಂಡ್ ಕಮ್ಯುನಿಕೇಷನ್ ಇಂಜಿನಿಯರಿAಗ್ (ಕೃತಕ ಬುದ್ಧಿಮತ್ತೆ ಆ್ಯಂಡ್ ಮಷಿನ್ ಲರ್ನಿಂಗ್), ಬಿ.ಟೆಕ್ ಗಣಿತ ಕಂಪ್ಯೂಟರಿAಗ್ (ಆನರ್ಸ್), ಬಿ.ಟೆಕ್ ಭೌತಶಾಸ್ತç (ಆನರ್ಸ್), ಬಿ.ಎಸ್ಸಿ ಭೌತಶಾಸ್ತç (ಆನರ್ಸ್), ರಸಾಯನ ಶಾಸ್ತç (ಆನರ್ಸ್), ಭೂಗೋಳ, ಭೂ ವಿಜ್ಞಾನ, ಬಿ.ಎಸ್ಸಿ ಮನೋವಿಜ್ಞಾನ, ಬಿಬಿಎ(ಆನರ್ಸ್), ಸಮಾಜ ಕಾರ್ಯದಲ್ಲಿ ಪದವಿ, ಬಿಎ ಅರ್ಥಶಾಸ್ತç, ಇತಿಹಾಸ, ಬಿಎ ಇಂಗ್ಲಿಷ್, ಬಿಎ ಎಲïಎಲïಬಿ (ಐದು ವರ್ಷದ ಇಂಟಿಗ್ರೇಟೆಡ್ ಪ್ರೋಗ್ರಾಂ ಸೇರಿ ಅನೇಕ ಯುಜಿ ಕೋರ್ಸ್)ಪ್ರವೇಶ ಪರೀಕ್ಷೆ ೧೩ ಭಾಷೆಗಳಲ್ಲಿ ನಡೆಸಲಾಗುವುದು ಎಂದು ತಿಳಿಸಿದರು.
ಸಿಯುಕೆ ಯುಜಿ ಕೋರ್ಸ್, ಪರೀಕ್ಷಾ ಯೋಜನೆ, ಅರ್ಹತೆ ಮತ್ತು ಇತರ ಮಾಹಿತಿಗೆ ಅಭ್ಯರ್ಥಿಗಳು ಎನ್‌ಟಿಎ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ೨೦೨೬ರ ಮಾಹಿತಿ ಬುಲೆಟಿನ್ ಪರಿಶೀಲಿಸಬಹುದು. ವೆಬ್‌ಸೈಟ್‌ನಲ್ಲಿ ಮಾತ್ರ ಅರ್ಜಿ ಸಲ್ಲಿಸಬೇಕು ಎಂದರು.
ಕುಲಸಚಿವ ಪ್ರೊ.ಆರ್.ಆರ್. ಬಿರಾದಾರ್, ಪರೀಕ್ಷಾ ನಿಯಂತ್ರಣಾಧಿಕಾರಿ ಡಾ.ಕೋಟಾ ಸಾಯಿಕೃಷ್ಣ, ಪ್ರವೇಶ ಸಮಿತಿ ಚೇರ್ಮನ್ ಡಾ.ಹನುಮೇಗೌಡ, ಡಾ.ಕಟ್ಟಿಮನಿ, ಸಹಾಯಕ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ.ಪ್ರಕಾಶ ಬಾಳಿಕಾಯಿ ಇತರರಿದ್ದರು.
ಸುದ್ದಿಗೋಷ್ಠಿಗೂ ಮುನ್ನ ಪತ್ರಕರ್ತರನ್ನು ಇಂಗ್ಲಿಷ್ ವಿಭಾಗದ ಕಂಪ್ಯೂಟರ್ ಲ್ಯಾಬ್ ಸೇರಿ ವಿವಿಧ ವಿಭಾಗ, ಮೂಲಸೌಲಭ್ಯ ವ್ಯವಸ್ಥೆ, ವಸತಿನಿಲಯ, ಕ್ಯಾಂಪಸ್‌ನ ಕಟ್ಟಡಗಳಿಗೆ ಕರೆದೊಯ್ದು ಸೌಲಭ್ಯಗಳ ಕುರಿತು ಸಮಗ್ರ ವಿವರಣೆ ನೀಡಿದರು.
ಕರ್ನಾಟಕದ ಬಳ್ಳಾರಿ, ಬೆಳಗಾವಿ, ಬೆಂಗಳೂರು, ಬೀದರ್, ದಾವಣಗೆರೆ, ಕಲಬುರಗಿ, ಹಾಸನ, ಹುಬ್ಬಳ್ಳಿ, ಮಂಗಳೂರು, ಮೈಸೂರು, ಶಿವಮೊಗ್ಗ, ತುಮಕೂರು, ಉಡುಪಿ, ಧಾರವಾಡ ಮತ್ತು ಚಿಕ್ಕಮಗಳೂರು ಇತರಡೆಯೂ ಯುಜಿ ಪ್ರವೇಶ ಪರೀಕ್ಷೆ ನಡೆಯಲಿದೆ.
| ಪ್ರೊ.ಬಟ್ಟು ಸತ್ಯನಾರಾಯಣಕುಲಪತಿ, ಸಿಯುಕೆ ಕಲಬುರಗಿ