ಕಲಬುರಗಿ: ಕನ್ನಡ ಸಾಹಿತ್ಯವನ್ನು ಗಂಭೀರ ಪರಿಗಣಿಸುವುದರ ಜತೆ ಸಾಹಿತಿ ಮತ್ತು ವಿಮರ್ಶಕರು ಸಮಾಜದ ಆಗು-ಹೋಗುಗಳನ್ನೂ ವಿಮರ್ಶಿಸಬೇಕು ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಎಲ್.ಎನ್. ಮುಕುಂದರಾಜ್ ಹೇಳಿದರು.
ಕರ್ನಾಟಕ ಕೇಂದ್ರೀಯ ವಿಶ್ವವಿದ್ಯಾಲಯ (ಸಿಯುಕೆ)ದಲ್ಲಿ ಕನ್ನಡ ವಿಭಾಗ ಹಾಗೂ ಕನ್ನಡ ಮತ್ತು ಸಂಸತಿ ಇಲಾಖೆಯ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಹಯೋಗದಡಿ ಬುಧವಾರ ಆಯೋಜಿಸಿದ್ದ ಕನ್ನಡ ವಿಮರ್ಶೆಯ ತಾತ್ವೀಕರಣ ಕುರಿತ ಮೂರು ದಿನದ ಕಮ್ಮಟಕ್ಕೆ ಬುಧವಾರ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಸಂದರ್ಭದಲ್ಲಿ ಕನ್ನಡ ಸಾಹಿತ್ಯ ಜತೆ ಸಿನಿಮಾ, ರಂಗಭೂಮಿ, ನಾಟಕ, ಪತ್ರಿಕೋದ್ಯಮ ಸೇರಿ ವಿವಿಧ ೇತ್ರದ ಬೆಳವಣಿಗೆಗಳನ್ನೂ ವಿಮರ್ಶೆ ವ್ಯಾಪ್ತಿಗೆ ತರಬೇಕಾಗಿದೆ. ತಮ್ಮ ಬರವಣಿಗೆ ಮೂಲಕ ಸಮಾಜಮುಖಿ ಕಾರ್ಯ ಮಾಡುತ್ತಿರುವ ಯುವ ಸಾಹಿತಿಗಳನ್ನು ಪ್ರೋತ್ಸಾಹಿಸುವ ಅಗತ್ಯವಿದೆ ಎಂದರು.
ಕುಲಪತಿ ಪ್ರೊ.ಬಟ್ಟು ಸತ್ಯನಾರಾಯಣ ಮಾತನಾಡಿ, ಯಾವುದೇ ಭಾಷೆ ಇದ್ದರೂ ಪ್ರೀತಿಸಿ ಗೌರವಿಸಬೇಕು. ಕೇಂದ್ರ ಸರ್ಕಾರದ ರಾಷ್ಟ್ರೀಯ ಶಿಕ್ಷಣ ನೀತಿ&2020ರ ಆಶಯದಂತೆ ತಮ್ಮ ತಮ್ಮ ಪ್ರಾದೇಶಿಕ ಭಾಷೆಯಲ್ಲೇ ಶಿಕ್ಷಣ ನೀಡುವುದರಿಂದ ವಿದ್ಯಾರ್ಥಿಗಳು ವಿಷಯ, ವಿಶೇಷವಾಗಿ ಮಾಹಿತಿ ತಂತ್ರಜ್ಞಾನಕ್ಕೆ ಸಂಬಂಧಿಸಿದ ಜ್ಞಾನ ಸುಲಭವಾಗಿ ಗ್ರಹಿಸಲು ಸಾಧ್ಯವಾಗುತ್ತದೆ ಎಂದು ಹೇಳಿದರು.
ಜಪಾನ್, ಜರ್ಮನಿ ಸೇರಿ ಹಲವು ದೇಶಗಳಲ್ಲಿ ಸ್ಥಳಿಯ ಭಾಷೆಯಲ್ಲೇ ಶಿಕ್ಷಣ ನೀಡಲಾಗುತ್ತಿದೆ. ನಮ್ಮ ಕನ್ನಡದ ಮಹಾನ್ ಕವಿಗಳಾದ ರನ್ನ, ಪಂಪ, ಪೊನ್ನ ಮೊದಲಾದವರ ಸಾಹಿತ್ಯ ಮತ್ತು ಕೃತಿಗಳ ಸತ್ವ ಇಂದಿನ ಪೀಳಿಗೆ ಅರಿತುಕೊಳ್ಳಬೇಕಾಗಿದೆ. ಕನ್ನಡವು ಶಾಸಿಯ ಹಾಗೂ ಪ್ರಾಚಿನ ಭಾಷೆಯಾಗಿದ್ದು, ಕನ್ನಡದ ಸಾಹಿತ್ಯ ಮತ್ತು ಪರಂಪರೆ ಇತರ ಭಾಷೆಗಳಿಗೆ ಅನುವಾದಿಸುವುದರ ಜತೆಗೆ ಇಂದಿನ ವಿದ್ಯಾರ್ಥಿಗಳು ಕನ್ನಡ ಸಾಹಿತ್ಯವನ್ನು ಮತ್ತಷ್ಟು ಆಳವಾಗಿ ಅಧ್ಯಯನ ಮಾಡಬೇಕು ಎಂದು ಸಲಹೆ ನೀಡಿದರು.
ಕಮ್ಮಟದ ಕುರಿತು ಮೈಸೂರಿನ ಭಾರತೀಯ ಭಾಷಾ ಸಂಸ್ಥಾನದ ನಿರ್ದೇಶಕ ಪ್ರೊ.ಬಸವರಾಜ ಕೋಡಗುಂಟಿ, ಹೊಸಕೋಟೆಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ.ರಾಮಲಿಂಗಪ್ಪ ಬೇಗೂರು ಮಾತನಾಡಿದರು. ಕನ್ನಡ ವಿಮರ್ಶೆ ಮತ್ತು ತಾತ್ಮೀಕರಣ ಕುರಿತು ಸಿಯುಕೆಯ ಮಾನವಿಕ ಮತ್ತು ಭಾಷಾ ನಿಕಾಯದ ಡೀನ್ ಪ್ರೊ.ಗಣೇಶ್ ಪವಾರ್ ಮಾತನಾಡಿದರು.
ಸಿಯುಕೆ ಕನ್ನಡ ವಿಭಾಗದ ಮುಖ್ಯಸ್ಥೆ ಪ್ರೊ.ಶಿವಗಂಗಾ ರಮ್ಮಾ ಅಧ್ಯಕ್ಷತೆ ವಹಿಸಿದ್ದರು. ಸಾಹಿತ್ಯ ಅಕಾಡೆಮಿ ಸದಸ್ಯ&ಸಂಚಾಲಕ ಸಿದ್ಧರಾಮ ಹೊನ್ಕಲ್ ಪ್ರಾಸ್ತಾವಿಕ ಮಾತನಾಡಿದರು. ಕಮ್ಮಟದ ಮೊದಲ ದಿನ ವಿ.ಬಿ. ತಾರಕೇಶ್ವರ ಅವರು ಅನುವಾದ ಕೃತಿಗಳಲ್ಲಿನ ಕನ್ನಡ ವಿಮರ್ಶೆಯ ಪರಿಕಲ್ಪನಿಕರಣ, ಕನ್ನಡ ಸಾಹಿತ್ಯ ಚರಿತ್ರೆ ಕುರಿತು ಡಾ.ರಾಮಲಿಂಗಪ್ಪ ಬೇಗೂರು ಹಾಗೂ ಪದ್ಮಪ್ರಸಾದ ಉಪನ್ಯಾಸ ನೀಡಿದರು.
ಕನ್ನಡ ವಿಭಾಗದ ಪ್ರಾಧ್ಯಾಪಕ ಪ್ರೊ.ವಿಕ್ರಮ ವಿಸಾಜಿ, ಡಾ.ಅಪ್ಪಗೆರೆ ಸೋಮಶೇಖರ, ಡಾ.ಟಿ.ಡಿ. ರಾಜಣ್ಣ, ಡಾ.ರೋಹಿಣಾಕ್ಷ ಶಿರ್ಲಾಲು ಇತರರು ಆನ್ಲೈನ್ ಮತ್ತು ಆಫ್ಲೈನ್ ಮೂಲಕ ಭಾಗವಹಿಸಿದ್ದರು.
ಸಂಕಷ್ಟದ ಪರಿಸ್ಥಿತಿಯಲ್ಲೂ ವಿಮರ್ಶಕರು ಮತ್ತು ಸಾಹಿತಿಗಳು ಸತ್ಯ ಹೇಳುವ ಧೈರ್ಯ ಹೊಂದಿರಬೇಕು. ಮೌನಕ್ಕೆ ಶರಣಾಗುವುದು ಆತ್ಮಾಹುತಿಗೆ ಸಮಾನ.> ಎಲ್.ಎನ್.ಮುಕುಂದರಾಜ್ ಅಧ್ಯಕ್ಷ, ಕರ್ನಾಟಕ ಸಾಹಿತ್ಯ ಅಕಾಡೆಮಿ