ಅಫಜಲಪುರದಲ್ಲಿ ಹಮ್ಮಿಕೊಂಡಿದ್ದ ರಾಜ್ಯ ಅಂಗನವಾಡಿ ನೌಕರರ ಸಂದ ತಾಲೂಕು ಮಟ್ಟದ ಸಮ್ಮೇಳನವನ್ನು ಕಾರ್ಯಾಧ್ಯೆ ಶಾಂತಾ ಘಂಟೆ ಉದ್ಘಾಟಿಸಿದರು. ಶ್ರೀಮಂತ ಬಿರಾದಾರ, ಭೀಮರಾವ ಗೌರ, ರಮೇಶ ಪಾಟೀಲ್​ ಇತರರಿದ್ದರು. 
ಕಲಬುರಗಿ

ಸರ್ಕಾರಿ ನೌಕರರೆಂದು ಪರಿಗಣನೆ ಮಾಡಿ

ಅಫಜಲಪುರ: ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಜಾರಿಯಲ್ಲಿ ಶ್ರಮಿಸುವ ಅಂಗನವಾಡಿ ಕಾರ್ಯಕರ್ತೆಯರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿ, ಕನಿಷ್ಠ ಕೂಲಿ ವ್ಯಾಪ್ತಿಗೆ ಸೇರಿಸಬೇಕು ಎಂದು ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದ ಕಾರ್ಯಾಧ್ಯಕ್ಷೆ ಶಾಂತಾ ಘಂಟೆ ಆಗ್ರಹಿಸಿದರು.

ಶಾರದಾ ಕಲ್ಯಾಣ ಮಂಟಪದಲ್ಲಿ ಕರ್ನಾಟಕ ರಾಜ್ಯ ಅಂಗನವಾಡಿ ನೌಕರರ ಸಂಘದಿಂದ ಸೋಮವಾರ ಆಯೋಜಿಸಿದ್ದ 10ನೇ ತಾಲೂಕು ಮಟ್ಟದ ಸಮ್ಮೇಳನ ಉದ್ಘಾಟಿಸಿ ಮಾತನಾಡಿ, ಸರ್ಕಾರಗಳು ಬಂಡವಾಳಶಾಹಿಗಳ ಪರ ನೀತಿ ಜಾರಿ ಮಾಡುತ್ತಿರುವುದರಿಂದ ಕೆಳ ಹಂತದಲ್ಲಿ ದುಡಿವ ಕಾರ್ಮಿಕರ ಹಿತ ಕಾಪಾಡುವಲ್ಲಿ ವಿಫಲವಾಗುತ್ತಿವೆ. ಕೇಂದ್ರ ಸರ್ಕಾರ ಸುಮಾರು 50 ವರ್ಷಗಳ ಹಿಂದೆ ಮಕ್ಕಳ ಸಮಗ್ರ ಅಭಿವೃದ್ಧಿಗಾಗಿ ಜಾರಿಗೆ ತಂದ ಐಸಿಡಿಎಸ್​ ಯೋಜನೆಯ ಅನುದಾನ ಕೊಡುವಲ್ಲಿ ಹಿಂದೇಟು ಹಾಕುತ್ತಿದೆ. ಅಲ್ಲದೆ ಯೋಜನೆಯಡಿ ಕೆಲಸ ಮಾಡುವ ನೌಕರರಿಗೆ ಕನಿಷ್ಠ ಕೂಲಿ ಕೊಡದೆ ಮೋಸ ಮಾಡುತ್ತಿದೆ ಎಂದು ಕಿಡಿಕಾರಿದರು.

ಮುಂದಿನ ವರ್ಷ ಫೆಬ್ರವರಿಯಲ್ಲಿ ನಡೆಯುವ ಅಧಿವೇಶನದಲ್ಲಿ ಅಂಗನವಾಡಿ ನೌಕರರ ಬಗ್ಗೆ ಕಾಳಜಿ ವಹಿಸದಿದ್ದರೆ ಲೋಕಸಭಾ ಸದಸ್ಯರು ಮತ್ತು ಸಚಿವರ ಮನೆ ಮುಂದೆ ಪ್ರತಿಭಟನೆ ಮಾಡಲಾಗುವುದು ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾಧ್ಯಕ್ಷೆ ಗೌರಮ್ಮ ಪಾಟೀಲ್​ ಮಾತನಾಡಿ, ಸರ್ಕಾರಗಳು ವಿವಿಧ ಇಲಾಖೆ ಕೆಲಸಗಳಿಗೆ ನಮ್ಮನ್ನು ಬಳಕೆ ಮಾಡದೆ, ಮಕ್ಕಳ ಸಮಗ್ರ ಅಭಿವೃದ್ಧಿಗೆ ಶ್ರಮಿಸಲು ಬಿಟ್ಟರೆ ದೇಶದ ಮಕ್ಕಳ ಭವಿಷ್ಯಕ್ಕೆ ಭದ್ರ ಬುನಾದಿಯಾಗುತ್ತದೆ ಎಂದರು.

ಕರ್ನಾಟಕ ಪ್ರಾಂತ ರೈತ ಸಂದ ತಾಲೂಕು ಅಧ್ಯ ಶ್ರೀಮಂತ ಬಿರಾದಾರ, ಪ್ರಮುಖರಾದ ಭೀಮರಾವ ಗೌರ, ನಾಮದೇವ ಕಡಕೋಳ, ಶ್ರೀದೇವಿ ಚೋಡೆ, ಗುರು ಚಾಂದಕವಟೆ, ರಾಜಮತಿ ಪಾಟೀಲ್​, ಪುಷ್ಪಾ ಶೆಟ್ಟಿ, ರಮೇಶ ಪಾಟೀಲ್​, ಕಲಾವತಿ ಯಳಸಂಗಿ, ಶೈಲಾಶ್ರೀ ದೊಡ್ಡಮನಿ, ಲಲಿತಾ ನಾವಿ, ಸುವರ್ಣಾ ಎರಡೆತ್ತಿ, ಶಿವಲೀಲಾ ಪಾಟೀಲ್​, ಶಾಮಲಾ ಶಿವೂರ, ಬಸ್ಸಮ್ಮ ಗುತ್ತೇದಾರ್​, ಅನಸೂಯಾ ಪಾಟೀಲ್​, ಬಿಸ್ಮಿಲ್ಲಾ ಖೇಡಗಿ, ಮಹಾದೇವಿ ರಾಠೋಡ್​ ಇತರರಿದ್ದರು.