mlc tippannappa kamakanoor 
ಕಲಬುರಗಿ

ಎಂಎಲ್ಸಿ ಸ್ಥಾನಕ್ಕೆ ತಿಪ್ಪಣ್ಣಪ್ಪ ಕಮಕನೂರ್​ಗೆ ಕಾಂಗ್ರೆಸ್​ ಟಿಕೆಟ್​

ಕಲಬುರಗಿ: ವಿಧಾನ ಪರಿಷತ್​ ಸದಸ್ಯ ಸ್ಥಾನಕ್ಕೆ ಕೋಲಿ ಸಮಾಜದ ಹಿರಿಯ ಮುಖಂಡ ತಿಪ್ಪಣ್ಣಪ್ಪ ಕಮಕನೂರ ಅವರಿಗೆ ಕಾಂಗ್ರೆಸ್​ ಟಿಕೆಟ್​ ಘೋಷಿಸಿದ್ದು, ವಿಧಾನಸಭೆಯಿಂದ ಆಯ್ಕೆಯಾಗುವುದು ಖಚಿತವಾಗಿದೆ.
ಈ ಕುರಿತು ರಾಜ್ಯದ ನಾಲ್ಕು ಪರಿಷತ್​ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್​ ಹೆಸರುಗಳನ್ನು ಘೋಷಿಸಿದ್ದು, ಅದರಲ್ಲಿ ತಿಪ್ಪಣ್ಣಪ್ಪ ಕಮಕನೂರ ಹೆಸರನ್ನು ಘೋಷಿಸಿ ಎಐಸಿಸಿ ಪ್ರಧಾನ ಕಾರ್ಯದರ್ಶಿ ವೇಣುಗೋಪಾಲ ಪ್ರಕಟಣೆ ಹೊರಡಿಸಿದ್ದಾರೆ.
ಕಳೆದ ಎರಡು ಅವಧಿಯಲ್ಲಿ ಪರಿಷತ್​ ಅರ್ಧ ಅಧಿಕಾರವಧಿಗೆ ಸದಸ್ಯ ಸ್ಥಾನವನ್ನು ಕಾಂಗ್ರೆಸ್​ ನೀಡಿತ್ತು. ಇದೀಗ ಪೂರ್ಣಾವಧಿ ಅಧಿಕಾರದೊಂದಿಗೆ ವಿಧಾನ ಪರಿಷತ್​ ಮೆಟ್ಟಿಲ್ಲನ್ನು ತಿಪ್ಪಣ್ಣಪ್ಪ ಕಮಕನೂರ ಏರಲಿದ್ದಾರೆ.
ಪ್ರಬಲ ಕೋಲಿ ಸಮಾಜದ ಮತ್ತು ಹಿಂದುಳಿದ ವರ್ಗಗಳ ನಾಯಕರಾಗಿ, ನೇರ ನುಡಿಗಳ ಮೂಲಕ ಹೆಸರುವಾಸಿಯಾಗಿರುವ ತಿಪ್ಪಣ್ಣಪ್ಪ ಎಐಸಿಸಿ ಅಧ್ಯಕ್ಷ ಡಾ.ಮಲ್ಲಿಕಾರ್ಜುನ ಖರ್ಗೆ ಸೇರಿ ಕಾಂಗ್ರೆಸ್​ನ ಹಿರಿಯ ನಾಯಕರ ಜತೆ ಉತ್ತಮ ಒಡನಾಟವನ್ನು ಹೊಂದಿದ್ದರು.
ಜೂ.8ರಂದು ನಾಮಪತ್ರ ಸಲ್ಲಿಕೆಗೆ ಕೊನೇ ದಿನವಾಗಿದ್ದು, ಅಂದೇ ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ಜೂ.11ರಂದು ನಾಮಪತ್ರ ವಾಪಸ್​ ಪಡೆಯಲು ಕೊನೇ ದಿನವಾಗಿದ್ದು, ಜು.18ಕ್ಕೆ ಚುನಾವಣೆ ನಡೆಯಲಿದ್ದು, ಗೆಲುವು ನಿಶ್ಚಿತವಾಗಿದೆ.