ಆಳಂದ ತಾಲೂಕಿನ ಜಿರೋಳೆಯಲ್ಲಿ ಸೇತುವೆ, ಸಮುದಾಯ ಭವನ ನಿರ್ಮಾಣಕ್ಕೆ ಕಲಬುರಗಿ, ಬೀದರ್​, ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಆರ್​.ಕೆ.ಪಾಟೀಲ್​ ಮಂಗಳವಾರ ಭೂಮಿಪೂಜೆ ನೆರವೇರಿಸಿದರು. ಓಂಕಾರ್​ ಒಡೆಯರ್​, ಪೀರದೋಷ್​ ಅನ್ಸಾರಿ, ದತ್ತು ಪೂಜಾರಿ ಇತರರಿದ್ದರು. 
ಕಲಬುರಗಿ

ನಿಗದಿತ ಅವಧಿಯಲ್ಲಿ ಗುಣಮಟ್ಟದ ಕೆಲಸ ಮಾಡಿ

ಆರ್​.ಕೆ.ಪಾಟೀಲ್​ ತಾಕೀತು

ಜಿರೋಳೆಯಲ್ಲಿ ಸೇತುವೆ, ಸಮುದಾಯ ಭವನ ನಿರ್ಮಾಣಕ್ಕೆ ಭೂಮಿಪೂಜೆ

ಆಳಂದ: ಶಾಸಕ ಬಿ.ಆರ್​.ಪಾಟೀಲ್​ ಅವರು ಕ್ಷೇತ್ರದ ಸಮಗ್ರ ಅಭಿವೃದ್ಧಿಗೆ ಸಾಕಷ್ಟು ಅನುದಾನ ತರುತ್ತಿದ್ದು, ಅಧಿಕಾರಿಗಳು ಹಾಗೂ ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿ ಜನರಿಗೆ ಅನುಕೂಲ ಕಲ್ಪಿಸಬೇಕು ಎಂದು ಕಲಬುರಗಿ, ಬೀದರ್​, ಯಾದಗಿರಿ ಹಾಲು ಉತ್ಪಾದಕರ ಒಕ್ಕೂಟದ ಅಧ್ಯಕ್ಷ ಆರ್​.ಕೆ.ಪಾಟೀಲ್​ ತಾಕೀತು ಮಾಡಿದರು.

ಜಿರೋಳೆ ಬಳಿ 60 ಲಕ್ಷ ರೂ. ಮೊತ್ತದ ಸೇತುವೆ ನಿರ್ಮಾಣ ಹಾಗೂ ಶ್ರೀ ಅಲ್ಲಮಪ್ರಭು ದೇವಸ್ಥಾನದ ಸಮೀಪ 30 ಲಕ್ಷ ರೂ. ವೆಚ್ಚದ ಸಮುದಾಯ ಭವನ ನಿರ್ಮಾಣಕ್ಕೆ ಮಂಗಳವಾರ ಭೂಮಿಪೂಜೆ ನೆರವೇರಿಸಿ ಮಾತನಾಡಿ, ಚುನಾವಣೆಯಲ್ಲಿ ಕೊಟ್ಟ ಮಾತಿನಲ್ಲಿ ಕ್ಷೇತ್ರದ ಸಮಗ್ರ ಪ್ರಗತಿಗೆ ಆದ್ಯತೆ ನೀಡಲಾಗುತ್ತಿದೆ. ಹಳ್ಳಿಯ ಸಮಸ್ಯೆಗಳು ಗಮನಕ್ಕೆ ತಂದಿದ್ದು, ಶಾಸಕರಿಗೆ ತಿಳಿಸಿ ಪರಿಹಾರ ಕಲ್ಪಿಸಲು ಶ್ರಮಿಸಲಾಗುವುದು ಎಂದು ಭರವಸೆ ನೀಡಿದರು.

ಪ್ರಮುಖರಾದ ಓಂಕಾರ ಒಡೆಯರ, ಪೀದೋರ್ಷ್​ ಅನ್ಸಾರಿ, ದತ್ತು ಪೂಜಾರಿ, ವಿಠ್ಠಲ್​ ಪಾಟೀಲ್​, ಬಸವಂತರಾವ ಪೊಲೀಸ್​ ಪಾಟೀಲ್​, ದತ್ತರಾಜ ಘಾಟಿಗೆ, ಅಪ್ಪಾರಾವ ಜವಳಿ, ನಾಗರಾಜ ಜೆರೋಳಿಕರ್​, ರಮೇಶ ಮುಲ್ಗಿ, ಪ್ರಭುಲಿಂಗ ಸುರೆ, ಗಜಾನಂದ ಜಮಾದಾರ, ಚಂದ್ರಶಾ ಕಾಂಬಳೆ, ಸಿದ್ದರಾಮ ಸುತಾರ, ಹನುಮಂತ ಸುತಾರ ಇತರರಿದ್ದರು.