ಕಲಬುರಗಿ: ಆಧುನಿಕ ತಂತ್ರಜ್ಞಾನ ಮೂಲಕ ಕೈಗೆಟಕುವ ದರದಲ್ಲಿ ಉತ್ತಮ ಚಿಕಿತ್ಸಾ ಸೇವಾ ಸೌಲಭ್ಯ ನೀಡಲು ನಮ್ಮ ಆಸ್ಪತ್ರೆ ಬದ್ಧವಾಗಿದೆ ಎಂದು ಸಿದ್ರಾಮೇಶ್ವರ ಕಣ್ಣಿನ ಆಸ್ಪತ್ರೆ ತಜ್ಞ ವೈದ್ಯ ಡಾ.ಸಿದ್ದಲಿಂಗರಡ್ಡಿ ಹೇಳಿದರು.
ವಿಶ್ವ ದೃಷ್ಟಿ ದಿನ ನಿಮಿತ್ತ ಗುರುವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನೇತ್ರ ಸಂಬಂಧಿ ರೋಗಿಗಳಿಗೆ ಯಾವುದೇ ಇಂಜೆಕ್ಷನ್, ಹೊಲಿಗೆಗಳಿಲ್ಲ. ಕಡಿಮೆ ಅವಧಿಯಲ್ಲಿ ಶ್ರೀ ಚೇತರಿಸಿಕೊಳ್ಳಲು ಅತ್ಯಾಧುನಿಕ ಟಾಫಿಕಲ್ ಫ್ಯಾಕೋ ಎಮಲ್ಸಿಫಿಕೇಷನ್ ಶಸಚಿಕಿತ್ಸೆ ಹಾಗೂ ಆಧುನಿಕ ತಂತ್ರಜ್ಞಾನದೊಂದಿಗೆ ಪೊರೆ ಶಸಚಿಕಿತ್ಸೆ ಮಾಡಲಾಗುತ್ತಿದೆ. ಆದರೆ ಕಣ್ಣಿನ ಸಮಸ್ಯೆಗಳನ್ನು ಆರಂಭಿಕ ಹಂತದಲ್ಲೇ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಪಡೆಯುವುದು ಒಳಿತು. ವಿಶೇಷವಾಗಿ ಮಧುಮೇಹ, ರಕ್ತದೊತ್ತಡದಂಥ ಕಾಯಿಲೆಗಳಿಂದ ಕಣ್ಣಿನ ಮೇಲೆ ಉಂಟಾಗುವ ಪರಿಣಾಮ ಕಡೆಗಣಿಸಬಾರದು ಎಂದು ಸಲಹೆ ನೀಡಿದರು.
ಅತ್ಯಾಧುನಿಕ ಪರೀಾ ಉಪಕರಣ ಬಳಸಿ ಕಣ್ಣಿನ ಒಳಭಾಗದ ಸೂಕ್ಷ$್ಮ ಬದಲಾವಣೆಗಳನ್ನು ನಿಖರವಾಗಿ ಪತ್ತೆ ಹಚ್ಚಿ ಸೂಕ್ತ ಚಿಕಿತ್ಸೆ ಕೈಗೊಳ್ಳಲು ಸಾಧ್ಯವಾಗಿದೆ. ನೇತ್ರ ಚಿಕಿತ್ಸೆಯಲ್ಲಿ ರೆಟಿನಾ ಮತ್ತು ವಿಟ್ರಿಯಸ್ ಕಾಯಿಲೆ, ರೆಟಿನಲ್ ಲೇಸರ್, ಗ್ಲಾಕೋಮಾ, ಕಣ್ಣಿನ ಪೊರೆ (ಕ್ಯಾಟರಾಕ್ಟ್) ಇತರ ಸಮಸ್ಯೆಗಳಿಗೆ ಆಧುನಿಕ ಚಿಕಿತ್ಸಾ ಸೌಲಭ್ಯ ಒದಗಿಸಲಾಗುತ್ತಿದೆ. ಗ್ಲಾಕೋಮಾ ಸಮಸ್ಯೆ, ಅಧಿಕ ರಕ್ತದೊತ್ತಡ, ಮಧುಮೇಹ ಕಾಯಿಲೆಯಿಂದ ಬಳಲುವವರು ಆರು ತಿಂಗಳಿಗೊಮ್ಮೆ ಕಡ್ಡಾಯವಾಗಿ ಕಣ್ಣಿನ ತಪಾಸಣೆ ಮಾಡಿಸಿಕೊಳ್ಳಬೇಕು ಎಂದರು.
ಡಾ.ವಿಶ್ವನಾಥರಡ್ಡಿ, ಡಾ.ರಾಜಶ್ರೀರಡ್ಡಿ, ಡಾ.ರಾಜೇಶ್ವರಿ ಸಿದ್ದಲಿಂಗರಡ್ಡಿ, ಡಾ.ವಿಶಾಲ್ ಕೋರವಾರ, ಡಾ.ವಿವೇಕ ಮೊಳಕೇರೆ ಮಾತನಾಡಿದರು. ಡಾ.ಆಯೇಷಾ ನಿಖತ್, ಎಸ್.ಎಸ್. ಹಿರೇಮಠ, ಡಾ.ಶಶಿಶೇಖರ ರಡ್ಡಿ ಇತರರಿದ್ದರು.
1993ರಲ್ಲಿ ಕೇವಲ ಆರು ಬೆಡ್ಗಳೊಂದಿಗೆ ಸಿದ್ರಾಮೇಶ್ವರ ಕಣ್ಣಿನ ಆಸ್ಪತ್ರೆ ಆರಂಭಿಸಲಾಗಿತ್ತು. ಈಗ ಎಂಟು ನುರಿತ ನೇತ್ರ ತರಿವು ಆಸ್ಪತ್ರೆಯಲ್ಲಿ ನಿತ್ಯ 250ಕ್ಕೂ ಹೆಚ್ಚು ಹೊರರೋಗಿಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಸುಮಾರು 35 ವರ್ಷದ ಸುದೀರ್ ಸೇವಾ ಅವಧಿಯಲ್ಲಿ ಒಂದು ತಿಂಗಳ ಮಗುವಿನಿಂದ ಹಿಡಿದು ವಯೋವೃದ್ಧರವರೆಗೆ 8000ಕ್ಕೂ ಹೆಚ್ಚು ಶಸಚಿಕಿತ್ಸೆ ಮಾಡಿ ಕಣ್ಣಿನ ದೃಷ್ಟಿ ಕಾಪಾಡಿರುವ ಸಂತೃಪ್ತಿಯಿದೆ.> ಡಾ.ವಿಶ್ವನಾಥ ರಡ್ಡಿ ಸಂಸ್ಥಾಪಕ, ಸಿದ್ರಾಮೇಶ್ವರ ಆಸ್ಪತ್ರೆ ಕಲಬುರಗಿ
ಮಕ್ಕಳ ಕಣ್ಣಿನ ಆರೋಗ್ಯದ ಬಗ್ಗೆಯೂ ಪೋಷಕರು ಹೆಚ್ಚಿನ ಕಾಳಜಿ ವಹಿಸಬೇಕು. ದೃಷ್ಟಿ ಮಂದ, ನೋವು, ಪದೇಪದೆ ಕಣ್ಣು ಉಜ್ಜುವುದು ಅಥವಾ ತಲೆನೋವು ಕಾಣಿಸಿಕೊಂಡರೆ ತಕ್ಷಣ ತಪಾಸಣೆ ಮಾಡಿಸಬೇಕು. ದೀಪಾವಳಿ ಸಂದರ್ಭದಲ್ಲಿ ಪಟಾಕಿ ಸಿಡಿಮದ್ದುಗಳಿಂದ ಮಕ್ಕಳು ಹಾಗೂ ಹಿರಿಯರು ಎಚ್ಚರ ವಹಿಸಬೇಕು. ಇರುಳಗಣ್ಣು ಸಮಸ್ಯೆಗೆ ಅನುವಂಶೀಯತೆ ಕಾರಣ. ಇದಕ್ಕೆ ಸೂಕ್ತ ಚಿಕಿತ್ಸೆಗಳಿಲ್ಲ. ಕಣ್ಣಿನ ಬಗ್ಗೆ ಸದಾ ಕಾಳಜಿ ಇರಲಿ> ಡಾ.ರಾಜಶ್ರೀ ರಡ್ಡಿ ನೇತ್ರತಜ್ಞೆ, ಸಿದ್ರಾಮೇಶ್ವರ ಆಸ್ಪತ್ರೆ
ತಂತ್ರಜ್ಞಾನ ಹಾಗೂ ನವೀನ ಚಿಕಿತ್ಸಾ ವಿಧಾನ ಬಳಸಿ ಗುಣಮಟ್ಟದ ಚಿಕಿತ್ಸೆ ನೀಡಲಾಗುತ್ತಿದ್ದು, ಸಕಾಲಕ್ಕೆ ನೇತ್ರ ತಪಾಸಣೆ, ಚಿಕಿತ್ಸೆ ಮತ್ತು ಆಧುನಿಕ ತಂತ್ರಜ್ಞಾನದಿಂದ ದೃಷ್ಟಿ ಸಮಸ್ಯೆ ನಿಯಂತ್ರಿಸಬಹುದು.> ಡಾ.ರಾಜೇಶ್ವರಿ ರಡ್ಡಿ ನೇತ್ರತಜ್ಞೆ, ಸಿದ್ರಾಮೇಶ್ವರ ಆಸ್ಪತ್ರೆ