ಕಲಬುರಗಿ: ಸೂಪರ್ ಎಲ್ನೀನೋ ಕಾರಣಕ್ಕೆ ಬರ ಆವರಿಸಿದ್ದು, ವಿಭಾಗವಾರು ಸ್ಥಿತಿ ಅರಿಯಲು ಖುದ್ದು ಸಿಎಂ ಡಿ.ಕೆ.ಶಿವಕುಮಾರ ಕಲಬುರಗಿಗೆಗೆ ಆಗಮಿಸುತ್ತಿದ್ದಾರೆ ಎಂದು ಗೃಹ, ಐಟಿ&ಬಿಟಿ, ಇ&ಆಡಳಿತ, ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ ತಿಳಿಸಿದರು.
ಸೂಪರ್ ಎಲ್ನಿನೋ ಸಮಸ್ಯೆ ಎಲ್ಲೆಡೆ ಇದ್ದು, ಮಳೆ ಕೊರತೆ ಜತೆಗೆ ಬಿಸಿ ಗಾಳಿ ಹೆಚ್ಚಿಸಲಿದೆ. ಸವಾಲನ್ನು ಎದುರಿಸಲು ಬೆಂಗಳೂರಿನಲ್ಲಿ ಎರಡು ಬಾರಿ ಸಭೆ ನಡೆಸಿದ್ದು, ಕಲ್ಯಾಣ ಕರ್ನಾಟಕದ ವಿಭಾಗವಾರು ಬರ ಸಭೆ ಮಂಗಳವಾರ ನಡೆಸಲಿದ್ದಾರೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮುಖ್ಯಮಂತ್ರಿಗಳು ಸೋಮವಾರ ಬಸವಕಲ್ಯಾಣಕ್ಕೆ ಮೊದಲು ಭೇಟಿ ನೀಡಲಿದ್ದಾರೆ. ಸಂಜೆಗೆ ಕಲಬುರಗಿಗೆ ಬರಲಿದ್ದು, ಶರಣಬಸವೇಶ್ವರ ದೇವಾಲಯ ಹಾಗೂ ಕೆಬಿಎನ್ ದರ್ಗಾಕ್ಕೆ ಭೇಟಿ ನೀಡಲಿದ್ದಾರೆ. ಮಂಗಳವಾರ ಬೆಳಗ್ಗೆ ವಿಭಾಗೀಯ ಮಟ್ಟದ ಅಧಿಕಾರಿಗಳ ಸಭೆ ನಡೆಸಲಿದ್ದಾರೆ. ಬರ ಎದುರಿಸಲು ಕೈಗೊಳ್ಳಬೇಕಾದ ಕ್ರಮದ ಬಗ್ಗೆ ಸುರ್ದೀ ಚರ್ಚೆ ನಡೆಸಲಿದ್ದಾರೆ. ನಂತರ ಮಾಧ್ಯಮಗಳಿಗೆ ವಿವರಣೆ ನೀಡಲಿದ್ದಾರೆ ಎಂದರು.
ಇದುವರೆಗೆ ಶೇ.35 ಮಳೆ ಕೊರತೆಯಾಗಿದ್ದು, ಉದ್ದು, ಹೆಸರು ಬೆಳೆ ಕೈಕೊಟ್ಟಿದೆ. ಮೋಡ ಬಿತ್ತನೆ ಚರ್ಚೆ ನಡೆಯುತ್ತಿದ್ದು, ಸದ್ಯಕ್ಕೆ ಪ್ರಸ್ತಾವನೆ ಇಲ್ಲ. ಮಳೆ ನಿರೀೆ ಇದೆ ಎಂದರು.
ಯುವ ಕರ್ನಾಟಕ ಸಂಕಲ್ಪ ಸಿಎಂ ಡಿ.ಕೆ.ಶಿವಕುಮಾರ ಅವರಿಗಿದೆ. ಕಿತ್ತೂರು ಹಾಗೂ ಕಲ್ಯಾಣ ಕರ್ನಾಟಕದ ಅಭಿವೃದ್ದಿ ಹಾಗೂ ಆರ್ಥಿಕ ಪ್ರಗತಿಗೆ ನೀಲ ನೆಗೆ ಸೂಚಿಸಿದ್ದಾರೆ ಎಂದರು.
ವೈದ್ಯಕಿಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ್ ಮಾತನಾಡಿ, ಕಲಬುರಗಿ ಸೇರಿ ಉತ್ತರ ಕರ್ನಾಟಕ ಭಾಗದ ಜಿಲ್ಲೆಗೆ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಭೀಮಾ ನದಿಗೆ ನೀರು ಬಿಡುವಂತೆ ಸರ್ಕಾರ ಮಹಾರಾಷ್ಟ್ರ ಸರ್ಕಾರಕ್ಕೆ ಪತ್ರ ಬರೆದಿದೆ. ಮಂಗಳವಾರ ನಡೆಯಲಿರುವ ವಿಭಾಗವಾರು ಸಭೆಯಲ್ಲಿ ಚರ್ಚಿಸಲಾಗುವುದು.
ಪತ್ರಿಕಾಗೋಷ್ಠಿಯಲ್ಲಿ ಶಾಸಕರಾದ ಎಂ.ವೈ.ಪಾಟೀಲ, ಅಲ್ಲಮಪ್ರಭು ಪಾಟೀಲ, ವಿಧಾನ ಪರಿಫಿತ್ ಶಾಸಕರಾದ ತಿಪ್ಪಣ್ಣಪ್ಪ ಕಮಕನೂರ, ಜಗದೇವ ಗುತ್ತೇದಾರ, ಜೆಸ್ಕಾಂ ಅಧ್ಯಕ್ಷ ಪ್ರವಿಣ ಪಾಟೀಲ ಹರವಾಳ, ಕಲಬುರಗಿ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಮಜರ್ ಆಲಂಖಾನ್ ಇತರರಿದ್ದರು.