rowdy pared 
ಕಲಬುರಗಿ

ಬಾಲ ಬಿಚ್ಚಿದ್ರೆ ಕಠಿಣ ಕ್ರಮ ಹುಷಾರ್​!

ಪ್ರಮುಖ ಮುಖ್ಯಾಂಶಗಳು

  • ರೌಡಿಗಳಿಗೆ ಡಾ.ಶರಣಪ್ಪ ಎಸ್​.ಡಿ. ಎಚ್ಚರಿಕೆ
  • ನಿರಂತರ ನಿಗಾ ಇಡಲು ಸೂಚನೆ
ಕಲಬುರಗಿ: ದುರ್ನಡತೆ, ರೂಢಿಗತ ಅಪರಾಧಿಗಳು ಜೀವನದಲ್ಲಿ ಬದಲಾವಣೆ ಮಾಡಿಕೊಳ್ಳಬೇಕು. ಅಪರಾಧ ನಡೆದು ಹೋಗಿದ್ದು, ಖುದ್ದು ಬದಲಾವಣೆ ಅಗತ್ಯವಿದೆ. ಒಳ್ಳೆಯದೇ ಆಗಲಿದ್ದು, ಈಗಾಗಲೇ ರೌಡಿಶೀಟನಲ್ಲಿ ಇರುವವರು ಸಣ್ಣ ಪುಟ್ಟ ಅಪರಾಧಗಳನ್ನು ಮಾಡಿದರೂ ಸುಮ್ಮನೇ ಬಿಡುವ ಮಾತೇ ಇಲ್ಲ, ಮುಲಾಜು ಇಲ್ಲದೇ ಕ್ರಮ ಕೈಗೊಳ್ಳುತ್ತೇವೆ ಎಂದು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಎಚ್ಚರಿಕೆ ನೀಡಿದರು.
ನಗರದ ಡಿಎಆರ್​ ಪರೇಡ್​ ಮೈದಾನದಲ್ಲಿ ಶನಿವಾರ ಏರ್ಪಡಿಸಿದ್ದ ನಗರ ಪೊಲೀಸ್​ ಆಯುಕ್ತಾಲಯದ ವ್ಯಾಪ್ತಿಯ 10 ಪೊಲೀಸ್​ ಠಾಣೆಗಳ 327 ರೌಡಿಶೀಟರ್​ಗಳ ಪರೇಡ್​ನಲ್ಲಿ ಪ್ರತಿಯೊಬ್ಬರನ್ನು ವಿಚಾರಣೆ ನಡೆಸಿ, ಎಚ್ಚರಿಕೆ ನೀಡಿದ ಅವರು, 10 ವರ್ಷ ಯಾವುದೇ ಕೇಸ್​ ಇಲ್ಲದಿದ್ದರೆ ರೌಡಿಶೀಟರ್​ ತೆಗೆಯುತ್ತೇವೆ. ಆದರೆ ಸಾಮಾಜಿಕ ಸ್ವಾಸ್ಥ$್ಯಕ್ಕೆ ಧಕ್ಕೆ ತಂದು ಬಾಲ ಬಿಚ್ಚಿದರೆ ಒದ್ದು ಒಳಗೆ ಹಾಕುತ್ತೇವೆ ಎಂದು ಖಡಕ್​ ಎಚ್ಚರಿಕೆ ನೀಡಿದರು.
ಕೆಲವು ರೌಡಿಗಳು ಮುಚ್ಚಳಿಕೆ ಬರೆದುಕೊಂಡರೂ ಕೋರ್ಟ್​ಗೆ ಹೋಗುತ್ತಿದ್ದು, ಬದಲಾವಣೆ ಆಗುವ ಮನಸ್ಸಿಲ್ಲ ಎಂದರ್ಥ. ಕಾನೂನು ಹೋರಾಟ ಮಾಡಿ. ರೌಡಿಸಂನಲ್ಲಿ ಸಕ್ರೀಯವಾಗಿದ್ದರೆ ಮುಲಾಜಿಲ್ಲದೇ ಕ್ರಮ ಎದುರಿಸಬೇಕಾಗುತ್ತದೆ. ಪರೇಡ್​ಗೆ ಬಾರದಿದ್ದವರನ್ನು ವಾರದಲ್ಲಿ ಠಾಣೆಗೆ ಕರೆಸಿ, ವರದಿ ಪಡೆಯಲಾಗುವುದು ಎಂದರು.
ನಗರದಲ್ಲಿ ಒಟ್ಟು 1500 ರೌಡಿಶೀಟರ್​ಗಳಿದ್ದರು, ಅದರಲ್ಲಿ 315 ಜನರ ರೌಡಿಶೀಟರ್​? ತೆಗೆದು ಹಾಕಲಾಗಿದೆ. 1200 ರೌಡಿಶೀಟರ್​ಗಳಿದ್ದು, ಬದಲಾಗದಿದ್ದರೆ ಮುಂದುವರಿಸಲಾಗುವುದು ಎಂದರು.
ಡಿಸಿಪಿ ಶಾಲೂ, ಎಸಿಪಿಗಳಾದ ಜೇಮ್ಸ್​ ಮಿನೇಜಸ್​, ಶರಣಪ್ಪ ಸುಬೇದಾರ, ಬಸವೇಶ್ವರ ಹೀರಾ, ಶಿವನಗೌಡ ಪಾಟೀಲ್​, ಪಿಐಗಳಾದ ಗುರುಗೌಡ ಪಾಟೀಲ್​, ರಾವೇಂದ್ರ ಭಜಂತ್ರಿ, ಅರುಣಕುಮಾರ, ಚಂದ್ರಶೇಖರ ತಿಗಡಿ, ಹುಸೇನ್​ ಭಾಷಾ, ಸುಶೀಲಕುಮಾರ, ವಾಜೀದ್​ ಪಟೇಲ್​, ನಟರಾಜ ಲಾಡೆ ಪೊಲೀಸ್​ ಸಿಬ್ಬಂದಿ ಇದ್ದರು.
ಕೋಟ್​
ಬದಲಾದ ರೌಡಿಗಳಿಗೆ ಅವಕಾಶ ನೀಡಲಾಗುವುದು. ಪುನ@ ಭಾಗಿಯಾದರೆ ಕ್ರಮ ನಿಶ್ಚಿತ. ವಾಹನಗಳಲ್ಲಿ ಮಾರಕಾಸ್ತ್ರಗಳನ್ನು ಇಟ್ಟುಕೊಂಡು ಹೋಗುವುದು, ಸಾಮಾಜಿಕ ಜಾಲತಾಣದಲ್ಲಿ ಅವಾಜ್​ ಹಾಕುವ ನಾಟಕ ಮಾಡಿದ್ರೆ ಕ್ರಮ ಕೈಗೊಳ್ಳುತ್ತೇವೆ. ತೊಂದರೆ ಆದರೆ ಪೊಲೀಸರ ಹತ್ತಿರ ಹೋಗಿ, ವಾಪಸ್​ ದಾಳಿ ಮಾಡುವ ನಾಟಕವೆಲ್ಲ ಬೇಡ. ಅಪರಾಧ ಚಟುವಟಿಕೆಗಳಲ್ಲಿ ನಿರತರಾದರೆ ಪೊಲೀಸ್​ ಕ್ರಮ ಎದುರಿಸಬೇಕಾಗುತ್ತದೆ.
> ಡಾ.ಶರಣಪ್ಪ ಎಸ್​.ಡಿ.,
ನಗರ ಪೊಲೀಸ್​? ಆಯುಕ್ತ
ಬಾಕ್ಸ್​
3ಗಂಟೆಗೆ ದಿಢೀರ್​ ದಾಳಿ, ಪರಿಶೀಲನೆ
ನಗರದಲ್ಲಿ ರೌಡಿಗಳ ಮೇಲೆ ನಿರಂತರ ನಿಗಾ ಇಡುತ್ತಿದ್ದು, ಶನಿವಾರ ನಸುಕಿನ ಮೂರು ಗಂಟೆಗೆ ರೌಡಿಶೀಟರ್​ಗಳ ಮನೆ ಮೇಲೆ ದಿಢೀರ್​ ದಾಳಿ ನಡೆಸಿದ ನಗರ ಎಲ್ಲ 10 ಠಾಣೆಗಳ ಪೊಲೀಸರು, ಅಪರಾಧ ದಳದ ಸಿಬ್ಬಂದಿ ತಪಾಸಣೆ ನಡೆಸಿ, ರೌಡಿಶೀಟರ್​ ಪರೇಡ್​ಗೆ ಕರೆತಂದರು. ನಾಲ್ವರು ರೌಡಿಶೀಟರ್​ಗಳ ಮನೆಯಲ್ಲಿ ಚಾಕು, ಮಚ್ಚು, ತಲವಾರ, ಕೊಡಲಿ ಪತ್ತೆಯಾಗಿವೆ ಎಂದು ಡಾ.ಶರಣಪ್ಪ ಎಸ್​.ಡಿ.ತಿಳಿಸಿದರು.
  • 2 ವರ್ಷದಲ್ಲಿ 310 ರೌಡಿಶೀಟರ್​ಗಳ ಗಡಿಪಾರು
  • ನಾಲ್ವರು ರೌಡಿಗಳ ಮೇಲೆ ಗುಂಡಾ ಕಾಯ್ದೆ
  • ಬದಲಾಗದಿದ್ದವರ ಮೇಲೆ ಕೆ.ಕೋಕಾ ಕಾಯ್ದೆ ಅಡಿ ಕ್ರಮ
ಹಾಜರಾದ ರೌಡಿಶೀಟರ್​ಗಳು
ಠಾಣೆ ರೌಡಿಗಳು
ಸ್ಟೇಷನ್​ ಬಜಾರ್​ 25
ಅಶೋಕ ನಗರ 31
ಬ್ರಹ್ಮಪುರ 22
ಆರ್​ಜಿ.ನಗರ 24
ಚೌಕ್​ 46
ರೋಜಾ 38
ಎಂಬಿ ನಗರ 43
ವಿಶ್ವವಿದ್ಯಾಲಯ 34
ರಹತಾಬಾದ್​ 36
ಸಬ್​ ಅರ್ಬನ್​ 27
ಬಿಸಿಲಲ್ಲಿ ಬೆವರಿಳಿಸಿದ ಆಯುಕ್ತ
ಬೆಳಗ್ಗೆ 9.30ಗಂಟೆಗೆ ಆರಂಭವಾದ ರೌಡಿ ಪರೇಡ್​ ಸುಮಾರು 12ಗಂಟೆವರೆಗೆ ನಡೆಯಿತು. ಬಿರು ಬಿಸಿಲಿನಲ್ಲಿ ರೌಡಿಶೀಟರ್​ಗಳನ್ನು ನಿಲ್ಲಿಸಿ, ಒಬ್ಬೊಬ್ಬರನ್ನೇ ವಿಚಾರಿಸಿ, ಬಾಲ ಬಿಚ್ಚಿದ್ದರೆ ಕಠಿಣ ಕ್ರಮ ತೆಗೆದುಕೊಳ್ಳುವುದು ಎಚ್ಚರಿಕೆಯನ್ನು ನಗರ ಪೊಲೀಸ್​ ಆಯುಕ್ತ ಡಾ.ಶರಣಪ್ಪ ಎಸ್​.ಡಿ. ಸೂಚಿಸಿದರು.