- ಆಳಂದ ಲಾಡ್ಲೇ ಮಶಾಕ್ ಗಲಭೆಕೋರರ ವಿರುದ್ಧ ಕೇಸ್ ಹಿಂಪಡೆದಿದ್ದು ಖಂಡಿಸಿ ಪ್ರತಿಭಟನೆಯಲ್ಲಿ ಭಾಷಣ
- ದ್ವೇಷ ಭಾಷಣ ಮಾಡಿ, ಕೋಮುದ್ವೇಷ ಹರಡಿ ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ಆರೋಪ
ಕಲಬುರಗಿ: "ಖಮರುಲ್ ಇಸ್ಲಾಂ ಗುಲ್ಬರ್ಗ ನಗರವನ್ನು ಮಿನಿ ಪಾಕಿಸ್ತಾನ ಮಾಡಲು ಯತ್ನಿಸಿದ್ದರು ಎನ್ನುವ ಮೂಲಕ ಪ್ರಚೋದನಾಕಾರಿ, ದ್ವೇಷಪೂರಿತ ಭಾಷಣ ಮಾಡಿದ್ದಾರೆ ಎಂದು ಮಾಜಿ ಶಾಸಕ ದತ್ತಾತ್ರೇಯ ಪಾಟೀಲ್ ರೇವೂರ (ಅಪ್ಪುಗೌಡ) ವಿರುದ್ಧ ನಗರದ ಸ್ಟೇಷನ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ದರ್ಗಾ ಪ್ರದೇಶದ ಖಮರ್ ಕಾಲನಿಯ ದರ್ಗಾ ಏರಿಯಾದ ಅಜಗರ್ ಹುಸೇನ್ ದೂರು ನೀಡಿದ್ದಾರೆ. ಆಳಂದ ಗಲಭೆಕೋರರ ವಿರುದ್ಧದ ಪ್ರಕರಣ ವಾಪಸ್ ತೆಗೆದುಕೊಂಡಿದ್ದು, ಖಂಡಿಸಿ ಇತ್ತೀಚೆಗೆ ನಗರದಲ್ಲಿ ಭಾರತೀಯ ಜನತಾ ಪಕ್ಷ ಹಮ್ಮಿಕೊಂಡಿದ್ದ ಪ್ರತಿಭನೆಯಲ್ಲಿ ಭಾಷಣ ಮಾಡುವ ವೇಳೆ "ಖಮರುಲ್ ಇಸ್ಲಾಂ ಗುಲ್ಬರ್ಗ ನಗರವನ್ನು ಮಿನಿ ಪಾಕಿಸ್ಥಾನ ಮಾಡಲು ಯತ್ನಿಸಿದ್ದರು. ಅದಕ್ಕೆ ಅವರು ಚುನಾವಣೆಯಲ್ಲಿ ಸೋತ್ತಿದ್ದಾರೆ ಎಂದು ದ್ವೇಷಪೂರಿ, ಪ್ರಚೋದನಕಾರರಿ ಭಾಷಣ ಮಾಡಿ, ಕೋಮು ಸೌಹಾರ್ದತೆಗೆ ಧಕ್ಕೆ ತಂದಿದ್ದಾರೆ ಎಂದು ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.