ಚಿಂಚೋಳಿ ಪಟ್ಟಣದಲ್ಲಿ ಸೋಮವಾರದಂದು ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ತಾಲೂಕಾ ಲಿಂಗವಂತ ಧರ್ಮತತ್ವ ಪ್ರಚಾರ ಸಂಸ್ಥೆ, ಹಾಗೂ ಶರಣೆ ನೀಲಾಂಬಿಕಾ ಬಸವತತ್ವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವಗುರು ಬಸವಣ್ಣನವರ ಲಿಂಗೈಕ್ಯ ದಿನವನ್ನು 'ಬಸವ ಪಂಚಮಿ'ಯನ್ನಾಗಿ ಆಚರಿಸಿ ರೋಗಿಗಳಿಗೆ ಹಾಲು, ಹಣ್ಣು ವಿತರಿಸಿದರು. ಈ ವೇಳೆ ಮಲ್ಲಿಕಾರ್ಜುನ ಪಾಲಮೂರ, ಸೂರ್ಯಕಾಂತ ಹುಲಿ, ಸುರೇಶ ದೇಶಪಾಂಡೆ, ಮಾರುತಿ ಗಂಜಗೇರಿ, ಗೋಪಾಲ ಎಂ.ಪಿ. ಗಾರಂಪಳ್ಳಿ, ಕಾಶಿನಾಥ ಹುಣಜೆ, ಕರಬಸಪ್ಪ ಕನಕಪೂರ, ಶಂಭುಲಿಂಗ ಶಿವಪುರಿ, ಶಿವಪ್ರಸಾದ್, ಮಿರಾಜಪಾಷ್, ಡಾ. ವೀರೇಂದ್ರ ಪಾಟೀಲ್, ಲೋಕೇಶ ಶೆಳ್ಳಗಿ, ಸಂತೋಷ ಕಶೇಟ್ಟಿ ಇದ್ದರು. 
ಕಲಬುರಗಿ

ಚಿಂಚೋಳಿ ಸಾರ್ವಜನಿಕ ಆಸ್ಪತ್ರೆಯಲ್ಲಿ ಬಸವ ಪಂಚಮಿ

ವಿಜಯವಾಣಿ ಸುದ್ದಿಜಾಲ ಚಿಂಚೋಳಿ
ಸಮಾಜವು ನಾಗರ ಪಂಚಮಿಯಂತಹ ಮೂಢನಂಬಿಕೆ ಮತ್ತು ಅಂಧಶ್ರದ್ಧೆಯ ಆಚರಣೆಗಳಿಂದ ಹೊರಬರಬೇಕಾದ ಅಗತ್ಯವಿದೆ ಎಂದು ಶರಣೆ ನೀಲಾಂಬಿಕಾ ಬಸವತತ್ವ ಸೇವಾ ಟ್ರಸ್ಟ್ ಅಧ್ಯಕ್ಷೆ ಶಕುಂತಲಾ ಹುಲಿ ಹೇಳಿದರು.

ಪಟ್ಟಣದಲ್ಲಿ ಸೋಮವಾರ ತಾಲೂಕು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭೆ, ತಾಲೂಕಾ ಲಿಂಗವಂತ ಧರ್ಮತತ್ವ ಪ್ರಚಾರ ಸಂಸ್ಥೆ, ಶರಣೆ ನೀಲಾಂಬಿಕಾ ಬಸವತತ್ವ ಸೇವಾ ಟ್ರಸ್ಟ್ ಆಶ್ರಯದಲ್ಲಿ ಸರಕಾರಿ ಸಾರ್ವಜನಿಕ ಆಸ್ಪತ್ರೆಯಲ್ಲಿ ವಿಶ್ವಗುರು ಬಸವಣ್ಣನವರ ಲಿಂಗೈಕ್ಯ ದಿನವನ್ನು ಬಸವ ಪಂಚಮಿಯನ್ನಾಗಿ ಆಚರಣೆಯಲ್ಲಿ ಮಾತನಾಡಿದ ಅವರು, ಪ್ರಾಣಿ ಹಿಂಸೆ ಮತ್ತು ಹಾಲಿನ ಪೋಲು ತಡೆದು, ಬಸವಣ್ಣನವರ ಕಾಯಕ ಮತ್ತು ದಾಸೋಹ ಸಂಸ್ಕೃತಿಯನ್ನು ಜೀವನದಲ್ಲಿ ಅಳವಡಿಸಿಕೊಳ್ಳಬೇಕು ಎಂದು ಕರೆ ನೀಡಿದರು.

ಅದೇ ರೀತಿ ಪ್ರೊ.ಮಲ್ಲಿಕಾರ್ಜುನ ಪಾಲಮೂರ ಮಾತನಾಡಿ, ಬಸವಣ್ಣನವರ ತತ್ತ್ವ ಸಿದ್ಧಾಂತಗಳು ಹಾಗೂ ವಚನ ಸಾಹಿತ್ಯ ಸಮಾಜಕ್ಕೆ ಸದಾ ದಾರಿದೀಪ. ನಾಗರ ಪಂಚಮಿ ದಿನದಂದು ಕಲ್ಲು ನಾಗರಕ್ಕೆ ಹಾಲು ಎರೆಯುವ ಬದಲು, ಹಸಿವಿನಿಂದ ಬಳಲುತ್ತಿರುವ ಜೀವಿಗೆ ಉಣಿಸುವುದೇ ನಿಜವಾದ ಬಸವ ಧರ್ಮ ಎಂದು ತಿಳಿಸಿದರು.
ಸರಕಾರಿ ಸಾರ್ವಜನಿಕ ಆಸ್ಪತ್ರೆಯ ರೋಗಿಗಳಿಗೆ ಹಾಲು-ಹಣ್ಣು ವಿತರಿಸಿ ಶುಭ ಹಾರೈಸಿದರು.

ಮಾರುತಿ ಗಂಜಗೇರಿ, ಗೋಪಾಲ ಗಾರಂಪಳ್ಳಿ, ಕಾಶಿನಾಥ ಹುಣಜೆ, ಕರಬಸಪ್ಪ ಕನಕಪೂರ, ಶಂಭುಲಿಂಗ ಶಿವಪುರಿ, ಶಿವಪ್ರಸಾದ್, ಮಿರಾಜಪಾಷ್, ಡಾ.ವೀರೇಂದ್ರ ಪಾಟೀಲ್, ಸೂರ್ಯಕಾಂತ ಹುಲಿ, ಲೋಕೇಶ ಶೆಳ್ಳಗಿ, ಸಂತೋಷ ಕಶೇಟ್ಟಿ, ಸುರೇಶ ದೇಶಪಾಂಡೆ, ರಾಜಶೇಖರ ಹಿತ್ತಲ್ ಇದ್ದರು.