ನೀರಿನ ಸಮಸ್ಯೆ ಬಗೆಹರಿಸಬೇಕು, ಭೋಗಾವತಿ ನದಿಗೆ ನೀರು ಹರಿಸಬೇಕು ಎಂಬುದು ಸೇರಿ ವಿವಿಧ ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಚಿಮ್ಮನಚೋಡದಲ್ಲಿ ಹಮ್ಮಿಕೊಂಡಿದ್ದ ಬಂದ್​ ಹೋರಾಟದಲ್ಲಿ ತಹಸೀಲ್ದಾರ್​ಗೆ ಮನವಿಪತ್ರ ಸಲ್ಲಿಸಲಾಯಿತು. ರಾಮರೆಡ್ಡಿ ಪಾಟೀಲ್​, ವೀರಭದ್ರಪ್ಪ ಮಲಕೋಡ, ಗೋಪಾಲ ಗಾರಂಪಳ್ಳಿ, ರೇವಣಸಿದ್ದಪ್ಪ ಪೂಜಾರಿ, ಜಗನ್ನಾಥ ರೆಡ್ಡಿ ರಂಜೋಳ ಇತರರಿದ್ದರು. 
ಕಲಬುರಗಿ

ನೀರಿಗಾಗಿ ಚಿಮ್ಮನಚೋಡ ಬಂದ್​

ಚಿಂಚೋಳಿ: ಚಿಮ್ಮನಚೋಡ ಗ್ರಾಮದಲ್ಲಿ ಕುಡಿವ ನೀರಿನ ಸಮಸ್ಯೆ ಬಗೆಹರಿಸಬೇಕು, ಮುಲ್ಲಾಮಾರಿ ಜಲಾಶಯದಿಂದ ಭೋಗಾವತಿ ನದಿ ನೀರು ಹರಿಸಬೇಕು, ಸಮರ್ಪಕ ವಿದ್ಯುತ್​ ಪೂರೈಕೆ ಮಾಡಬೇಕು, ಗ್ರಾಮದಲ್ಲಿ ಜಲಜೀವನ ಮಿಷನ್​ ಯೋಜನೆ ಕಳಪೆ ಕಾಮಗಾರಿ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಬೇಡಿಕೆಯೊಂದಿಗೆ ಮುಲ್ಲಾಮಾರಿ (ಭೋಗಾವತಿ) ನದಿ ನೀರು ಹೋರಾಟ ಸಮಿತಿಯಿಂದ ಹಮ್ಮಿಕೊಂಡಿದ್ದ ಚಿಮ್ಮನಚೋಡ ಬಂದ್​ ಗುರುವಾರ ಯಶಸ್ವಿಯಾಯಿತು.

ಬೆಳಗ್ಗೆ 7ಗಂಟೆಗೆ ಶುರುವಾದ ಹೋರಾಟ ಸಂಜೆ 4ರವರೆಗೆ ನಡೆಯಿತು. ಗ್ರಾಮದ ಅಂಗಡಿ&ಮುಂಗಟ್ಟುಗಳನ್ನು ಬಂದ್​ ಮಾಡಲಾಗಿತ್ತು. ಬಳಿಕ ನಿಜಶರಣ ಅಂಬಿಗರ ಚೌಡಯ್ಯ ವೃತ್ತದ ಬಳಿ ಜಮಾಯಿಸಿದ ರೈತರು ಹಾಗೂ ಸಾರ್ವಜನಿಕರು ಕುರಿ, ಮೇಕೆ ಮತ್ತು ಜಾನುವಾರುಗಳೊಂದಿಗೆ ಭಾಲ್ಕಿ-ಚಿಂಚೋಳಿ ರಾಜ್ಯ ಹೆದ್ದಾರಿಯಲ್ಲಿ ತಡೆದು ರಸ್ತೆ ತಡೆ ಚಳವಳಿ ನಡೆಸಿದರು.

ಮುಖಂಡ ರಾಮರೆಡ್ಡಿ ಪಾಟೀಲ್​, ಕುಡಿವ ನೀರು, ವಿದ್ಯುತ್​, ಸಾಮಾಜಿಕ ಪಿಂಚಣಿ, ಜಲಜೀವನ ಮಿಷನ್​ ಯೋಜನೆ ಕಳಪೆ ಕಾಮಗಾರಿ ಹಾಗೂ ರೈತರ ಪಂಪ್​ಸೆಟ್​ಗಳಿಗೆ ವಿದ್ಯುತ್​ ಕಡಿತದ ಸಮಸ್ಯೆಗಳನ್ನು ಗಮನಿಸಿದರೆ, ಮೂಲಸೌಕರ್ಯ ಕಲ್ಪಿಸುವಲ್ಲಿ ರಾಜ್ಯ ಸರ್ಕಾರ ವಿಫಲವಾಗಿದೆ. ಮುಲ್ಲಾಮಾರಿ ಯೋಜನೆಯಡಿ ನಿರ್ಮಿಸಲಾಗಿರುವ 80 ಕಿಮೀ. ಉದ್ದದ ಕಾಲುವೆಯಲ್ಲಿ ಕೇವಲ 2 ಕಿಮೀ. ದೂರಕ್ಕೂ ನೀರು ಹರಿಸಲು ಸಾಧ್ಯವಾಗದಿರುವುದು ಕಾಂಗ್ರೆಸ್​ ಮತ್ತು ಬಿಜೆಪಿ ಶಾಸಕರ ರ್ನಿಲ್ಯಕ್ಕೆ ಸಾಯಾಗಿದೆ ಎಂದು ಕಿಡಿಕಾರಿದರು.

ಮುಲ್ಲಾಮಾರಿ ಯೋಜನೆಗಾಗಿ ಕೋಟ್ಯಂತರ ರೂಪಾಯಿ ಅನುದಾನ ಬಳಕೆಯಾಗಿದ್ದರೂ ನಿರೀತ ಪ್ರಯೋಜನ ದೊರೆತಿಲ್ಲ. ಹೀಗಾಗಿ ಯೋಜನೆ ಅನುಷ್ಠಾನ ಹಾಗೂ ಅನುದಾನದ ಬಳಕೆ ಕುರಿತು ಸರ್ಕಾರ ತಣ ಸಮಗ್ರ ತನಿಖೆ ನಡೆಸಬೇಕು ಎಂದು ಒತ್ತಾಯಿಸಿದರು.

ವೀರಭದ್ರಪ್ಪ ಮಲಕೋಡ, ಗೋಪಾಲ ಗಾರಂಪಳ್ಳಿ, ರೇವಣಸಿದ್ದಪ್ಪ ಪೂಜಾರಿ, ಜಗನ್ನಾಥ ರೆಡ್ಡಿ ರಂಜೋಳ, ಬಂಡಾರೆಡ್ಡಿ ಚಿಮ್ಮನಚೋಡ, ಮಲ್ಲು ಕೊಡಂಬುಲ್​ ಮಾತನಾಡಿದರು.

ಪ್ರಮುಖರಾದ ಡಾ.ರಗಟೆ, ಶಿವಕುಮಾರ ಹೀರೆಮಠ, ಸಂಗಾರೆಡ್ಡಿ, ಸಿರಾಜ್​, ಜಾವೀದ್​ ನಾಗರಾಳ, ರತನಕುಮಾರ ತೇಲ್ಕಪಳ್ಳಿ, ಜಗದೀಶ ತೇಲ್ಕಪಳ್ಳಿ, ಗೌತಮ ಮಿತ್ರ, ಜಗನ್ನಾಥ ಹೊಸಮನಿ, ಶರಣು ಭಕ್ತಂಪಳ್ಳಿ, ಸುಭಾಷ ಕೊಂಡಾ, ಚಂದ್ರಶೇಖರ ಗುತ್ತೇದಾರ್​, ಸಂಗಯ್ಯ ಸ್ವಾಮಿ, ಚಂದ್ರಯ್ಯ ಗುತ್ತೇದಾರ್​ ಇತರರಿದ್ದರು.

ಅಧಿಕಾರಿಗಳ ಭರವಸೆ, ಹೋರಾಟ ವಾಪಸ್​

ರಾಜ್ಯ ಹೆದ್ದಾರಿಯಲ್ಲಿ ಸುದೀರ್ ಸಮಯ ಸಂಚಾರ ಸ್ಥಗಿತಗೊಂಡಿದ್ದರಿಂದ ವಾಹನ ಸವಾರರು ಹಾಗೂ ಸಾರ್ವಜನಿಕರು ಪರದಾಡುವಂತಾಯಿತು. ರೈತರು ಜಾನುವಾರುಗಳೊಂದಿಗೆ ರಸ್ತೆಯಲ್ಲೆ ಕುಳಿತು ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಸ್ಥಳಕ್ಕೆ ಭೇಟಿ ನೀಡಿದ ತಹಸೀಲ್ದಾರ್​ ಸುಬ್ಬಣ್ಣ ಜಮಖಂಡಿ, ತಾಲೂಕು ಪಂಚಾಯಿತಿ ಇಒ ಸಂತೋಷಕುಮಾರ ಚವ್ಹಾಣ್​ ಬೇಡಿಕೆಗಳಿಗೆ ಸ್ಪಂದಿಸುವುದಾಗಿ ಭರವಸೆ ನೀಡಿದ ಬಳಿಕ ಪ್ರತಿಭಟನೆ ಹಿಂಪಡೆಯಲಾಯಿತು.

ಈಗಾಗಲೇ ಜಿಲ್ಲಾಧಿಕಾರಿ ಹಾಗೂ ತಾಲೂಕು ಮಟ್ಟದ ಅಧಿಕಾರಿಗಳೊಂದಿಗೆ ಸುದೀರ್ ಸಭೆ ನಡೆಸಲಾಗಿದೆ.ಶೀಘ್ರದಲ್ಲೆ ಕಾರ್ಯಪಡೆ ಸಮಿತಿ ಸಭೆ ನಡೆಸಿ ವರದಿ ಸಲ್ಲಿಸಲಾಗುವುದು. ಪರಿಶೀಲನೆ ನಡೆಸಿ ನೀರು ಹರಿಸುವ ವ್ಯವಸ್ಥೆ ಮಾಡಲಾಗುವುದು.
> ಸುಬ್ಬಣ್ಣ ಜಮಖಂಡಿ, ತಹಸೀಲ್ದಾರ್​
ಚಿಮ್ಮನಚೋಡ ಗ್ರಾಮದಲ್ಲಿನ ಕುಡಿವ ನೀರಿನ ಸಮಸ್ಯೆ ಶೀಘ್ರ ಬಗೆಹರಿಸಲಾಗುವುದು. ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಕಚೇರಿಗೆ ಬರುವುದಿಲ್ಲ, ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ ಎಂಬ ದೂರುಗಳಿವೆ. ಈ ಬಗ್ಗೆ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಲಾಗುವುದು.
> ಸಂತೋಷಕುಮಾರ ಚವ್ಹಾಣ್​, ಇಒ, ತಾಲೂಕು ಪಂಚಾಯಿತಿ