ಅಫಜಲಪುರ: ಕಲ್ಯಾಣ ಕರ್ನಾಟಕ ರಸ್ತೆ ಸಾರಿಗೆ ನಿಗಮ (ಕೆಕೆಆರ್ಟಿಸಿ) ಅಧ್ಯಕ್ಷ ಅರುಣಕುಮಾರ ಪಾಟೀಲ್ ಅವರ 53ನೇ ಜನ್ಮದಿನವನ್ನು ಅಭಿಮಾನಿಗಳು ಹಾಗೂ ಕಾರ್ಯರ್ತರು ಭಾನುವಾರ ವಿವಿಧ ಜನಪರ ಕಾರ್ಯಕ್ರಮಗಳ ಮೂಲಕ ಅರ್ಥಪೂರ್ಣವಾಗಿ ಆಚರಿಸಿದರು.
ಬರದಿಂದ ರೈತರು, ಜನ- ಜಾನುವಾರು ಸಂಕಷ್ಟದಲ್ಲಿವೆ. ಜನ್ಮದಿನವೆಂದರೆ ವೈಯಕ್ತಿಕ ಸಂಭ್ರಮಕ್ಕೆ ಸೀಮಿತವಾಗದೆ, ಸಮಾಜದೊಂದಿಗೆ ಸಂತಸ ಹಂಚಿಕೊಳ್ಳುವ ದಿನವಾಗಬೇಕು. ಸಂಭ್ರಮದ ಬದಲಾಗಿ ಸೇವೆಯಲ್ಲಿ ಸಾರ್ಥಕತೆ ಕಾಣಬೇಕು ಎಂದು ಅರುಣಕುಮಾರ ಪಾಟೀಲ್ ಕರೆ ನೀಡಿದ್ದರು. ಹೀಗಾಗಿ ಅಭಿಮಾನಿಗಳು ಅನ್ನ ಸಂತರ್ಪಣೆ, ಅಂಧ ಮಕ್ಕಳಿಗೆ ಉಪಯುಕ್ತ ಸಾಮಗ್ರಿ ಹಾಗೂ ರೋಗಿಗಳಿಗೆ ಹಣ್ಣು-ಹಂಪಲ ವಿತರಣೆ, ಕಲಬುರಗಿಯ ಸರ್ಕಾರಿ ಶ್ರವಣ ನ್ಯೂನ್ಯತೆಯುಳ್ಳ ಮಕ್ಕಳಿಗೆ ಅನ್ನದಾನ ಸೇರಿ ವಿವಿಧ ಜನರ ಕಾರ್ಯಕ್ರಮ ಆಯೋಜಿಸಿ ಮಾದರಿಯಾದರು.
ಅನ್ನ ಸಂತರ್ಪಣೆ ಕಾರ್ಯಕ್ರಮದಲ್ಲಿ ಕಲಬುರಗಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿ ಅಧ್ಯಕ್ಷ ಮಂಜುನಾಥ ಅಂಜುಟಗಿ ಮಾತನಾಡಿ, ಮತಕ್ಷೆತ್ರದಲ್ಲಿ ಎಂ.ವೈ.ಪಾಟೀಲ್ ಅವರ ಕುಟುಂಬವು ಸುಮಾರು 5 ದಶಕಗಳಿಂದ ಸಾಮಾಜಿಕ, ಶಿಕ್ಷಣ, ಸಹಕಾರ, ಆರೋಗ್ಯ ಕ್ಷೇತ್ರಗಳಲ್ಲಿ ವಿಶಿಷ್ಟ ಕೊಡುಗೆ ನೀಡಿದೆ. ತಂದೆಯಂತೆ ಕೆಕೆಆರ್ಟಿಸಿ ಅಧ್ಯಕ್ಷ ಅರುಣಕುಮಾರ ಪಾಟೀಲ್ ಅವರು ನಿರಂತರ ಸಮಾಜಮುಖಿ ಕಾರ್ಯ ಮಾಡಿಕೊಂಡು ಹೋಗುತ್ತಿದ್ದಾರೆ. ಹಿಂದುಳಿದ, ದಲಿತ, ಅಲ್ಪಸಂಖ್ಯಾತರ ಸಮಸ್ಯೆಗೆ ಸ್ಪಂದಿಸಿ ಕಟ್ಟ ಕಡೆಯ ವ್ಯಕ್ತಿಗೂ ಸಮಾಜಿಕ ನ್ಯಾಯ ನೀಡಲು ಶ್ರಮಿಸುತ್ತಿದ್ದಾರೆ ಎಂದು ಬಣ್ಣಿಸಿದರು.
ಅಫಜಲಪುರ- ದೇವಲಗಾಣಗಾಪುರ ನಗರ ಯೋಜನಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಚಂದ್ರಶೇಖರ ಕರಜಗಿ, ಪ್ರಮುಖರಾದ ಚನ್ನಬಸಯ್ಯ ಹಿರೇಮಠ, ಶಿವಪುತ್ರಪ್ಪ ಸಂಗೊಳಗಿ, ಶಿವಾನಂದ ಗಾಡಿಸಾಹುಕಾರ, ಶರಣು ಕುಂಬಾರ, ಅಣವೀರಯ್ಯ ಮಠಪತಿ, ವಿಶ್ವನಾಥ ಮಲಘಾಣ, ಶಿವು ಪದಕಿ, ರವಿ ನಂದಶೆಟ್ಟಿ, ರಾಜಶೇಖರ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ಎಸ್.ಎಸ್.ಪಾಟೀಲ್, ಮಹಾನಿಂಗ ಅಂಗಡಿ, ಸಂಗನಗೌಡ ಪಾಟೀಲ್, ಚಂದ್ರಕಾಂತ ಇಬ್ರಾಹಿಂಪುರ, ಮಲ್ಲಿಕಾರ್ಜುನ ವಾಳಿ, ಸಿದ್ದು ಸಾಹುಕಾರ ಜವಳಿ, ಪ್ರವಿಣ ಕಲ್ಲೂರ, ಗೌತಮ ಸಕ್ಕರಗಿ, ಶಕೀಲ್ ವಡಾಳೆ, ಬಿಸ್ಮಿಲ್ಲಾ ಶೇಖ್, ಅನುಸುಯಾ ಸುಲೇಕರ, ಸೈಫನಸಾಬ್ ಚಿಕ್ಕಳಗಿ, ತಿಪ್ಪಣ್ಣ ಗಾಡಿವಡ್ಡರ, ಸಂತೋಷ ಮನ್ಮಿ, ಮಲ್ಲಯ್ಯ ಹೊಸಮಠ, ಸಚಿನ್ ಲಿಂಗಶೆಟ್ಟಿ, ಸುಧಾಕರ ಎಸ್.ಕೆ, ಭಾಗಣ್ಣ ಕೊಳ್ಳಿ, ಶಿವು ಸಿಂಗೆ, ಗುರುಶಾಂತ ಡಾಂಗೆ, ಸಿದ್ದು ಚೌಡಾಪುರ, ಗುರು ಪ್ರಧಾನಿ ಇತರರಿದ್ದರು.
ಅರುಣಕುಮಾರ ಪಾಟೀಲ್ ಅವರ ಜನ್ಮದಿನದ ನಿಮಿತ್ತ ದೇವಲಗಾಣಗಾಪುರದ ನಿರ್ಗುಣ ಮಠದಲ್ಲಿ ಶ್ರೀ ದತ್ತಾತ್ರೇಯ ಮಹಾರಾಜರಿಗೆ ಭಾನುವಾರ ಅಭಿಮಾನಿಗಳು ವಿಶೇಷ ಪೂಜೆ, ಅಭಿಷೇಕ ನೆರವೇರಿಸಿ ಆರೋಗ್ಯ, ದೀರ್ ಆಯುಷ್ಯಕ್ಕಾಗಿ ಪ್ರಾರ್ಥಿಸಿದರು. ಜತೆಗೆ ನಾಡಿನ ರೈತರ ಬದುಕು ಹಸನಾಗಲಿ, ಬರದ ಛಾಯೆ ದೂರಾಗಿ ಎಲ್ಲೆಡೆ ಸಮೃದ್ಧಿ ನೆಲೆಸಲಿ ಸಂಕಲ್ಪ ಮಾಡಿ ಮಹಾರಾಜರಲ್ಲಿ ಬೇಡಿಕೊಂಡರು.
ಕೆಕೆಆರ್ಟಿಸಿ ಅಧ್ಯಕ್ಷರಾದ ಅರುಣಕುಮಾರ ಪಾಟೀಲ್ ಅವರು ಕ್ರಿಯಾಶೀಲ ನಾಯಕರಾಗಿದ್ದಾರೆ. ಸಾರಿಗೆ ವ್ಯವಸ್ಥೆಯನ್ನು ಜನಸ್ನೇಹಿ ಆಗಿಸಿದ್ದು, ಜತೆಗೆ ನೌಕರರ ಹಿತ ಕಾಪಾಡುವಲ್ಲಿ ಶ್ರಮಿಸುತ್ತಿದ್ದಾರೆ. ಪಾಟೀಲ್ ಅವರು ರಾಜಕೀಯದಲ್ಲಿ ಇನ್ನಷ್ಟು ಉನ್ನತ ಸ್ಥಾನಕ್ಕೇರಲಿ ಹಾಗೂ ಸಮಾಜದಲ್ಲಿ ಅಬಲರಿಗೆ ಬಲ ತುಂಬಲಿ.> ಚಂದ್ರಶೇಖರ ಕರಜಗಿ, ಅಧ್ಯಕ್ಷ ಅಫಜಲಪುರ- ದೇವಲಗಾಣಗಾಪುರ ನಗರ ಯೋಜನಾಭಿವೃದ್ಧಿ ಪ್ರಾಧಿಕಾರ