chalavadi narayanaswamy 
ಕಲಬುರಗಿ

ಬಿಜೆಪಿ ಸ್ಟಾರ್​ ಪ್ರಚಾರಕ ಪ್ರದೀಪ ಈಶ್ವರ: ಛಲವಾದಿ ನಾರಾಯಣಸ್ವಾಮಿ ಲೇವಡಿ

ಕಲಬುರಗಿ: ಮಂಗ ತಾನು ಕೆಡುವುದಲ್ಲದೇ ವನವೆಲ್ಲ ಕೆಡಿಸಿದಂತೆ ಪ್ರದಿಪ ಈಶ್ವರ ವರ್ತಿಸುತ್ತಿದ್ದಾರೆ. ಅವರು ಶಾಸಕರಾಗಿದ್ದು, ಗಾದೆ ಮಾತಿಗೆ ಹೋಲಿಸುವುದಿಲ್ಲ. ಆದರೆ ಚಿಕ್ಕಬಳ್ಳಾಪುರದ ಶಾಸಕರಾಗಿ ಆ ಕ್ಷೇತ್ರದ ಹೆಸರು ಕೆಡಿಸುತ್ತಿದ್ದಾರೆ. ಪಕ್ಷದ ಪ್ರತಿನಿಧಿಯಾಗಿ ಗೌರವಯುತವಾಗಿ ವರ್ತಿಸುತ್ತಿದ್ದಾರೆ. ಕಾಂಗ್ರೆಸ್​ನಲ್ಲಿ ಜೋಕರ್​ಗಳಿಗೆ ಆದ್ಯತೆ ಸಿಗುತ್ತಿದೆ. ಒಳ್ಳೆಯವರು ಕಾಂಗ್ರೆಸ್​ನಲ್ಲಿ ಸಿಗುವುದೇ ಇಲ್ಲ. ರಾಹುಲ್​ ಗಾಂಧಿ ಪ್ರಚಾರ ಮಾಡಿದಲೆಲ್ಲ, ಬಿಜೆಪಿ ಗೆಲ್ಲುತ್ತಿದೆ. ಅದೇ ರೀತಿ ಪ್ರದಿಪ ಈಶ್ವರ ಪ್ರಚಾರ ಮಾಡಿದಷ್ಟು ಬಿಜೆಪಿಗೆ ಅನುಕೂಲವಾಗಲಿದೆ. ಬಿಜೆಪಿ ಮುಖಂಡರು ಕೆಸರಿನ ಮೇಲೆ ಕಲ್ಲು ಹಾಕಬಾರದು ಎಂದು ಛಲವಾದಿ ನಾರಾಯಣಸ್ವಾಮಿ ಹೇಳಿದರು.
ನಗರದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಶಿಕ್ಷಣದ ಜತೆ ರಾಜ್ಯ ಸರ್ಕಾರ ಚೆಲ್ಲಾಟವಾಡಬಾರದು. ಶಿಕ್ಷಣ, ಆರೋಗ್ಯಕ್ಕೆ ಪ್ರೋತ್ಸಾಹ ನೀಡಬೇಕು. ಅಂಬೇಡ್ಕರ್​ ಶಾಲೆ, ಗ್ರಂಥಾಲಯ ಮುಖ್ಯ ಎಂದಿದ್ದರು. ಆದರೆ ರಾಜ್ಯದಲ್ಲಿ ಶಿಕ್ಷಣಕ್ಕೆ ಅತೀ ಕಡಿಮೆ ಪ್ರೋತ್ಸಾಹ ನೀಡಲಾಗುತ್ತಿದೆ. ಹೀದಿ ಹೇರಿಕೆ ಬಗ್ಗೆ ದಿಢೀರ್​ ಸಿಟ್ಟು ಬಂದಿತ್ತು ಏಕೆ ತಿಳಿಯುತ್ತಿಲ್ಲ. ನೆಹರು, ಇಂದಿರಾಗಾಂಧಿ, ರಾಜೀವ್​ ಗಾಂಧಿ ಇದ್ದಾಗ ಹಿಂದಿ ಹೇರಿಕೆ ಇರಲಿಲ್ಲವೇ? ರಾಹುಲ್​ ಗಾಂಧಿ ಮೈಯಲ್ಲಿ ಾರಿನ್​ ರಕ್ತ ಹರಿಯುತ್ತಿದೆ ಎಂದು ಆರೋಪಿಸಿದರು.
ಹಿಂದಿ ಭಾಷೆ ದಿಢೀರ್​ ತೀರ್ಮಾನ ಸರಿಯಲ್ಲ. ಅಕಾಡೆಮಿ ಆರಂಭಕ್ಕೆ ಮುನ್ನ ತೀರ್ಮಾನ ಮಾಡಬೇಕಿತ್ತು. ಇಲ್ಲವೇ ಮುಗಿದ ನಂತರ ನಿರ್ಧರಿಸಬೇಕಿತ್ತು. ಇಷ್ಟು ದಿನ ಪಾಠ ಕೊಡಿಸಿದ್ದು, ಏಕೆ? ಮಕ್ಕಳ ಭವಿಷ್ಯದ ಮೇಲೆ ಇಂತ ನಿರ್ಧಾರಗಳು ಕರಾಳ ಪ್ರಭಾವ ಬೀರುತ್ತವೆ. ಹಿಂದಿ ಬೇಡ ಎಂದು ಮಕ್ಕಳು, ಪೋಷಕರು ಬರೆದುಕೊಟ್ಟಿದ್ದಾರಾ ಎಂದು ಪ್ರಶ್ನಿಸಿದರು.