ಮತ ಉಳಿಸಿ, ದೇಶ ಉಳಿಸಿ ಘೋಷದೊಂದಿಗೆ ಕಾಂಗ್ರೆಸ್​ನಿಂದ ಸೇಡಂ ಬಸ್​ ನಿಲ್ದಾಣದ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಯಿತು. ಬಸವರಾಜ ಪಾಟೀಲ್​ ಊಡಗಿ, ಶಿವಶರಣರೆಡ್ಡಿ ಪಾಟೀಲ್​, ರವೀಂದ್ರ ನಂದಿಗಾಮ, ಮಹಾಂತಪ್ಪ ಸಂಗಾವಿ, ಜಗದೇವಪ್ಪ ಪಾಟೀಲ್​ ಕೊಂಕನಹಳ್ಳಿ, ಅನೀಲಕುಮಾರ ಜಮಾದರ ಇದ್ದರು.  
ಕಲಬುರಗಿ

ಬಡ, ದಲಿತರ ಮತ ಕಟ್​ ಮಾಡಿದ ಬಿಜೆಪಿ

ಸೇಡಂ: ದೇಶದಲ್ಲಿ ಆಡಳಿತದ ಚುಕ್ಕಾಣಿ ಹಿಡಿದ ಬಿಜೆಪಿ ಅಡ್ಡ ದಾರಿಯಿಂದಲೇ ಚುನಾವಣೆಯಲ್ಲಿ ಗೆಲುವು ಸಾದಿಸಿದ್ದು, ಇದೀಗ ಎಸ್​ಐಆರ್​ ಅಸ್ತ್ರ ಪ್ರಯೋಗಿಸುವ ಮೂಲಕ ಸಂವಿಧಾನದ ಆಶಯದ ವಿರುದ್ಧ ನಡೆದುಕೊಳ್ಳುತ್ತಿದೆ ಎಂದು ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಬಸವರಾಜ ಪಾಟೀಲ್​ ಊಡಗಿ ಆರೋಪಿಸಿದರು.

ಮತ ಉಳಿಸಿ, ದೇಶ ಉಳಿಸಿ ಅಭಿಯಾನದಡಿ ಮುಧೋಳ, ಸೇಡಂ ಬ್ಲಾಕ್​ ಕಾಂಗ್ರೆಸ್​ನಿಂದ ಎಸ್​ಐಆರ್​ ಪ್ರಕ್ರಿಯೆ ವಿರೋಧಿಸಿ ರೈಲ್ವೆ ನಿಲ್ದಾಣದಿಂದ ಬಸ್​ ನಿಲ್ದಾಣದವರೆಗೆ ಬುಧವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ರ್ಯಾಲಿಯಲ್ಲಿ ಮಾತನಾಡಿ, ಚುನಾವಣೆ ಆಯೋಗ ನ್ಯಾಯ ಮತ್ತು ಮುಕ್ತವಾಗಿ ಕೆಲಸ ಮಾಡಬೇಕು. ಆದರೆ ಬಿಜೆಪಿ ಜ್ಞಾನೇಶ್​ಕುಮಾರ್​ ಅವರನ್ನು ಚುನಾವಣೆ ಆಯೋಗದ ಮುಖ್ಯ ಆಯುಕ್ತರನ್ನಾಗಿ ನೇಮಿಸಿ ತನ್ನ ಕೆಲಸ ಮಾಡಿಕೊಳ್ಳುತ್ತಿದೆ. ಇಡೀ ದೇಶದಲ್ಲಿ ಬಡ ಜನರ, ದಲಿತರ ಮತಗಳನ್ನೇ ತೆಗೆದು ಹಾಕಲಾಗುತ್ತಿದೆ ಎಂದು ಟೀಕಿಸಿದರು.

ಜಿಲ್ಲಾ ಕಾಂಗ್ರೆಸ್​ನ ಎಸ್ಸಿ ಘಟಕ ಅಧ್ಯಕ್ಷ ಮಹಾಂತಪ್ಪ ಸಂಗಾವಿ ಮಾತನಾಡಿ, ಗೃಹ ಸಚಿವ ಅಮಿತ್​ ಷಾ ಅವರ ಅಣತಿಯಂತೆ ಚುನಾವಣೆ ಆಯೋಗ ಕೆಲಸ ಮಾಡುತ್ತಿದೆ. ಬಾಬಾ ಸಾಹೇಬ ಅಂಬೇಡ್ಕರ್​ ಅವರು ಪ್ರಜಾಸತಾತ್ಮಕವಾದ ಸಂವಿಧಾನ ನೀಡಿದ್ದಾರೆ. ಆದರೆ ಅಂತಹ ಸಂವಿಧಾನ ವಿರೋಧಿ ಕೆಲಸ ಬಿಜೆಪಿ ಮಾಡುತ್ತಿದೆ ದೂರಿದರು.

ಕೃಷಿಕ ಸಮಾಜದ ತಾಲೂಕು ಅಧ್ಯಕ್ಷ ಬಸವರಾಜ ರೇವಗೊಂಡ, ಮುಧೋಳ ಬ್ಲಾಕ್​ ಎಸ್ಸಿ ಟಕದ ಅಧ್ಯಕ್ಷ ಜೈಭೀಮ ಊಡಗಿ, ಸೇಡಂ ಬ್ಲಾಕ್​ ಎಸ್ಸಿ ಟಕದ ಅಧ್ಯಕ್ಷ ಜಗನ್ನಾಥ ಚಿಂತಪಳ್ಳಿ, ಯುವ ಟಕದ ತಾಲೂಕು ಉಪಾಧ್ಯಕ್ಷ ವಿಲಾಸಗೌತಂ ನಿಡಗುಂದಾ, ಪುರಸಭೆ ಮಾಜಿ ಸದಸ್ಯ ಹಾಜಿ ನಾಡೇಪಲ್ಲಿ ಮಾತನಾಡಿದರು.

ಕಾಂಗ್ರೆಸ್​ ವೀಕ್ಷಕ ಅನೀಲಕುಮಾರ ಜಮಾದರ, ಸೇಡಂ ಬ್ಲಾಕ್​ ಕಾಂಗ್ರೆಸ್​ ಅಧ್ಯಕ್ಷ ಶಿವಶರಣರೆಡ್ಡಿ ಪಾಟೀಲ್​, ಮುಧೋಳ ಬ್ಲಾಕ್​ ಅಧ್ಯಕ್ಷ ರವೀಂದ್ರ ನಂದಿಗಾಮ, ಪ್ರಮುಖರಾದ ಭೀಮಾಶಂಕರ ಕೊಳ್ಳಿ, ಮೋಹನರೆಡ್ಡಿ ರಂಜೋಳ, ವಿಶ್ವನಾಥ ಪಾಟೀಲ್​, ಜಗದೇವಪ್ಪ ಪಾಟೀಲ್​ ಕೊಂಕನಹಳ್ಳಿ, ಅಣವೀರಪ್ಪ ದೇಸಾಯಿ, ವೀರೇಂದ್ರ ರುದ್ನೂರ, ಸಿದ್ದಲಿಂಗರೆಡ್ಡಿ ಪಾಟೀಲ್​ ಕುರಕುಂಟಾ, ಸಂತೋಷ ಕುಲಕರ್ಣಿ, ಅಬ್ದುಲ್​ ಗಫೂರ, ವಿಶ್ವನಾಥ ಕೊಟಗಿ, ಹೇಮರೆಡ್ಡಿ ಕಲಕಂಭ, ಗುರುನಾಥರೆಡ್ಡಿ ಹೂಡಾ, ಮುರಳೀಧರರೆಡ್ಡಿ ಕೊಂತನಪಲ್ಲಿ, ಬಸವರಾಜ ಕಾಳಗಿ, ಅಶೋಕರೆಡ್ಡಿ ಕೆರಳ್ಳಿ, ಅಬ್ದುಲ್​ ಸತ್ತಾರ ನಾಡೇಪಲ್ಲಿ, ವೀರಣ್ಣಗೌಡ ರೆಮ್ಮಣ್ಣಿ, ಪ್ರಶಾಂತ ಸೇಡಂಕರ್​, ಅಶೋಕ ಮಹೇಂದ್ರಕರ್​, ರಾಮಲಿಂಗಪ್ಪ ಬೆನಕನಹಳ್ಳಿ, ವಿಜಯಕುಮಾರ ಶರ್ಮಾ, ಬಸಮ್ಮ ಪಾಟೀಲ್​, ಲಿಂಗರಾಜ ಕುರಕುಂಟಾ, ಮಾರುತಿ ಕೊಡಂಗಲ್​ಕರ್​, ಮೈನೋದ್ದಿನ್​ ಕಾಳಗಿ, ವಿಜಯಕುಮಾರ ಸಂಗಾವಿ, ಸತೀಶ ಪೂಜಾರಿ, ಲ್ಮಕಾಂತ ಕುಲಕರ್ಣಿ ಇತರರಿದ್ದರು.