ಕಲಬುರಗಿ: ನಗರದ ಜೇವರ್ಗಿ ಕಾಲನಿಯ ಕಾಪೋರ್ರೇಷನ್ ಲೇಔಟ್ನಲ್ಲಿ ನಿರ್ಮಿಸಿರುವ ಶ್ರೀ ಸಿದ್ರಾಮೇಶ್ವರ(ಭೋವಿ) ವಡ್ಡರ ಸಮುದಾಯ ಭವನ ಶ್ರೀ ಲೋಕಾರ್ಪಣೆ ಮಾಡಲಾಗುವುದು ಎಂದು ಸಮುದಾಯದ ಮುಖಂಡ ತಿಪ್ಪಣ್ಣ ಒಡೆಯರಾಜ ತಿಳಿಸಿದರು.
20214ರಲ್ಲಿ ನಡೆದಿದ್ದ ಜಿಲ್ಲಾ ಮಟ್ಟದ ಶ್ರೀ ಸಿದ್ರಾಮೇಶ್ವರ ಜಯಂತಿ ವೇಳೆ ಆಗ ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ರ್ಖಗೆ ಅವರಿಗೆ ಮನವಿ ಮಾಡಲಾಗಿತ್ತು. ಕಾರ್ಯಕ್ರಮಕ್ಕೆ ಹಾಜರಾಗದಿದ್ದರೂ ಒಂದು ವರ್ಷದಲ್ಲಿ 3.5 ಕೋಟಿ ರೂ. ಮಂಜೂರು ಮಾಡಿಸಿ, ಅರ್ಧ ಅನುದಾನ ಬಿಡುಗಡೆ ಮಾಡಿದ್ದರು. ನಂತರ ಕುಡಾದಿಂದ ಜೇವರ್ಗಿ ಕಾಲನಿಯ ಕಾಪೋರ್ರೇಷನ್ ಲೇಔಟ್ನಲ್ಲಿ ಭವ್ಯ ಸಮುದಾಯ ಭವನ ನಿರ್ಮಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಮೂರು ಸ್ತರದಲ್ಲಿ ನಿರ್ಮಾಣ ಮಾಡಿದ ಸಮುದಾಯ ಭವನ ಕೆಳಗಡೆ ವಾಹನ ಪಾರ್ಕಿಂಗ್, ಮೊದಲನೇ ಅಂತಸ್ತಿನಲ್ಲಿ ಊಟದ ಹಾಲ್ ಹಾಗೂ ಎರಡನೇ ಅಂತಸ್ತಿನಲ್ಲಿ ವಿಶಾಲ 500 ಜನರು ಪಾಲ್ಗೊಳ್ಳಬಹುದಾದ ಸಭಾಂಗಣ ನಿರ್ಮಿಸಲಾಗಿದೆ ಎಂದು ಹೇಳಿದರು.
ಉದ್ಘಾಟನೆಗೆ ಸಿದ್ಧತೆ ಪೂರ್ಣಗೊಂದಿದ್ದು, ಎಐಸಿಸಿ ಅಧ್ಯಕ್ಷ, ರಾಜ್ಯಸಭೆ ಪ್ರತಿ ಪಕ್ಷದ ನಾಯಕ ಮಲ್ಲಿಕಾರ್ಜುನ ರ್ಖಗೆರಿಂದ ಉದ್ಘಾಟಿಸಲು ಸಮುದಾಯದ ಜನರು ಉತ್ಸುಕರಾಗಿದ್ದು, ಅವರ ಜೂನ್ ಒಂದು, ಅಥವಾ ಎರಡನೇ ವಾರದಲ್ಲಿ ಸಮಯ ನೀಡುವುದಾಗಿ ತಿಳಿಸಿದ್ದು, ಬೃಹತ್ ಕಾರ್ಯಕ್ರಮದ ಮೂಲಕ ಉದ್ಘಾಟಿಸಲಾಗುವುದು ಎಂದು ಹೇಳಿದರು.
ಸಮುದಾಯದ ಈರಣ್ಣ ರಾವೂರಕರ, ರಾಜು ಧಾಬಿಮನಿ, ನಾಗೇಂದ್ರಪ್ಪ ದೊಡ್ಡಮನಿ, ಶ್ರೀನಿವಾಸ ದಂಡಗುಲಕರ್ ಇದ್ದರು.