ಕಲಬುರಗಿ ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಸೈಬರ್​ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಸಿಪಿಐ ರಾವೇಂದ್ರ ಭಜಂತ್ರಿ ಅವರನ್ನು ಸಂಸ್ಥೆ ಅಧ್ಯಕ್ಷ ಶರಣಬಸಪ್ಪ ಪಪ್ಪಾ ಸತ್ಕರಿಸಿದರು. ಶಿವರಾಜ ಇಂಗಿನಶೆಟ್ಟಿ, ಸಂದೀಪ ಮಿಶ್ರಾ, ಆನಂದ ಪಲ್ಲೋಡ್​ ಇತರರಿದ್ದರು. 
ಕಲಬುರಗಿ

ವಂಚನೆ ಪ್ರಕರಣಗಳಿಂದ ಜಾಗರೂಕರಾಗಿರಿ

ಕಲಬುರಗಿ: ನಗರದಲ್ಲಿ ಸೈಬರ್​ ಕೆಮ್​ಗಳಿಂದ ಸುಮಾರು 58 ಕೋಟಿ ರೂ. ಹಾಗೂ ಸಾಮಾನ್ಯ ಅಪರಾಧಗಳಲ್ಲಿ ಸುಮಾರು 2 ಕೋಟಿ ರೂ.ನಷ್ಟವಾಗಿದೆ. ಹೀಗಾಗಿ ನಾಗರಿಕರು ಸದಾ ಜಾಗರೂಕರಾಗಿ ಇರಬೇಕು ಎಂದು ಸಿಪಿಐ ರಾವೇಂದ್ರ ಭಜಂತ್ರಿ ಹೇಳಿದರು.

ಕಲ್ಯಾಣ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯಲ್ಲಿ ಗುರುವಾರ ಆಯೋಜಿಸಿದ್ದ ಸೈಬರ್​ ಅಪರಾಧ ಜಾಗೃತಿ ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿಯಾಗಿ ಮಾತನಾಡುತ್ತ ನಿವೃತ್ತ ನೌಕರರೊಬ್ಬರು 1.8 ಕೋಟಿ ರೂ. ಕಳೆದುಕೊಂಡಿರುವುದನ್ನು ಉದಾಹರಣೆ ನೀಡಿದ ಅವರು, ವ್ಯಾಪಾರಸ್ಥರು, ಸರ್ಕಾರಿ ನೌಕರರು ಹಾಗೂ ನಿವೃತ್ತರು ಇಂತಹ ವಂಚನೆಗಳಿಗೆ ಒಳಗಾಗುತ್ತಿದ್ದಾರೆ. ಆನ್​ಲೈನ್​ ವಂಚಕರನ್ನು ಪತ್ತೆ ಹಚ್ಚುವುದು ಹಾಗೂ ಹಣ ಮರಳಿ ಪಡೆಯುವುದು ಕಷ್ಟವಾಗಿದ್ದರಿಂದ ಮುನ್ನೆಚ್ಚರಿಕೆ ಅಗತ್ಯ ಎಂದರು.

ಹೆಚ್ಚಿನ ಲಾಭದ ಆಮಿಷವೊಡ್ಡುವ ನಕಲಿ ಹೂಡಿಕೆ ಆ್ಯಪ್​, ವಾಟ್ಸ್​ಆ್ಯಪ್​ ಮತ್ತು ಟೆಲಿಗ್ರಾಂ ಗ್ರೂಪ್​, ನಕಲಿ ಉದ್ಯೋಗ ಹಾಗೂ ಮನೆಯಿಂದಲೇ ಕೆಲಸದ ಆಫರ್​ಗಳ ಬಗ್ಗೆ ಎಚ್ಚರ ವಹಿಸಬೇಕು. ಹೂಡಿಕೆ ಆರಂಭದಲ್ಲಿ ಲಾಭ ಬಂದಂತೆ ತೋರಿಸಿ ನಂತರ ಹಣ ಪಡೆಯಲು ತೆರಿಗೆ ಅಥವಾ ಶುಲ್ಕದ ಹೆಸರಿನಲ್ಲಿ ಮತ್ತೆ ಮತ್ತೆ ಹಣ ಕೇಳುತ್ತಾರೆ. ಇಂತಹ ಆಮಿಷಗಳಿಗೆ ಒಳಗಾಗಬಾರದು. ಒಟಿಪಿ, ಪಿನ್​ ಅಥವಾ ಪಾಸ್​ವರ್ಡ್​ ಯಾರೊಂದಿಗೂ ಹಂಚಿಕೊಳ್ಳಬಾರದು ಎಂದು ಸಲಹೆ ನೀಡಿದರು.

ಡಿಜಿಟಲ್​ ಅರೆಸ್ಟ್​ ಹೆಸರಲ್ಲಿ ಪೊಲೀಸ್​ ಇತರ ಇಲಾಖೆ ಅಧಿಕಾರಿಗಳಂತೆ ಕರೆ ಮಾಡಿ ಸುಳ್ಳು ಆರೋಪ ಹೊರಿಸಿ ಹಣ ಕೇಳುವ ಪರಿಪಾಠ ಬೆಳೆದಿದೆ. ಭಾರತದಲ್ಲಿ ಡಿಜಿಟಲ್​ ಅರೆಸ್ಟ್​ ಎಂಬ ಕಾನೂನು ವ್ಯವಸ್ಥೆಯೇ ಇಲ್ಲ. ಇಂತಹ ಕರೆಗಳಿಗೆ ಹೆದರಿ ಹಣ ಕಳುಹಿಸಬಾರದು ಎಂದು ಮನವಿ ಮಾಡಿದರು.

ಸೈಬರ್​ ವಂಚನೆಯಿಂದ ಹಣ ಕಳೆದುಕೊಂಡರೆ ತಣ ಬ್ಯಾಂಕ್​ಗೆ ಮಾಹಿತಿ ನೀಡಿ 1930ಕ್ಕೆ ಕರೆ ಮಾಡಬೇಕು ಅಥವಾ ದೂರು ದಾಖಲಿಸಬೇಕು. ಬೇಗ ದೂರು ನೀಡಿದಷ್ಟು ಹಣದ ವರ್ಗಾವಣೆ ತಡೆಗೆ ಪ್ರಯತ್ನಿಸಲು ಸಾಧ್ಯವಾಗಲಿದೆ. ವ್ಯವಹಾರದ ಸಂಖ್ಯೆ, ಯುಟಿಆರ್​ ಸಂಖ್ಯೆ, ಸ್ಕ್ರೀನ್​ಶಾಟ್​, ಮೊಬೈಲ್​ ಸಂಖ್ಯೆ ಹಾಗೂ ಸಂದೇಶ ಸ್ಯಾವಾಗಿ ಉಳಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಸಂಸ್ಥೆ ಅಧ್ಯ ಶರಣಬಸಪ್ಪ ಪಪ್ಪಾ ಅಧ್ಯತೆ ವಹಿಸಿದ್ದರು. ಕಾರ್ಯದರ್ಶಿ ಶಿವರಾಜ ಇಂಗಿನಶೆಟ್ಟಿ, ಸಿಎ ಸಂದ ಆನಂದ ಪಲ್ಲೋಡ್​, ಸುನೀಲ ಲೋಢಾ, ರಿತೇಶ ಗಾಂಧಿ, ಕಿರಾಣಿ ವ್ಯಾಪಾರಸ್ಥರ ಸಂದ ರವೀಂದ್ರ ಮಾದಮಶೆಟ್ಟಿ, ಸರಾಫ್​ ಬಜಾರ್​ ಕಾರ್ಯದರ್ಶಿ ಶಾಮ ಪಾವಸ್ಕರ್​, ಪ್ರವಿಣ ಸೇಠಿಯಾ, ಕೆಕೆಸಿಸಿಐ ಉಪಾಧ್ಯ ಕೇದಾರ ರಾೂಜಿ, ಜಂಟಿ ಕಾರ್ಯದರ್ಶಿ ಗಿರೀಶ ಅಣಕಲ್​, ಅಭಿಜಿತ್​ ಪಡಶೆಟ್ಟಿ, ರಾಹುಲ್​ ತೆಂಗಳಿ, ಆಲೂರಿ ವೆಂಕಟ, ಜಗದೀಶ ಪಾಟೀಲ್​, ನಾಗರಾಜ ರೇಶ್ಮಿ, ಲಿಂಗರಾಜ ಭಾವಿಕಟ್ಟಿ, ಸಂತೋಷ ನಂದ್ಯಾಳ, ಸಿದ್ದು ಶೆಳ್ಳಗಿ, ಸದಾನಂದ ಪಟ್ಟಣಶೆಟ್ಟಿ, ಆಕಾಶ ತೊನಸನಹಳ್ಳಿ ಪಾಲ್ಗೊಂಡಿದ್ದರು. ನಾಗರಿಕ ಮತ್ತು ಗ್ರಾಹಕ ವ್ಯವಹಾರಗಳ ಉಪಸಮಿತಿ ಅಧ್ಯ ಸಂದೀಪ ಮಿಶ್ರಾ ವಂದಿಸಿದರು.

ಸಾಮಾಜಿಕ ಜಾಲತಾಣಗಳಲ್ಲಿ ವೈಯಕ್ತಿಕ ಮಾಹಿತಿ ಅಥವಾ ಖಾಸಗಿ ಫೋಟೋ, ವಿಡಿಯೊಗಳನ್ನು ಹಂಚಿಕೊಳ್ಳಬಾರದು. ನಕಲಿ ಖಾತೆ ಹಾಗೂ ಅಪರಿಚಿತರ ಬಗ್ಗೆ ಜಾಗರೂಕರಾಗಿರಬೇಕು. ಫೋಟೋ ಅಥವಾ ವಿಡಿಯೊ ಹರಿಬಿಡುವುದಾಗಿ ಬೆದರಿಸಿ ಹಣ ಕೇಳಿದರೆ ನೀಡದೆ ಸಾಕ್ಷ ಉಳಿಸಿಕೊಂಡು ದೂರು ನೀಡಬೇಕು.
> ರಾವೇಂದ್ರ ಭಜಂತ್ರಿ ಸಿಪಿಐ ಕಲಬುರಗಿ