ಬಸವರಾಜ ಬೊಮ್ಮಾಯಿ 
ಕಲಬುರಗಿ

ದ್ವೇಷ ಭಾಷಣ ಕಾಯ್ದೆ: ಇದೊಂದು ಧಮನಕಾರಿ ಕಾನೂನು

ಕಲಬುರಗಿ: ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಬೆಳಗಾವಿ ಅಧಿವೇಶನದಲ್ಲಿ ಜಾರಿಗೆ ತಂದಿರುವ ದ್ವೇಷ ಭಾಷಣದ ಕಾಯ್ದೆ, ಇದೊಂದು ದಮನಕಾರಿ (ಕಾಯ್ದೆ)ಕಾನೂನಾಗಿದೆ ಎಂದು ಮಾಜಿ ಮುಖ್ಯಮಂತ್ರಿ,ಸಂಸದ ಬಸವರಾಜ ಬೊಮ್ಮಾಯಿ ಹೇಳಿದರು.
ನಗರದ ಐವನ್ ಇ ಶಾಹಿ ಅತಿಥಿ ಗೃಹದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು,ದ್ವೇಷ ಭಾಷಣ ಏನು ಎನ್ನುವುದು ಸರ್ಕಾರ ಬಹಳ ದೊಡ್ಡ ಪ್ರಮಾಣದಲ್ಲಿ ವ್ಯಾಖ್ಯಾನಿಸಿದೆ.ಹೀಗಾಗಿ ಯಾರನ್ನು ಯಾವಾಗ ಬೇಕಾದರೂ ಒಳಗೆ ಹಾಕುವಂತ ಕಾನೂನು ಇದಾಗಿದೆ.ವ್ಯಕ್ತಿಯ ಸ್ವಾತಂತ್ರ್ಯ,ಅಭಿವ್ಯಕ್ತಿ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಕೆಲಸ ಸರ್ಕಾರ ಮಾಡಿದ್ದು,ಈಗಾಗಲೇ ಬಿಎನ್ಎಸ್ ಕಾಯ್ದೆಯಡಿ ಇದು ಇದೆ.ವಿಶೇಷ ಕಾನೂನು ತರುವ ಅಗತ್ಯವೇನಿತ್ತು ಎಂದು ಪ್ರಶ್ನಿಸಿದ ಅವರು,ಸರಕಾರದ ನೀತಿ ಹಾಗೂ ನಿಯತ್ತಿನ ಮೇಲೆ ಸಂಶಯ ಮೂಡುತ್ತಿದೆ ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದ ಮೇಲೆ ಎಲ್ಲಾ ರಂಗಗಳಲ್ಲೂ ವಿಫಲವಾಗಿದೆ.ಯಾವುದೇ ಅಭಿವೃದ್ಧಿ ಕಾರ್ಯ ನಡೆಯುತ್ತಿಲ್ಲ.ಸ್ವತ ಕಾಂಗ್ರೆಸ್ ಶಾಸಕರೇ ಅಭಿವೃದ್ಧಿಗಳು ನಡೆಯುತ್ತಿಲ್ಲ ಎಂಬ ಹೇಳಿಕೆ ನೀಡುತ್ತಿದ್ದಾರೆ.ಹಳ್ಳಿಯಿಂದ ವಿಧಾನಸೌಧದವರೆಗೂ ಭ್ರಷ್ಟಾಚಾರ ನಡೆಯುತ್ತಿದೆ. ಆರ್ಥಿಕವಾಗಿ ಸರ್ಕಾರ ಸಂಪೂರ್ಣ ದಿವಾಳಿಯಾಗಿದೆ.ರಾಜ್ಯದ ಸಮಗ್ರ ಅಭಿವೃದ್ದಿಗಾಗಿ ಕಿಂಚಿತ್ತೂ ಸರಕಾರಕ್ಕೆ ಕಾಳಜಿಯಿಲ್ಲ ಎಂದು ಹೇಳಿದರು.
ದಿನಬೆಳಗಾದರೇ ೨೪ ಗಂಟೆ ಕುರ್ಚಿಯ ಕಿತ್ತಾಟ ಜೋರಾಗಿ ನಡೆದಿದೆ.ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿನಲ್ಲಿ ಈ ಸಮಸ್ಯೆ ಹೈಕಮಾಂಡ್ ಬಗೆಹರಿಸಲಿದೆ ಎಂದು ಹೇಳಿ,ಇದೀಗ ನಿನ್ನೆ ಕಲಬುರಗಿಯಲ್ಲಿ ಈ ಸಮಸ್ಯೆ ಹೈಕಮಾಂಡ್ ಸೃಷ್ಟಿ ಮಾಡಿಲ್ಲ.ಇಲ್ಲೆ ಸೃಷ್ಟಿಯಾಗಿದೆ ಎಂಬ ಮಾತು ಹೇಳಿದ್ದಾರೆ.ಕಾಂಗ್ರೆಸ್ ಹೈಕಮಾಂಡ್ ಹೈಕಮಾಂಡ್ ಆಗಿ ಉಳಿದಿಲ್ಲ.ಎರಡು ಭಾಗವಾಗಿವೆ ಎಂದ ಅವರು,ಆಗಿರುವ ಗೊಂದಲಕ್ಕೆ ಹೈಕಮಾಂಡ್ ಪಾತ್ರ ಕೂಡ ಇದೆ ಎಂದರು.
ಬಿಜೆಪಿ ರಾಜ್ಯಾಧ್ಯಕ್ಷರ ಬದಲಾವಣೆ ವಿಚಾರವಾಗಿ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು,ನಮ್ಮಲ್ಲಿ ಯಾವುದೇ ಗೊಂದಲವಿಲ್ಲ. ಹಳೆ ಬೇರು ಹೊಸ ಚಿಗುರು ಎಲ್ಲವೂ ಜೊತೆಯಲ್ಲಿ ಕೆಲಸ ಮಾಡಿಕೊಂಡು ಹೋಗುತ್ತಿದ್ದೇವೆ.ಬಿನ್ನರ ಬಣ ಅವರು ಸಹ ರಾಜ್ಯ ಬಿಜೆಪಿಯಲ್ಲಿ ಎಲ್ಲರನ್ನೂ ಒಟ್ಟಿಗೆ ತೆಗೆದುಕೊಂಡು ಹೋಗುವ ಸಲುವಾಗಿ ಕೆಲಸ ಮಾಡುತ್ತಿದ್ದಾರೆ.ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಅಷ್ಟು ಅಧಿಕಾರವಿದೆ ಎಂದರು.
ವಿಕಸಿತ ಭಾರತಕ್ಕೆ ಜೋಡಿಸುವ ಪ್ರಾಯಶಃ ಬಂದಿದ್ದಕ್ಕೆ ಮನರೇಗಾಗೆ ಜಿ ರಾಮ್ ಜಿ ಹೆಸರಿಡಲಾಗಿದೆ.ಯಾಕೆ ಕಾಂಗ್ರೆಸ್ ಪಕ್ಷ ಗಾಂಧಿ ಮತ್ತು ರಾಮನನ್ನು ಬೇರೆ ಬೇರೆ ಮಾಡಲು ಹೊರಟಿದೆ.ಇಬ್ಬರು ಬೇರೆಯಲ್ಲ.ಗಾಂಧಿಯ ಆತ್ಮದಲ್ಲಿ ರಾಮನಿದ್ದಾನೆ.ಹೀಗಾಗಿ ಮನರೇಗಾಗೆ ರಾಮನ ಹೆಸರಿಡಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ಶಾಸಕ ಬಸವರಾಜ ಮತ್ತಿಮಡು,ಮಾಜಿ ಸಂಸದರು,ಜಿಲ್ಲಾಧ್ಯಕ್ಷರು ಇದ್ದರು.